ಚಿಪ್ಸ್ ಪ್ಯಾಕೆಟ್‌ನಲ್ಲಿ ಗಾಳಿ ತುಂಬಿಸಿರುವುದು ಯಾಕೆ ಗೊತ್ತಾ?
ನೀವು ಚಿಪ್ಸ್, ಲೇಸ್ ಖರೀದಿ ಮಾಡಿ ಬಾಯಿ ಚಪ್ಪರಿಸಿಕೊಂಡು ಸವಿದಿರುತ್ತೀರಿ. ಆದರೆ ನೀವು ಒಮ್ಮೆಯಾದ್ರೂ ಚಿಪ್ಸ್ ಪ್ಯಾಕೆಟ್ ಗಾಳಿಯಿಂದ ತುಂಬಿರುವುದು ಯಾಕೆ ಎಂಬ ಯೋಚನೆ ಮಾಡಿದ್ದೀರಾ. ಹೌದು ಹೆಚ್ಚಿನವರು ಚಿಪ್ಸ್ ಖರೀದಿಸಿ ತಿಂದಿರುತ್ತೀರಿ ಬಿಟ್ಟರೆ ಇಂತಹ ಒಂದು ಪ್ರಶ್ನೆ ತಲೆಯಲ್ಲಿ ಹುಟ್ಟಿರೋದೇ ಇಲ್ಲ. ಈ ಬಗೆಗಿನ ಕುತೂಹಲಕಾರಿ ಸಂಗತಿ ಇಲ್ಲಿದೆ.

ಚಿಪ್ಸ್, ಲೇಸ್ ಅಂದರೆ ಸಾಕು ಪುಟಾಣಿ ಮಕ್ಕಳ ಕಿವಿ ನೆಟ್ಟಗಾಗುತ್ತದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬಾಯಿ ಚಪ್ಪರಿಸಿ ಸವಿಯುವ ಈ ಟಿಪ್ಸ್ ಪ್ಯಾಕೆಟ್‌ನಲ್ಲಿ (chips packet) ಈ ತಿನಿಸಿನ ಪ್ರಮಾಣ ಕಡಿಮೆಯಿರುತ್ತದೆ. ಆದರೆ ಈ ಪ್ಯಾಕೆಟ್‌ಗೆ ಗಾಳಿ ತುಂಬಿಸಿರುತ್ತಾರೆ. ಮಕ್ಕಳನ್ನು ಮರುಳು ಮಾಡಲು ಗಾಳಿ ತುಂಬಿಸಿಡುತ್ತಾರೆ ಎಂದು ದೂರುವ ಮುನ್ನ ನೀವು ಇದರ ಹಿಂದಿನ ಈ ಕಾರಣವನ್ನು ತಿಳಿದುಕೊಳ್ಳುವುದು ಒಳ್ಳೆಯದು.
ಪ್ಯಾಕೆಟ್‌ನಲ್ಲಿ ಗಾಳಿ ತುಂಬಿರಲು ಕಾರಣವಿದು
ಚಿಪ್ಸ್ ಅಥವಾ ಲೇಸ್ ಪ್ಯಾಕೆಟ್‌ನಲ್ಲಿ ಸಾರಜನಕವನ್ನು ತುಂಬಿರುತ್ತಾರೆ. ಆಮ್ಲಜನಕವನ್ನು ತುಂಬಿದರೆ ಇದು ಚಿಪ್ಸ್ಗಳನ್ನು ಹಾಳುಮಾಡುತ್ತದೆ, ಈ ಚಿಪ್ಸ್ ಬೇಗನೆ ಹಾಳಾಗುತ್ತದೆ. ಈ ಗಾಳಿ ಪ್ಯಾಕೆಟ್ನಲ್ಲಿರುವ ಚಿಪ್ಸ್ ದೀರ್ಘಕಾಲದವರೆಗೆ ತಾಜಾವಾಗಿರಿಸುತ್ತದೆ. ಹೀಗಾಗಿ ಸಾರಜನಕದ ಗಾಳಿಯನ್ನು ಚಿಪ್ಸ್ ಪ್ಯಾಕೆಟ್ ಗಳಲ್ಲಿ ತುಂಬಲಾಗುತ್ತದೆ.
ಇದನ್ನೂ ಓದಿ: ಬಸ್ಸಿನ ಸೀಟುಗಳು ಗಾಢ ಬಣ್ಣದಲ್ಲಿರಲು ಕಾರಣ ಇದೇ ನೋಡಿ
ಅದಲ್ಲದೇ, ಈ ಚಿಪ್ಸ್ ಪ್ಯಾಕೆಟ್ ಗಳನ್ನು ಬೇರೆ ಬೇರೆ ಅಂಗಡಿಗಳಿಗೆ ತಲುಪಿಸಲಾಗುತ್ತದೆ. ಈ ಸಂದರ್ಭ ಪ್ಯಾಕೆಟ್ ಒಳಗಿರುವ ಚಿಪ್ಸ್ ಪುಡಿ ಪುಡಿಯಾಗಬಹುದು. ಆದರೆ ಈ ಪ್ಯಾಕೆಟ್‌ನಲ್ಲಿ ಗಾಳಿ ತುಂಬಿರುವ ಕಾರಣ ಚಿಪ್ಸ್ ಪುಡಿ ಪುಡಿಯಾಗುವುದಿಲ್ಲ. ಈ ಎಲ್ಲಾ ಕಾರಣಗಳಿಂದ ಚಿಪ್ಸ್ ಪ್ಯಾಕೆಟ್‌ಗೆ ಗಾಳಿ ತುಂಬಿಸಲಾಗುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:03 pm, Sun, 18 January 26
