ನನ್ಗೆ ಆ ಹುಡುಗ ಬೇಡ, ನಾನ್ ಅವನ ಜೊತೆ ಕೂರಲ್ಲ; ಸ್ಟೇಜ್ ಮೇಲೆ ಅಳುತ್ತಾ ನಿಂತ ಪುಟ್ಟ ಪೋರಿ
ಪ್ರತಿನಿತ್ಯ ಸೋಷಿಯಲ್ ಮೀಡಿಯಾದಲ್ಲಿ ಹಲವಾರು ಬಗೆಯ ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯಗಳು ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಬಾಲಕಿಯೊಬ್ಬಳು ಅವ ಮದುಮಗ ಬೇಡ, ನಾನ್ ಅವನ ಜೊತೆ ಕೂರಲ್ಲ ಎನ್ನುತ್ತಾ ಅಳುತ್ತಾ ಸ್ಟೇಜ್ ಮೇಲೆ ಬಿದ್ದು ಹೊರಳಾಡಿ, ಕೊನೆಗೆ ಪರ್ಫಾರ್ಮೆನ್ಸ್ ನೀಡದೆ ವಾಪಸ್ ಹೋಗಿದ್ದಾಳೆ. ಈ ಫನ್ನಿ ದೃಶ್ಯವನ್ನು ನೋಡಿ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಶಾಲಾ ಕಾರ್ಯಕ್ರಮಗಳಲ್ಲಿ ಪುಟ್ ಪುಟಾಣಿ ಮಕ್ಕಳ ಹಾಡು, ಕುಣಿತ, ಡ್ಯಾನ್ಸ್ ನೋಡೋದೇ ಒಂದು ಚೆಂದ. ಸ್ಟೇಜ್ ಮೇಲೆ ಕೆಲ ಮಕ್ಕಳು ಮುದ್ದು ಮುದ್ದಾಗಿ ಡ್ಯಾನ್ಸ್ ಮಾಡೋದನ್ನು ನೋಡೋದು ಒಂದು ಖುಷಿ ಆದ್ರೆ, ಇನ್ನೊಂದು ಕಡೆ ಕೆಲ ಮಕ್ಕಳು ನಾನ್ ಡ್ಯಾನ್ಸ್ ಮಾಡಲ್ಲ ಎಂದು ಅಳುತ್ತಾ ನಿಲ್ಲುವುದು ಆಗಿರ್ಬೋದು ಅಥವಾ ತಂದೆ ತಾಯಿಯನ್ನು ಕಂಡು ಹಾಯ್ ಮಾಡುತ್ತಾ ನಿಲ್ಲುವಂತ ದೃಶ್ಯವನ್ನು ನೋಡೋದು ಕೂಡಾ ಒಂಥರಾ ಚೆಂದ. ಇದೀಗ ಅಂತಹದ್ದೇ ಮುದ್ದಾದ ದೃಶ್ಯವೊಂದು ವೈರಲ್ ಆಗಿದ್ದು, ಬಾಲಕಿಯೊಬ್ಬಳು ಅವ ಮದುಮಗ ಬೇಡ, ನಾನ್ ಅವನ ಜೊತೆ ಕೂರಲ್ಲ, ನನ್ನನ್ನು ಒತ್ತಾಯ ಮಾಡ್ಬೇಡಿ ಎನ್ನುತ್ತಾ ಅಳುತ್ತಾ ಸ್ಟೇಜ್ ಮೇಲೆ ಬಿದ್ದು ಹೊರಳಾಡಿ, ಕೊನೆಗೆ ಪರ್ಫಾರ್ಮೆನ್ಸ್ ನೀಡದೆ ವಾಪಸ್ ಹೋಗಿದ್ದಾಳೆ. ಈ ಫನ್ನಿ ದೃಶ್ಯವನ್ನು ನೋಡಿ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಶಾಲಾ ಕಾರ್ಯಕ್ರಮದಲ್ಲಿ ಬಾಲಕಿಯೊಬ್ಬಳು ಸ್ಟೇಜ್ ಮೇಲೆ ಮದುಮಗನ ವೇಷ ಧರಿಸಿ ಕುಳಿತಿದ್ದ ಹುಡುಗನನ್ನು ಕಂಡು ಅವ ಮದುಮಗ ನನ್ಗೆ ಬೇಡ ಎನ್ನುತ್ತಾ ಪುಟ್ಟ ಪೋರಿಯೊಬ್ಬಳು ಸ್ಟೇಜ್‌ನಿಂದ ಸೀದಾ ವಾಪಸ್ ಹೋಗಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
Byari_rockers_ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಆ ಮದುಮಗ ನನಗೆ ಬೇಡ ಟೀಚರ್” ಎಂಬ ತಮಾಷೆಯ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪುಟ್ಟ ಬಾಲಕಿಯೊಬ್ಬಳು ಅಳುತ್ತಾ ಸ್ಟೇಜ್ ಮೇಲೆಯೇ ಬಿದ್ದು ಹೊರಳಾಡುತ್ತಿರುವ ದೃಶ್ಯವನ್ನು ಕಾಣಬಹುದು. ಮದುಮಗನ ವೇಷ ಧರಿಸಿ ಸ್ಟೇಜ್ ಮೇಲೆ ಕುಳಿತಿದ್ದ ಬಾಲಕನನ್ನು ಕಂಡು ಪುಟ್ಟ ಪೋರಿಯೊಬ್ಬಳು ಅವ ಹುಡುಗ ನನಗೆ ಬೇಡ ಎಂದು ಅಳುತ್ತಾ ನಿಂತಿದ್ದು, ಟೀಚರ್ ಹೋಗಮ್ಮ ಅವನ ಪಕ್ಕ ಕೂರು ಎಂದು ಹೇಳಿದರೂ ಅವರ ಮಾತನ್ನೇ ಕೇಳದ ಬಾಲಕಿ ನನಗೆ ಒತ್ತಾಯ ಮಾಡ್ಬೇಡಿ ಎನ್ನುತ್ತಾ ಸೀದಾ ಹೋಗಿದ್ದಾಳೆ.
ಇದನ್ನೂ ಓದಿ: ಪ್ರಯಾಗ್‌ರಾಜ್‌ಗೆ ಭೇಟಿ ನೀಡದೆ ಮನೆಯಲ್ಲಿಯೇ ಕುಳಿತು ಕೇವಲ 500 ರೂ. ಗೆ ಪವಿತ್ರ ಸ್ನಾನ ಮಾಡಿ; ಜಾಹೀರಾತು ವೈರಲ್
ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 57 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಬಹುಶಃ ಇದು ಅರೇಂಜ್ ಮ್ಯಾರೇಜ್ ಆಗಿರ್ಬೇಕುʼ ಎಂದು ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಹೌದು ಹೌದು ಆ ಪುಟಾಣಿಗೆ ಒತ್ತಾಯ ಮಾಡ್ಬೇಡಿʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ತಮಾಷೆಯ ದೃಶ್ಯವನ್ನು ಕಂಡು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:45 pm, Wed, 19 February 25




