
ಮಹಾರಾಷ್ಟ್ರ, ಏಪ್ರಿಲ್ 4: ಜನರೇ ಹಾಗೆ, ಯಾವಾಗ ಹೇಗೆ ಇರುತ್ತಾರೆ ಎಂದು ಹೇಳುವುದು ಕಷ್ಟ. ಕೆಲವರಂತೂ ಸಣ್ಣ ಪುಟ್ಟ ವಿಷಯಗಳನ್ನು ದೊಡ್ಡದು ಮಾಡಿ ಜಗಳ (fight)ಕ್ಕೆ ಇಳಿಯುವುದನ್ನು ನೋಡಬಹುದು. ಕೆಲವೊಮ್ಮೆ ಕೋಪದ ಕೈಗೆ ಬುದ್ಧಿಕೊಟ್ಟು ನಾವು ಏನು ಮಾಡ್ತೀವಿ ಅನ್ನೋದ್ದನ್ನು ಮರೆತೇ ಬಿಡುತ್ತಾರೆ. ಈ ರೀತಿ ಜಗಳ ಮಾಡಲು ಹೋಗಿ ಅವಾಂತರಗಳನ್ನು ಮಾಡಿಕೊಳ್ಳುವವರು ಇದ್ದಾರೆ. ಇದೀಗ ವೈರಲ್ ವಿಡಿಯೋ (video) ದಲ್ಲಿ ನೆರಹೊರೆಯ ಎರಡು ಮನೆಯ ಸದಸ್ಯರ ನಡುವೆ ಭೀಕರ ಜಗಳವು ಏರ್ಪಟ್ಟಿದೆ. ಆದರೆ ಈ ಕಾಳಗದ ನಡುವೆ ಮನೆಯ ಮೇಲ್ಛಾವಣಿ (roof) ಯೇ ಕುಸಿದು ಬಿದ್ದಿದ್ದು, ಇದರ ಪರಿಣಾಮ ನಿಂತಿದ್ದ ಜನರು ಕೂಡ ದೊಪ್ಪನೆ ಕೆಳಗೆ ಬಿದ್ದಿದ್ದಾರೆ. ಈ ಘಟನೆಯೂ ಮಹಾರಾಷ್ಟ್ರ (Maharastra) ದ ಭಿವಂಡಿ (Bhiwandi) ಯಲ್ಲಿ ನಡೆದಿದೆ ಎನ್ನಲಾಗಿದೆ. ನೆಟ್ಟಿಗರು ಈ ವಿಡಿಯೋಗೆ ತಮಾಷೆಯಾಗಿಯೇ ಕಾಮೆಂಟ್ ಮಾಡಿದ್ದಾರೆ.
ಈ ವಿಡಿಯೋವನ್ನು @gharkekalesh ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ‘ಗಲಭೆಯ ವೇಳೆ ಜನರು ಮನೆಯ ಛಾವಣಿಯಿಂದ ಕೆಳಗೆ ಬಿದ್ದ ಘಟನೆಯೂ ಮಹಾರಾಷ್ಟ್ರದ ಭಿವಂಡಿಯಲ್ಲಿ ನಡೆದಿದೆ’ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಏಳರಿಂದ ಎಂಟು ಜನರು ಮನೆಯ ಮೇಲ್ಛಾವಣಿಯ ಮೇಲೆ ನಿಂತು ಜಗಳವಾಡುತ್ತಿದ್ದಾರೆ. ಅಲ್ಲೇ ಇದ್ದ ಮುಸ್ಲಿಂ ಮಹಿಳೆಯರು ಕೂಡ ಪುರುಷರ ಕಾಲರ್ ಹಿಡಿದು ಎಳೆದಾಡುತ್ತಿದ್ದಾರೆ. ಈ ಹೊಡೆದಾಟ ವೇಳೆ ಮೇಲ್ಛಾವಣಿಯೇ ಕುಸಿದು ಬಿದ್ದ ಪರಿಣಾಮ ಎಲ್ಲರೂ ಕೆಳಗೆ ಬಿದ್ದಿದ್ದಾರೆ. ಕ್ಷಣಾರ್ಧದಲ್ಲಿ ಜಗಳವೇ ನಿಂತು ಹೋಗಿದೆ.
ಇದನ್ನೂ ಓದಿ: ಎಷ್ಟೇ ಪ್ರಯತ್ನ ಪಟ್ರು ಕೆಲಸನೇ ಸಿಗ್ತಿಲ್ಲ, ನಿರಾಸೆಯಲ್ಲೇ ತನ್ನ ಶ್ರದ್ಧಾಂಜಲಿ ಪೋಸ್ಟ್ ಹಂಚಿಕೊಂಡ ಯುವಕ
Scary😨(Group of People fell from the Roof while having Kalesh) Bhiwandi MH
pic.twitter.com/Yo6Vw5CiFq— Ghar Ke Kalesh (@gharkekalesh) April 2, 2025
ಈ ವಿಡಿಯೋವು ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಬಳಕೆದಾರರೊಬ್ಬರು, ‘ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ಅವರನ್ನು ಮುಂದಿನ ಹಂತಕ್ಕೆ ಬಡ್ತಿ ಮಾಡಲಾಗಿದೆ’ ಎಂದು ತಮಾಷೆಯಾಗಿ ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು, ‘ಮಧ್ಯಸ್ಥರ ಅವಶ್ಯಕತೆಯಿಲ್ಲದೇ ಈ ಜಗಳ ಸುಲಭವಾಗಿಯೇ ಬಗೆಹರಿಯಿತು’ ಎಂದಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:39 am, Sat, 5 April 25