
ಮಲೇಷ್ಯಾ, ಜುಲೈ 10: ಕಠಿಣ ಕಾನೂನುಗಳಿದ್ದರೂ ಮಹಿಳೆಯರು, ಹೆಣ್ಣುಮಕ್ಕಳ ಮೇಲಾಗುವ ದೌರ್ಜನ್ಯಗಳು ಕಡಿಮೆಯಾಗುತ್ತಿಲ್ಲ. ಕೆಲವರು ಈ ಬಗ್ಗೆ ಧ್ವನಿ ಎತ್ತುತ್ತಾರೆ, ಇನ್ನು ಕೆಲವರು ಎಲ್ಲವನ್ನು ಸಹಿಸಿಕೊಂಡು ಹೋಗುತ್ತಾರೆ. 2021ರ ಮಿಸ್ ಗ್ರ್ಯಾಂಡ್ ಮಲೇಷ್ಯಾ ವಿಜೇತೆ ಲಿಶಲ್ಲಿನಿ ಕನರನ್ (Lishalliny Kanaran) ಅವರು ಅರ್ಚಕರೊಬ್ಬರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಕೌಲಾಲಂಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿರುವ ಸೆಪಾಂಗ್‌ನಲ್ಲಿರುವ ಮಾರಿಯಮ್ಮನ್ ದೇವಾಲಯದಲ್ಲಿ (Mariamman Temple in Sepang) ಕಳೆದ ಶನಿವಾರ ಈ ಘಟನೆ ನಡೆದಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯಲ್ಲಿ ತಿಳಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ನಟಿಯೂ ಈ ಬಗ್ಗೆ ಹಂಚಿಕೊಂಡಾಗ ಈ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಸದ್ಯ ಭಾರತೀಯ ಅರ್ಚಕನಿಗಾಗಿ ಮಲೇಷ್ಯಾ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಭಾರತದ ಪ್ರಜೆಯಾಗಿರುವ ಅರ್ಚಕರೊಬ್ಬರು ಭಾರತದ ಪವಿತ್ರ ನೀರು ಎಂದು ಹೇಳಿಕೊಂಡು ತನ್ನ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ. ಹೌದು, ಭಾರತೀಯ ಮೂಲದ ನಟಿ ಲಿಶಲ್ಲಿನಿ ಕನರನ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಜೂನ್ 21 ರಂದು ತನ್ನ ತಾಯಿ ಭಾರತದಲ್ಲಿದ್ದ ಕಾರಣ, ತಾನು ಒಬ್ಬಂಟಿಯಾಗಿ ದೇವಸ್ಥಾನಕ್ಕೆ ಹೋಗಿದ್ದೆ. ನಾನು ಇದೆಲ್ಲದಕ್ಕೂ ಹೊಸಬಳಾಗಿರುವುದರಿಂದ ಅಲ್ಲಿ ಒಬ್ಬ ಪುರೋಹಿತರು ಸಾಮಾನ್ಯವಾಗಿ ನನಗೆ ಆಚರಣೆಗಳ ಮೂಲಕ ಮಾರ್ಗದರ್ಶನ ನೀಡುತ್ತಿದ್ದರು.
ನನಗೆ ಹೆಚ್ಚು ತಿಳಿದಿಲ್ಲ, ಹೀಗಾಗಿ ನಾನು ಯಾವಾಗಲೂ ಅವರ ಸಹಾಯವನ್ನು ಕೃತಜ್ಞತೆಯಿಂದ ಸ್ವೀಕರಿಸಿದ್ದೇನೆ. ಆದರೆ ಆ ದಿನ, ನಾನು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವಾಗ ನನ್ನ ಬಳಿಗೆ ಬಂದು ನನಗೆ ಕಟ್ಟಲು ರಕ್ಷಣಾತ್ಮಕ ದಾರವಿದೆ ಹಾಗೂ ಪವಿತ್ರ ನೀರು ಇದೆ ಇದನ್ನು ಕೊಡುವುದಾಗಿ ಹೇಳಿದರು.ಆ ಬಳಿಕ ತನ್ನನ್ನು ಭೇಟಿಯಾಗಲು ಹೇಳಿದ್ದು, ಒಂದು ಗಂಟೆಗಳ ಕಾಲ ಕಾದ ಬಳಿಕ ತನ್ನ ಕಚೇರಿಗೆ ಬರಲು ಹೇಳಿ, ಅಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹೇಳಿದ್ದಾರೆ.
ಪ್ರಾರಂಭದಲ್ಲಿ “ತುಂಬಾ ಪವಿತ್ರ ಹಾಗೂ ಸುವಾಸನೆಯುಕ್ತ ನೀರನ್ನು ತನ್ನ ಕಣ್ಣಿಗೆ ಮುಟ್ಟಿಸಿ ಆ ಬಳಿಕ ನನ್ನ ಎದೆಯನ್ನು ಮುಟ್ಟಲು ಪ್ರಾರಂಭಿಸಿದರು. ಬಟ್ಟೆ ಬಿಚ್ಚಲು ಹೇಳಿದ್ದು, ನಾನು ಇದನ್ನು ನಿರಾಕರಿಸಿದ್ದಕ್ಕೆ ಬಿಗಿಯಾದ ಬಟ್ಟೆಗಳನ್ನು ಧರಿಸಿದ್ದಕ್ಕಾಗಿ ಗದರಿದರು. ತನ್ನ ಜೊತೆಗೆ ಅನುಚಿತವಾಗಿ ವರ್ತಿಸಿದ್ದು ಏನೋ ತಪ್ಪಾಗುತ್ತಿದೆ ಎಂದು ತಿಳಿದಿದ್ದರೂ ಆ ಬಗ್ಗೆ ನನಗೆ ಧ್ವನಿ ಎತ್ತಲು ಸಾಧ್ಯವಾಗಲಿಲ್ಲ. ಮಾತನಾಡದೇ ಯಾಕೆ ಸುಮ್ಮನಿದ್ದೆ ಎಂದು ನನಗೆ ಏಕೆ ಎಂದು ಅರ್ಥವಾಗುತ್ತಿಲ್ಲ, ನಾನು ಈ ಘಟನೆ ತನಗೆ ಅಸಹ್ಯ ಮತ್ತು ಆಘಾತವನ್ನುಂಟು ಮಾಡಿದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : Video : ರೈಲ್ವೆ ಹಳಿ ಮೇಲೆ ಮರಿಗೆ ಜನ್ಮ ನೀಡಿದ ಆನೆ : ಎರಡು ಗಂಟೆಗಳ ಕಾಲ ಸ್ಥಗಿತಗೊಂಡ ರೈಲು
ಜುಲೈ 4 ರಂದು ಅರ್ಚಕರ ವಿರುದ್ಧ ಅವರು ಪೊಲೀಸ್ ದೂರು ದಾಖಲಿಸಿರುವ ಮಾಡೆಲ್ ಲಿಶಲ್ಲಿನಿ ಕನರನ್ ಅವರು ಅರ್ಚಕರು ಈಗಾಗಲೇ ಪರಾರಿಯಾಗಿದ್ದಾರೆ. ಇದೇ ವಿಷಯಕ್ಕಾಗಿ ಯಾರೋ ಈಗಾಗಲೇ ಅವರ ಮೇಲೆ ದೂರು ನೀಡಿದ್ದರು, ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ದೇವಾಲಯದ ಆಡಳಿತ ಮಂಡಳಿಯು ತನಗೆ ಸಹಾಯ ಮಾಡುವ ಬದಲು ತಮ್ಮ ಹೆಸರನ್ನು ಉಳಿಸಿಕೊಳ್ಳಲು ಮಾಡಿರುವ ಕೃತ್ಯವನ್ನು ಆರೋಪಿಸಿದ್ದಾರೆ.
ಸೆಪಾಂಗ್ ಜಿಲ್ಲಾ ಪೊಲೀಸ್ ಮುಖ್ಯಸ್ಥ ನೋರ್ಹಿಜಮ್ ಬಹಮಾನ್ ಅವರ ಪ್ರಕಾರ, ಆರೋಪಿ ಭಾರತೀಯ ಪ್ರಜೆಯಾಗಿದ್ದು, ದೇವಾಲಯದ ಸ್ಥಳೀಯ ಅರ್ಚಕರ ಅನುಪಸ್ಥಿತಿಯಲ್ಲಿ ತಾತ್ಕಾಲಿಕವಾಗಿ ದೇವಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಆರೋಪಿಯೂ ಸಂತ್ರಸ್ತೆಯ ಮುಖ ಮತ್ತು ದೇಹದ ಮೇಲೆ ಪವಿತ್ರ ನೀರನ್ನು ಸಿಂಪಡಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಸದ್ಯಕ್ಕೆ ಭಾರತೀಯ ಅರ್ಚಕನಿಗಾಗಿ ಮಲೇಷ್ಯಾ ಪೊಲೀಸರು ಹುಡುಕಾಟ ಆರಂಭಿಸಿದ್ದು ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತನಿಖೆ ಮುಂದುವರೆದಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:02 pm, Thu, 10 July 25