Viral Video: ಕೊರೋನಾ ವ್ಯಾಕ್ಸಿನ್​ಗೆ ಹೆದರಿ ಮರವೇರಿ ಕುಳಿತ ವ್ಯಕ್ತಿ: ವೀಡಿಯೋ ವೈರಲ್​

| Updated By: Digi Tech Desk

Updated on: Dec 30, 2021 | 10:01 AM

ಪಾಂಡೀಚೆರಿಯ ವಿಲ್ಲನೂರ್​ ಎನ್ನುವ ಗ್ರಾಮದಲ್ಲಿ ಮನೆಯ ಬಾಗಿಲಿಗೆ ಆರೋಗ್ಯ ಕಾರ್ಯಕರ್ತೆಯರು ಬಂದ ವೇಳೆ ವ್ಯಕ್ತಿ ಮನೆಯ ಎದುರಿದ್ದ ಮರವೇರಿ ಕುಳಿತಿದ್ದಾನೆ.

Viral Video: ಕೊರೋನಾ ವ್ಯಾಕ್ಸಿನ್​ಗೆ ಹೆದರಿ ಮರವೇರಿ ಕುಳಿತ ವ್ಯಕ್ತಿ: ವೀಡಿಯೋ ವೈರಲ್​
ಮರವೇರಿ ಕುಳಿತ ವ್ಯಕ್ತಿ
Follow us on

ಕೊರೋನಾದಿಂದ ರಕ್ಷಣೆ ಪಡೆಯಲು ವ್ಯಾಕ್ಸಿನ್​​ ತೆಗೆದುಕೊಳ್ಳುವುದು ಒಳಿತು. ಸರ್ಕಾರವೂ ಪ್ರತಿಯೊಬ್ಬ ನಾಗರಿಕನೂ ಕೋವಿಡ್​ ವ್ಯಾಕ್ಸಿನ್​ ಪಡೆಯಬೇಕೆಂದು ನಿಯಮವನ್ನೂ ಮಾಡಿದೆ. ಆದರೆ ಇನ್ನೂ ಹಳ್ಳಿಗಳಲ್ಲಿ ವ್ಯಾಕ್ಸಿನ್​ಗೆ ಹೆದರಿ ದೂರ ಓಡುವವರಿದ್ದಾರೆ. ವ್ಯಾಕ್ಸಿನ್​ಗೆ ಹೆದರಿ ವ್ಯಕ್ತಿ ಮರವೇರಿ ಕುಳಿತ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪಾಂಡೀಚೆರಿಯ ವಿಲ್ಲನೂರ್​ ಎನ್ನುವ ಗ್ರಾಮದಲ್ಲಿ ಮನೆಯ ಬಾಗಿಲಿಗೆ ಆರೋಗ್ಯ ಕಾರ್ಯಕರ್ತೆಯರು ಬಂದ ವೇಳೆ ವ್ಯಕ್ತಿ ಮನೆಯ ಎದುರಿದ್ದ ಮರವೇರಿ ಕುಳಿತಿದ್ದಾನೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. 

ವೀಡಿಯೋದಲ್ಲಿ ಆರೋಗ್ಯ ಕಾರ್ಯಕರ್ತೆಯರು ಮನೆಯ ಬಳಿ ವ್ಯಾಕ್ಸಿನ್​ ನೀಡಲು ಬಂದು ನಿಂತ ವೇಳೆ 40 ವರ್ಷದ  ವ್ಯಕ್ತಿ ಮರವೇರಿ ತುದಿಯಲ್ಲಿ ಹೋಗಿ ಕುಳಿತಿರುವುದನ್ನು ಕಾಣಬಹುದು.  ಅಲ್ಲೇ ಕುಳಿತುಕೊಂಡು ನನಗೆ ವ್ಯಾಕ್ಸಿನ್​ ಬೇಡ ಎಂದು ಕೂಗಿದ್ದಾನೆ. ನಾನು ನಿಮಗೆ ಸಿಗುವುದಿಲ್ಲ ಎಂದಿದ್ದಾನೆ. ಇದರಿಂದ ಆರೋಗ್ಯ ಕಾರ್ಯಕರ್ತೆಯರು ಏನೂ ಮಾಡಲಾಗದೆ ನಿಂತುಕೊಂಡಿದ್ದರು.
ಪಾಂಡೀಚೇರಿ ಸರ್ಕಾರ 100 ರಷ್ಟು ವ್ಯಾಕ್ಸಿನೇಷನ್​ ಡ್ರೈವ್​ ನಡೆಸಲು ನಿರ್ಧರಿಸಿದೆ. ಆದ್ದರಿಂದ ಮನೆ ಮನೆಗೆ ತೆರಳಿ ಆರೋಗ್ಯ ಕಾರ್ಯಕರ್ತೆಯರು ಮೊದಲ ಡೋಸ್​ ಮತ್ತು ಎರಡನೇ ಡೋಸ್​ಅನ್ನೂ ನೀಡುತ್ತಿದ್ದಾರೆ.

ಈ ಹಿಂದೆಯೂ ಇಂತಹ ಹಲವು ಘಟನೆಗಳು ನಡೆದಿದೆ. ಹಲವರು ವ್ಯಾಕ್ಸಿನ್​ ತೆಗೆದುಕೊಳ್ಳಲು ಹೆದರಿ ಅಥವಾ ವ್ಯಾಕ್ಸಿನ್​ ಬೇಡವೆಂದು ನಿರಾಕರಿಸಿ ಮರವೇರಿದ ಘಟನೆ ನಡೆದಿದೆ. ಈಗಲೂ ಇಂತಹದ್ದೇ ಘಟನೆ ಪಾಂಡೀಚೇರಿಯಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ:

ಕಿಟಕಿಯಿಂದ ಹಾರಿ ಪತ್ನಿ ಪರಾರಿ; ಹೆಂಡತಿಯ ಸುಳಿವು ನೀಡಿದವರಿಗೆ 5,000 ರೂ. ಬಹುಮಾನ ಘೋಷಿಸಿದ ಗಂಡ!

Published On - 9:45 am, Thu, 30 December 21