ಜೈಪುರ: ಪತ್ನಿಗೆ ಫೋನ್‌ನಲ್ಲೇ ತಲಾಖ್ ನೀಡಿ ಪಾಕಿಸ್ತಾನದ ಯುವತಿಯನ್ನು ಭಾರತದ ವ್ಯಕ್ತಿಯೊರ್ವ ಮದುವೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಪಾಕಿಸ್ತಾನಿ ಮಹಿಳೆಯನ್ನು ಮದುವೆಯಾಗುವ ಮೊದಲು ತಾನು ಕೆಲಸ ಮಾಡುತ್ತಿದ್ದ ಕುವೈತ್‌ನಿಂದ ತನ್ನ ಮೊದಲ ಪತ್ನಿಗೆ ದೂರವಾಣಿ ಮೂಲಕ ಕರೆ ಮಾಡಿ ತ್ರಿವಳಿ ತಲಾಖ್ ನೀಡಿದ್ದಾನೆ. ಇದೀಗ ಆರೋಪಿಯಾದ ರೆಹಮಾನ್ (35)ನನ್ನು ರಾಜಸ್ಥಾನದ ವಿಮಾನ ನಿಲ್ದಾಣದಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉದ್ಯೋಗದ ಕಾರಣಕ್ಕೆ ಕುವೈತ್‌ನಲ್ಲಿ ವಾಸವಿದ್ದ ರೆಹಮಾನ್ಗೆ ಸೋಶಿಯಲ್ ಮೀಡಿಯಾ ಮೂಲಕ ಪಾಕಿಸ್ತಾನದ ಯುವತಿಯ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿದ್ದು, ಇತ್ತೀಚಿಗಷ್ಟೇ ಆಕೆಯನ್ನು ಭೇಟಿಯಾಗಿ ವಿವಾಹವಾಗಿದ್ದಾನೆ. ಇದಲ್ಲದೇ ಕುವೈತ್‌ನಿಂದಲೇ ಕರೆ ಮಾಡಿ ತನ್ನ ಮೊದಲ ಪತ್ನಿಗೆ ತಲಾಕ್ ನೀಡಿದ್ದಾನೆ.
ಇದನ್ನೂ ಓದಿ: ಇಬ್ಬರು ಯುವತಿಯರ ಜೊತೆ ಕಾರಿನಲ್ಲಿ ಯುವಕನ ಸರಸ ಸಲ್ಲಾಪ; ವಿಡಿಯೋ ವೈರಲ್
ಹನುಮಾನ್‌ಗಢದ ಭದ್ರಾದಲ್ಲಿರುವ ಮೊದಲ ಪತ್ನಿ ಫರೀದಾ ಬಾನೊ (29) ಕಳೆದ ತಿಂಗಳು ತನ್ನ ಪತಿ ರೆಹಮಾನ್ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ನೀಡಿದ ಆರೋಪದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಹನುಮಾನ್‌ಗಢ ಉಪ ಎಸ್‌ಪಿ (ಎಸ್‌ಸಿ/ಎಸ್‌ಟಿ ಸೆಲ್) ರಣವೀರ್ ಸಿಂಗ್ ಹೇಳಿದ್ದಾರೆ. ಇದೀಗ ಮಹಿಳೆಯ ದೂರಿನ ಆಧಾರದ ಮೇಲೆ ರೆಹಮಾನ್ನನ್ನು ರಾಜಸ್ಥಾನದ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ