Viral Video: ಕೊವಿಡ್ ಲಸಿಕೆ ಪಡೆಯಲು ವ್ಯಕ್ತಿಯ ಸಕತ್​ ಪ್ಲಾನ್​! ವಿಡಿಯೋ ನೋಡಿದ್ರೆ ನೀವೂ ನಗ್ತೀರಾ

ಬೇಗ ಲಸಿಕೆ ಪಡೆಯಲು ವ್ಯಕ್ತಿಯೋರ್ವ ಪ್ಲಾನ್ ಮಾಡಿದ್ದಾನೆ. ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.

Viral Video: ಕೊವಿಡ್ ಲಸಿಕೆ ಪಡೆಯಲು ವ್ಯಕ್ತಿಯ ಸಕತ್​ ಪ್ಲಾನ್​! ವಿಡಿಯೋ ನೋಡಿದ್ರೆ ನೀವೂ ನಗ್ತೀರಾ
ವಿಡಿಯೋ ನೋಡಿದ್ರೆ ನೀವೂ ನಗ್ತೀರಾ
Edited By:

Updated on: Aug 15, 2021 | 12:51 PM

ಕೊರೊನಾ ಲಸಿಕೆ ಪಡೆಯಲು ಜನರು ಮುಗಿ ಬಿದ್ದಿದ್ದಾರೆ. ವ್ಯಾಕ್ಸಿನ್ ಕೊಡುವ ಊರಿನಲ್ಲಿ ಬೆಳಗ್ಗೆಯಿಂದಲೇ ಜನರು ಸಾಲು ಸಾಲಾಗಿ ನಿಂತಿರುತ್ತಾರೆ. ಅದೆಷ್ಟೋ ಗಂಟೆಗಳವರೆಗೆ ಕಾಯುತ್ತಾ ಸರತಿ ಸಾಲಿನಲ್ಲಿ ನಿಲ್ಲಬೇಕು. ಇಂತಹ ಪರಿಸ್ಥಿತಿಯಲ್ಲಿ ಬಿಹಾರದ ಲಸಿಕೆ ಕೇಂದ್ರದಲ್ಲಿ ನಡೆದ ತಮಾಷೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬೇಗ ಲಸಿಕೆ ಪಡೆಯಲು ವ್ಯಕ್ತಿಯೋರ್ವ ಪ್ಲಾನ್ ಮಾಡಿದ್ದಾನೆ. ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋ ವೈರಲ್ ಆಗುತ್ತದೆ. ಅದರಲ್ಲಿಯೂ ವಿಶೇಷವಾಗಿ ತಮಾಷೆಯ ವಿಡಿಯೋಗಳು ಹೆಚ್ಚು ಮನ ಗೆಲ್ಲುತ್ತದೆ. ಇದೀಗ ವೈರಲ್ ಆದ ವಿಡಿಯೋ ಆದ ದೃಶ್ಯ ಕೂಡಾ ಅಂಥದ್ದೇ! ಜನಸಾಗರ ನೋಡಿ ಧಂಗಾದ ವ್ಯಕ್ತಿ ಬೇಗ ಲಸಿಕೆ ಪಡೆಯಲು ಸಖತ್ ಪ್ಲಾನ್ ಮಾಡಿದ್ದಾನೆ. ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ. ಎರಡು ಗೋಡೆಗಳ ಮಧ್ಯೆ ನುಸುಳಿ ವ್ಯಕ್ತಿ ಸಾಗಿದ್ದಾನೆ. ಗೋಡೆಗಿದ್ದ ಕಿಟಕಿಗೆ ಕೈ ತೋರಿಸುತ್ತಿದ್ದಾನೆ. ಕಿಟಕಿಯ ಒಳಗಿದ್ದ ನರ್ಸ್ ವ್ಯಾಕ್ಸಿನ್ ನೀಡಿದ್ದಾರೆ. ಜನ ಸಾಗರದಲ್ಲಿ ಬೇಗ ವ್ಯಾಕ್ಸಿನ್ ಪಡೆಯಲು ಮಾಡಿದ ವ್ಯಕ್ತಿಯ ಪ್ಲಾನ್ ತಮಾಷೆಯಾಗಿದೆ. ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು ವೈರಲ್ ಆಗಿದೆ.

ಬಿಹಾರದ ಲಸಿಕೆ ಕೇಂದ್ರದಲ್ಲಿ ನಡೆದ ತಮಾಷೆಯ ವಿಡಿಯೋ ವೈರಲ್ ಆಗಿದೆ. ಟ್ವಿಟರ್​ನಲ್ಲಿ ಮೊದಲಿಗೆ ವಿಡಿಯೋ ಹಂಚಿಕೊಳಗ್ಳಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮೊದಲೆಲ್ಲಾ ವ್ಯಾಕ್ಸಿನ್ ಪಡೆಯಲು ಸರತಿ ಸಾಲಿನಲ್ಲಿ ಗಂಟೆಗಟ್ಟಲೇ ನಿಲ್ಲಬೇಕಿತ್ತು, ಆದರೆ ಈಗ ಲಸಿಕೆ ಪಡೆಯುವುದು ಸುಲಭವಾಗಿದೆ ಎಂದು ಓರ್ವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ವಿಡಿಯೋ ಮಾಡ್ತಾ ಮಾಡ್ತಾ ಈಜುಕೊಳಕ್ಕೆ ಬಿದ್ದ ಕ್ಯಾಮರಾ ಮ್ಯಾನ್​​; ವಧು – ವರ ಕಂಗಾಲು! ವಿಡಿಯೋ ವೈರಲ್​

Shocking Video: ಆಕಸ್ಮಿಕವಾಗಿ ರೈಲ್ವೆ ಹಳಿಯ ಮಧ್ಯೆ ಬಿದ್ದ ವ್ಯಕ್ತಿ! ಆಘಾತಕಾರಿ ದೃಶ್ಯದ ವಿಡಿಯೋ ವೈರಲ್​