AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಸ್ವಾತಂತ್ರ್ಯ ದಿನದ ಅಂಗವಾಗಿ ನೀರಿನೊಳಗೆ ತ್ರಿವರ್ಣ ಧ್ವಜ ಹಾರಿಸಿದ ಭಾರತೀಯ ಕರಾವಳಿ ಪಡೆ

Independence Day 2024: ಭಾರತವು ಆಗಸ್ಟ್‌ 15 ರ ಗುರುವಾರದಂದು ತನ್ನ 78 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲು ಸಜ್ಜಾಗಿದೆ. ತ್ರಿವರ್ಣ ಧ್ವಜವನ್ನು ಹಾರಿಸಲು ಜನರಿಗೆ ಹೆಚ್ಚಿನ ಉತ್ತೇಜನ ನೀಡುವ ಸಲುವಾಗಿ ʼಹರ್‌ ಘರ್‌ ತಿರಂಗಾʼ ಅಭಿಯಾನವನ್ನು ಶುರು ಮಾಡಲಾಗಿದೆ. ಇದೇ ವೇಳೆ ಭಾರತೀಯ ಕರಾವಳಿ ಪಡೆ ಕೂಡಾ ಲಕ್ಷದ್ವೀಪದ ಸಾಗರದಡಿಯಲ್ಲಿ ವಿಶೇಷ ರೀತಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದೆ. ಈ ರೋಮಾಂಚನಕಾರಿ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Video: ಸ್ವಾತಂತ್ರ್ಯ ದಿನದ ಅಂಗವಾಗಿ ನೀರಿನೊಳಗೆ ತ್ರಿವರ್ಣ ಧ್ವಜ ಹಾರಿಸಿದ ಭಾರತೀಯ ಕರಾವಳಿ ಪಡೆ
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Aug 14, 2024 | 6:21 PM

Share

ಭಾರತವು ಆಗಸ್ಟ್‌ 15 ಅಂದರೆ ನಾಳೆ ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸಲು ಸಜ್ಜಾಗಿದೆ. ಎಲ್ಲೆಡೆ ತ್ರಿವರ್ಣ ರಂಗು ದೇಶವನ್ನು ಬೆಳಗುತ್ತಿದೆ, ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುತ್ತಾ, ದೇಶಕ್ಕಾಗಿ ಅವರು ಮಾಡಿದ ತ್ಯಾಗವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ದಿನವನ್ನು ಆಚರಿಸಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಇನ್ನೂ ತ್ರಿವರ್ಣ ಧ್ವಜವನ್ನು ಹಾರಿಸಲು ಜನರಿಗೆ ಹೆಚ್ಚಿನ ಉತ್ತೇಜನ ನೀಡುವ ಸಲುವಾಗಿ 78 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಈ ಬಾರಿಯೂ ಕೂಡಾ ʼಹರ್‌ ಘರ್‌ ತಿರಂಗಾʼ ಅಭಿಯಾನವನ್ನು ನಡೆಸಲಾಗುತ್ತಿದೆ. ಇದೇ ವೇಳೆ ಸ್ವಾತಂತ್ರ್ಯ ದಿನವನ್ನು ಸ್ಮರಣೀಯವಾಗಿರಿಸಲು ಭಾರತೀಯ ಕರಾವಳಿ ಪಡೆ ಕೂಡಾ ಲಕ್ಷದ್ವೀಪದಲ್ಲಿ ಸಾಗರದಡಿಯಲ್ಲಿ ವಿಶೇಷ ರೀತಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದೆ. ಈ ರೋಮಾಂಚನಕಾರಿ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಈ ಕುರಿತ ವಿಶೇಷ ಪೋಸ್ಟ್‌ ಒಂದನ್ನು ಭಾರತೀಯ ಕರಾವಳಿ ಪಡೆ (Indian Costal Guard) ತನ್ನ ಅಧೀಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “78 ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಹರ್‌ ಘರ್‌ ತಿರಂಗಾ ಅಭಿಯಾನದ ಭಾಗವಾಗಿ ಭಾರತೀಯ ಕರಾವಳಿ ಪಡೆ ಲಕ್ಷದ್ವೀಪದ ಶುದ್ಧ ನೀರಿನಡಿಯಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿತು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದೆ. ವೈರಲ್‌ ವಿಡಿಯೋದಲ್ಲಿ ಭಾರತೀಯ ಕರಾವಳಿ ಪಡೆ ಲಕ್ಷದ್ವೀಪದಲ್ಲಿ ಶುದ್ಧ ನೀರಿನಡಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿರುವ ರೋಮಾಂಚನಕಾರಿ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ರಕ್ಷಾ ಬಂಧನದಂದು ರಜೆ ತೆಗೆದುಕೊಂಡ್ರೆ 7 ದಿನದ ಸಂಬಳ ಕಟ್​​​, ಇದನ್ನು ವಿರೋಧಿಸಿದ HR, ಮ್ಯಾನೇಜರ್‌ ಕೆಲಸದಿಂದ ವಜಾ

ವೈರಲ್​​ ವಿಡಿಯೋ

ಆಗಸ್ಟ್‌ 13 ರಂದು ಹಂಚಿಕೊಳ್ಳಲಾದ ಈ ವಿಡಿಯೋ 13 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸಬೇಕುʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ʼಜೈ ಹಿಂದ್‌ ಜೈ ಭಾರತʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ