Viral Story: ಪ್ರತಿ ದಿನ 100 ಜೀವಂತ ಕೀಟಗಳನ್ನು ತಿನ್ನುವ ವ್ಯಕ್ತಿ, ಕಾರಣವೇನು ಗೊತ್ತೇ?

ಅಮೆರಿಕದ ಕಾರ್ಲೋಸ್ ಪ್ರತಿದಿನ 100 ಜೀವಂತ ಕೀಟಗಳನ್ನು ತಿನ್ನುವ ವಿಚಿತ್ರ ವ್ಯಕ್ತಿ. ಈ 26 ವರ್ಷದ ವ್ಯಕ್ತಿ ಕೀಟಗಳನ್ನು ತಮ್ಮ ನೆಚ್ಚಿನ ತಿಂಡಿ ಎನ್ನುತ್ತಾರೆ. ಬಾಲ್ಯದಿಂದಲೇ ಈ ಅಭ್ಯಾಸ ಬೆಳೆಸಿಕೊಂಡಿದ್ದು, ಜಿರಳೆಗಳ ರುಚಿ ಇಷ್ಟಪಡುತ್ತಾರೆ. ಕೀಟಗಳನ್ನು ತಿನ್ನುವಾಗ ಅವುಗಳ ಅದೃಷ್ಟ ತಮ್ಮ ನಿಯಂತ್ರಣದಲ್ಲಿದೆ ಎಂಬ ಅಸಹಜ ಕಾರಣ ನೀಡುತ್ತಾರೆ. ಕಾರ್ಲೋಸ್ ಅವರ ವಿಚಿತ್ರ ಆಹಾರ ಪದ್ಧತಿಯ ಹಿಂದಿನ ಸಂಪೂರ್ಣ ಕಥೆ ಇಲ್ಲಿದೆ.

Viral Story: ಪ್ರತಿ ದಿನ 100 ಜೀವಂತ ಕೀಟಗಳನ್ನು ತಿನ್ನುವ ವ್ಯಕ್ತಿ, ಕಾರಣವೇನು ಗೊತ್ತೇ?
ಕೀಟ
Image Credit source: Getty Images/Pixabay

Updated on: Jan 19, 2026 | 10:46 AM

ಜಗತ್ತಿನಲ್ಲಿ ವಿಚಿತ್ರ ಮನುಷ್ಯರಿದ್ದಾರೆ, ಅವರ ಅಭ್ಯಾಸಗಳು ಕೂಡ ವಿಚಿತ್ರವಾಗಿಯೇ ಇರುತ್ತದೆ. ಅದು ಬೇರೆಯವರಿಗೆ ವಿಚಿತ್ರವೆನಿಸಬಹುದು. ಕೆಲವರು ಮಾಂಸಾಹಾರಿಗಳಿದ್ದರೆ, ಇನ್ನು ಕೆಲವರು ಸಸ್ಯಾಹಾರಿಗಳಿದ್ದಾರೆ. ಸಾಮಾನ್ಯವಾಗಿ ಮಾಂಸಾಹಾರಿಗಳು(Non Vegetarian) ಕೋಳಿ, ಕುರಿ, ಮೊಟ್ಟೆ ಅಥವಾ  ಮೀನುಗಳನ್ನು ತಿನ್ನುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ನಿತ್ಯ 100 ಜೀವಂತ ಕೀಟಗಳನ್ನು ತಿನ್ನುತ್ತಾರಂತೆ.

ಈ ವ್ಯಕ್ತಿಯ ಹೆಸರು ಕಾರ್ಲೋಸ್, ಇವರು ಅಮೆರಿಕದ ಚಿಕಾಗೋದಲ್ಲಿ ವಾಸಿಸುತ್ತಾರೆ. ಅವರೇ ಹೇಳುವಂತೆ ಕೀಟಗಳು ಅವರ ನೆಚ್ಚಿನ ತಿಂಡಿಗಳಲ್ಲಿ ಒಂದು, ಅವುಗಳ ರುಚಿ ತುಂಬಾ ಇಷ್ಟ, ಅವು ಬೆಣ್ಣೆ ಸವರಿದ ಪಾಪ್‌ಕಾರ್ನ್‌ನಂತಿರುತ್ತವೆ. 26 ವರ್ಷದ ಕಾರ್ಲೋಸ್ ಇತ್ತೀಚೆಗೆ ಟಿಎಲ್‌ಸಿಯ “ಮೈ ಸ್ಟ್ರೇಂಜ್ ಅಡಿಕ್ಷನ್” ಕಾರ್ಯಕ್ರಮದ ವೇಳೆ ಜೀವಂತ ಕೀಟಗಳು ಮತ್ತು ಜಿರಳೆಗಳನ್ನು ತಿನ್ನುತ್ತಿರುವುದು ಕಂಡುಬಂದಿದೆ.ಕಾರ್ಲೋಸ್ ಜಿರಳೆಗಳನ್ನು ರುಚಿಕರವಾದ ತರಕಾರಿಗೆ ಹೋಲಿಸುತ್ತಾರೆ.

ಈ ಕೀಟಗಳು ನಾಲಿಗೆಗೆ ಮಸಾಜ್ ಮಾಡುತ್ತವೆ ಎಂದು ಹೇಳಿಕೊಳ್ಳುತ್ತಾರೆ. ಬೇರೆ ಯಾವುದೇ ರೀತಿಯ ಆಹಾರದಿಂದಲೂ ತನಗೆ ಅಷ್ಟು ಖುಷಿ ಸಿಗುವುದಿಲ್ಲ ಎಂದು ಕಾರ್ಲೋಸ್ ಹೇಳುತ್ತಾರೆ.ಕಾರ್ಲೋಸ್ ನಿರುದ್ಯೋಗಿಯಾಗಿದ್ದರೂ ಇನ್ನೂ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ. ಕಾರ್ಲೋಸ್ ಕೀಟಗಳ ಅಂಗಡಿಯಿಂದ ಹುಳುಗಳು ಮತ್ತು ಜಿರಳೆಗಳನ್ನು ಖರೀದಿಸಲು 8 ಡಾಲರ್ ಹಣವ್ನು ಖರ್ಚು ಮಾಡುತ್ತಿದ್ದಾರೆ.ಕಾರ್ಲೋಸ್ ಈ ವಿಚಿತ್ರ ಹವ್ಯಾಸವನ್ನು ಬಾಲ್ಯದಿಂದಲೂ ಬೆಳೆಸಿಕೊಂಡಿದ್ದಾಗಿ ಅವರೇ ಹೇಳಿದ್ದಾರೆ.

ಮತ್ತಷ್ಟು ಓದಿ: ಫೋಟೋ ಕೇಳಿದ್ದಕ್ಕೆ ‘ಬಂಗಾರ’ದ ಬಳೆಯನ್ನೇ ಕೊಟ್ಟ ಹುಡುಗಿ: ಮೆಟ್ರೋದಲ್ಲೊಂದು ಹೃದಯಸ್ಪರ್ಶಿ ಘಟನೆ

ನಾನು ಚಿಕ್ಕ ವಯಸ್ಸಿನಿಂದಲೂ ಜೀವಂತ ಹುಳುಗಳನ್ನು ತಿನ್ನುವ ಬಯಕೆಯನ್ನು ಹೊಂದಿದ್ದೆ, 4 ವರ್ಷ ವಯಸ್ಸಿನವನಾಗಿದ್ದಾಗ, ಮತ್ತು ನಾನು ಕೀಟಗಳನ್ನು ತಿನ್ನುತ್ತಿದ್ದೆ. ಈಗ, ಕಾರ್ಲೋಸ್ ಪ್ರತಿದಿನ 100 ಜೀವಂತ ಕೀಟಗಳನ್ನು ತಿನ್ನುತ್ತಾರೆ. ಕಾರ್ಲೋಸ್ ಜೀವಂತ ಕೀಟಗಳನ್ನು ಏಕೆ ತಿನ್ನುತ್ತಾನೆ ಎಂದು ನಿಖರವಾಗಿ ಹೇಳುವುದು ಕಷ್ಟ, ಆದರೆ ಅವರೇ ಒಂದು ವಿಚಿತ್ರ ಕಾರಣವನ್ನು ನೀಡುತ್ತಾರೆ.

ನಾನು ಜೀವಂತ ಕೀಟಗಳನ್ನು ತಿಂದು ಅಗಿಯುವಾಗ, ಅವುಗಳ ಅದೃಷ್ಟ ನನ್ನ ನಿಯಂತ್ರಣದಲ್ಲಿದೆ ಎಂದು ನನಗೆ ಅನಿಸುತ್ತದೆ ಮತ್ತು ಅವು ನನ್ನ ನಾಲಿಗೆಯನ್ನು ಮುದ್ದಿಸುವ ರೀತಿ ನನಗೆ ತುಂಬಾ ಇಷ್ಟ ಎಂದೆಲ್ಲಾ ಕಾರಣಗಳನ್ನು ನೀಡಿದ್ದಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ