Viral : ರಜೆ ದಿನ ಕೂಡ ನೆಮ್ಮದಿಯಾಗಿ ಇರೋಕೆ ಬಿಡಲ್ಲ ನಮ್ಮ ಬಾಸ್ : ಈ ಮಹಿಳೆಗೆ ಬಾಸ್ ಇಟ್ಟ ಬೇಡಿಕೆ ನೋಡಿ

ಒಂದೇ ಒಂದು ರಜೆಯಿಲ್ಲದೇ ವಾರಪೂರ್ತಿ ಕೆಲಸ ಮಾಡಲು ಯಾರಿಗೂ ಸಾಧ್ಯವಿಲ್ಲ. ವಾರದ ರಜೆಯಿದ್ದರೂ ವೈಯಕ್ತಿಕ ಕಾರಣಗಳಿಗೆ ಉದ್ಯೋಗಿಗಳು ರಜೆ ಕೇಳುತ್ತಾರೆ. ರಜೆಯ ದಿನವೂ ಈ ಬಾಸ್ ಕಿರಿಕಿರಿ ಮಾಡಿದ್ರೆ ಏನಾಗುತ್ತೆ ಅಲ್ವಾ. ಹೌದು ಇಲ್ಲೊಬ್ಬ ಮಹಿಳೆಯೂ ರಜೆಯಲ್ಲಿದ್ದರೂ ಈ ಬಾಸ್ ಮಾತ್ರ ಆಕೆಯನ್ನು ಪರೀಕ್ಷಿಸಲು ಮುಂದಾಗಿದ್ದಾನೆ. ರಜೆಯಲ್ಲಿದ್ದ ಮಹಿಳೆಗೆ ಆರಾಮದಾಯಕವಾಗಿ ಇರಲು ಬಿಡದೇ ವಿಚಿತ್ರ ಬೇಡಿಕೆಯಿಟ್ಟಿದ್ದಾನೆ. ಮಹಿಳೆಯೂ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ತನ್ನ ಬಾಸ್‌ನ ವಿಚಿತ್ರ ಬೇಡಿಕೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾಳೆ.

Viral : ರಜೆ ದಿನ ಕೂಡ ನೆಮ್ಮದಿಯಾಗಿ ಇರೋಕೆ ಬಿಡಲ್ಲ ನಮ್ಮ ಬಾಸ್ : ಈ ಮಹಿಳೆಗೆ ಬಾಸ್ ಇಟ್ಟ ಬೇಡಿಕೆ ನೋಡಿ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Jun 29, 2025 | 5:14 PM

ಉದ್ಯೋಗದಲ್ಲಿರುವವರಿಗೆ (employment) ಬಾಸ್‌ನಿಂದ ರಜೆ ಕೇಳುವುದೇ ಕಷ್ಟದ ಕೆಲಸ. ಒಂದು ವೇಳೆ ರಜೆ ಕೊಟ್ಟರೂ ಆ ದಿನದ ಕೆಲಸವನ್ನು ಹಿಂದಿನ ದಿನ ಮುಗಿಸಿ ಕೊಡಲೇಬೇಕು ಎಂದು ಕಂಡೀಷನ್ ಹಾಕುವುದಿದೆ. ಕೆಲವರು ಬಾಸ್ ಬಳಿ ಎಷ್ಟೇ ರಿಕ್ವೆಸ್ಟ್ ಮಾಡಿಕೊಂಡ್ರು ರಜೆ ಸಿಗೋದೇ ಇಲ್ಲ. ಇನ್ನು ರಜೆ ಸಿಕ್ಕರೂ, ರಜೆ ದಿನವೂ ಆಫೀಸಿನಿಂದ ಅಥವಾ ಬಾಸ್‌ನಿಂದ ಪದೇ ಪದೇ ಕಾಲ್ ಮೆಸೇಜ್ ಬಂದರೆ ಪಿತ್ತ ನೆತ್ತಿಗೆ ಏರುತ್ತದೆ. ರಜೆ ದಿನ ಕೂಡ ನೆಮ್ಮದಿಯಿಂದ ಇರೋಕೆ ಬಿಡಲ್ಲ ಎಂದು ಮನಸ್ಸಿನೊಳಗೆ ಬೈಯುತ್ತೇವೆ. ಆದರೆ ಮಲೇಷಿಯಾದ ಮಹಿಳೆಗೆ (Malaysian women) ಕೂಡ ರಜಾದಿನ ತನ್ನ ಬಾಸ್‌ ನೆಮ್ಮದಿಯಿಂದ ಇರೋಕೆ ಬಿಟ್ಟಿಲ್ಲವಂತೆ. ರಜೆಯ ದಿನವೂ ರಜೆಯಲ್ಲಿದ್ದಾಳೆಯೋ ಇಲ್ಲವೋ ಎನ್ನುವುದನ್ನು ಪರೀಕ್ಷಿಸಲು ಈ ಮಹಿಳೆಯ ಬಳಿ ಲೈವ್ ಲೊಕೇಶನ್ (live location) ಕಳುಹಿಸುವಂತೆ ಬೇಡಿಕೆಯಿಟ್ಟಿದ್ದಾನೆ. ಈ ಬಗ್ಗೆ ಮಹಿಳೆಯೂ ಪೋಸ್ಟ್ ಮಾಡಿದ್ದು, ತನ್ನ ಬಾಸ್ ಎಷ್ಟು ಕಿರಿಕಿರಿ ಕೊಡುತ್ತಾರೆ ಎಂದು ಹೇಳಿಕೊಂಡಿದ್ದಾಳೆ.

@nnadrahhh ಹೆಸರಿನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಮಹಿಳೆ ಪೋಸ್ಟ್ ಮಾಡಿದ್ದು, ಕಂಪನಿಯ ಹೆಸರನ್ನು ಬಹಿರಂಗ ಪಡಿಸದೇ, ತಾನು ರಜೆಯಲ್ಲಿದ್ದಾಗ ತನ್ನ ರಜಾದಿನವನ್ನು ಕಳೆಯಲು ಮಲೇಷಿಯಾ ದ್ವೀಪಕ್ಕೆ ಹೋಗಿದ್ದೇನೆ. ಈ ವೇಳೆಯಲ್ಲಿ ಬಾಸ್ ಕರೆ ಮಾಡಿ ಲೈವ್ ಲೊಕೇಶನ್ ಕಳುಹಿಸುವಂತೆ ಬೇಡಿಕೆಯಿಟ್ಟಿದ್ದಾನೆ. ರಜೆಯಲ್ಲಿದ್ದಾಗ ಲೈವ್ ಲೊಕೇಶನ್ ಕಳುಹಿಸದೇ ಇದ್ದಲ್ಲಿ ಗೈರುಹಾಜರಿ ಎಂದು ದಾಖಲಾಗುತ್ತದೆ. ರಜೆಯ ಸಮಯದಲ್ಲಿಯೂ ಈ ರೀತಿ ಲೈವ್ ಲೊಕೇಶನ್ ಕಳುಹಿಸಿ ಎಂದು ಹೇಳುವುದು ಸರಿಯೇ ಎಂದು ಮಹಿಳೆಯೂ ಪ್ರಶ್ನಿಸಿದ್ದಾಳೆ. ಇನ್ನು ವೇತನ ರಹಿತ ಹಾಗೂ ವೈದ್ಯಕೀಯ ರಜೆಯಲ್ಲಿರುವ ಉದ್ಯೋಗಿಗಳಿಗೂ ಕೂಡ ಇದೇ ರೀತಿ ಬೇಡಿಕೆಯನ್ನು ಇಡಲಾಗಿದೆ ಎಂದು ತಿಳಿಸಿದ್ದಾಳೆ. ಆದರೆ ಮಲೇಷ್ಯಾದ ಮಹಿಳೆಯೂ ಮತ್ತೆ ಬಾಸ್‌ ನನ್ನ ಲೈವ್ ಲೊಕೇಶನ್ ಕೇಳಿದ್ರೆ ಮಲೇಷ್ಯಾದ ಕಾರ್ಮಿಕ ಇಲಾಖೆಗೆ ದೂರು ನೀಡುವುದಾಗಿ ತಿಳಿಸಿದ್ದಾಳೆ.

ಇದನ್ನೂ ಓದಿ :ಅತಿ ಬುದ್ಧಿವಂತನಾಗುವ ಅಗತ್ಯವಿಲ್ಲ: ಕೆಲಸದ ಸಮಯ, ಸಂಬಳ ಕೇಳಿದಕ್ಕೆ ಸಿಎ ವಿದ್ಯಾರ್ಥಿಗೆ ಹೀಗೆ ಉತ್ತರಿಸಿದ ಕಂಪನಿ

ಇದನ್ನೂ ಓದಿ
ಈ ಬ್ರಿಟಿಷ್ ಪ್ರಜೆ ಧೈರ್ಯ ಮೆಚ್ಚಲೇಬೇಕು, ಪಾಕ್​​​ನಲ್ಲಿ ಭಾರತದ ಹಾವ
ಕೆಲಸದ ಸಮಯ, ಸಂಬಳ ಕೇಳಿದಕ್ಕೆ ಸಿಎ ವಿದ್ಯಾರ್ಥಿಗೆ ಹೀಗೆ ಉತ್ತರಿಸಿದ ಕಂಪನಿ
ರೂಬಿಕ್ಸ್‌ ಕ್ಯೂಬ್‌ನಲ್ಲಿ ಪ್ರಧಾನಿ ಮೋದಿ ಚಿತ್ರ ಬಿಡಿಸಿದ 6 ರ ಪೋರ
ಜೆಪ್ಟೋ ಅಪ್ಲಿಕೇಶನ್​​​ನಲ್ಲಿ ಫುಡ್ ಆರ್ಡರ್ ಮಾಡುವ ಮುನ್ನ ಜೋಕೆ

ಈ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು, ನಾನೊಂದು ವೇಳೆ ನಿಮ್ಮ ಸ್ಥಾನದಲ್ಲಿದ್ದರೆ ಆ ಕೆಲಸಕ್ಕೆ ರಾಜೀನಾಮೆ ನೀಡಿ ಬೇರೆ ಕೆಲಸ ಹುಡುಕುತ್ತಿದ್ದೆ ಎಂದಿದ್ದಾರೆ. ಇನ್ನೊಬ್ಬರು, ಬಾಸ್ ಈ ರೀತಿ ವರ್ತಿಸುವುದು ಸರಿಯಲ್ಲ. ಎಲ್ಲರಿಗೂ ಅವರದ್ದೆ ಆದ ಪ್ರೈವಸಿ ಇದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಕೆಲಸ ಮಾಡುವ ಕಂಪನಿಯಲ್ಲಿ ಇದೇ ರೀತಿ ತಲೆತಿನ್ನುವ ವ್ಯಕ್ತಿಗಳು ಇದ್ದೆ ಇರುತ್ತಾರೆ. ಆದರೆ ಅವರು ವೈಯುಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ, ಹೀಗಾದಾಗ ಅವರನ್ನು ಪ್ರಶ್ನಿಸುವುದು ಒಳ್ಳೆಯದು ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ