AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಸ್ಸಿನ ಸೀಟುಗಳು ಗಾಢ ಬಣ್ಣದಲ್ಲಿರಲು ಕಾರಣ ಇದೇ ನೋಡಿ

ನೀವು ದಿನನಿತ್ಯ ಬಸ್ಸಿನಲ್ಲಿ ಓಡಾಡುತ್ತಿದ್ದರೆ ಸೀಟಿನ ಬಣ್ಣವನ್ನು ಗಮನಿಸಿದ್ದೀರಬಹುದು. ಬಹುತೇಕ ಬಸ್ಸಿನ ಸೀಟುಗಳು ಗಾಢ ಬಣ್ಣದಲ್ಲಿರುತ್ತದೆ. ಆದರೆ ಈ ಬಸ್ ಸೀಟುಗಳು ಗಾಢ ಬಣ್ಣದಲ್ಲಿರುವುದರ ಹಿಂದಿನ ಕಾರಣದ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಈ ಸೀಟಿನ ಗಾಢ ಬಣ್ಣದ ಆಯ್ಕೆಯ ಹಿಂದಿನ ಕಾರಣ ಇದೇ ಆಗಿದೆಯಂತೆ. ಕುರಿತಾದ ಸ್ಟೋರಿ ಇಲ್ಲಿದೆ.

ಬಸ್ಸಿನ ಸೀಟುಗಳು ಗಾಢ ಬಣ್ಣದಲ್ಲಿರಲು ಕಾರಣ ಇದೇ ನೋಡಿ
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
|

Updated on:Jan 07, 2026 | 2:55 PM

Share

ಹೆಚ್ಚಿನವರು ದಿನನಿತ್ಯದ ಓಡಾಟಕ್ಕಾಗಿ ಸ್ವಂತ ವಾಹನವನ್ನು ಬಳಸಿದರೆ, ಇನ್ನು ಕೆಲವರು ಬಸ್ಸಿನಲ್ಲಿ (Bus) ಪ್ರಯಾಣಿಸುತ್ತಾರೆ. ಬಸ್ಸಿನಲ್ಲಿ ಪ್ರಯತ್ನಿಸುವಾಗ ಅನೇಕ ವಿಷಯಗಳನ್ನು ಗಮನಿಸಿದ್ದೀರಬಹುದು. ಅದರಲ್ಲೊಂದು ಈ ಸೀಟುಗಳು ಗಾಢ ಬಣ್ಣದಲ್ಲಿರುವುದು. ಆದರೆ ಗಾಢವಾದ ಬಣ್ಣದಲ್ಲಿ ಇರುವುದು ಯಾಕೆ ಎನ್ನುವ ಬಗ್ಗೆ ಯಾರು ಕೂಡ ಯೋಚನೆಯೂ ಮಾಡಿರಲ್ಲ. ಆದರೆ ನೀವು ಈ ಗಾಢ ಬಣ್ಣದ ಆಯ್ಕೆಯ ಹಿಂದಿನ ಕಾರಣ ತಿಳಿದುಕೊಳ್ಳುವುದು ಬಹಳ ಮುಖ್ಯ.

ಗಾಢ ಬಣ್ಣದ ಆಯ್ಕೆಯ ಹಿಂದಿದೆ ಈ ಕಾರಣ

ಬಸ್ಸಿನಲ್ಲಿರುವ ಗಾಢ ಬಣ್ಣದಲ್ಲಿ ಸೀಟುಗಳನ್ನು ಕೊಳಕು ಮತ್ತು ತಿಳಿ ಕಲೆಗಳನ್ನು ಮರೆಮಾಡಲು ವಿನ್ಯಾಸಗೊಳಿಸಲಾಗಿದೆ. ಕೊಳೆಯನ್ನು ಮರೆಮಾಡುವುದರಿಂದ ಪ್ರಯಾಣಿಕರಿಗೆ ಬಸ್ಸಿನ ಸೀಟುಗಳು ಸ್ವಚ್ಛವಾಗಿರುವಂತೆ ಕಾಣುತ್ತವೆ.

ಇದನ್ನೂ ಓದಿ: ಭಾರತೀಯ ಸ್ಲೀಪರ್ ಬಸ್‌ನಲ್ಲಿ ಪ್ರಯಾಣಿಸಿ ಅನುಭವ ಬಿಚ್ಚಿಟ್ಟ ವಿದೇಶಿಗ

ಅದಲ್ಲದೇ ಈ ಗಾಢ ಬಣ್ಣದ ಬಟ್ಟೆಗಳು ಪ್ಲಾಸ್ಟಿಕ್ ಗಿಂತ ಹೆಚ್ಚು ಕಾಲ ಬಾಳಿಕೆ ಬರುತ್ತವೆ ಹಾಗೂ ಸಣ್ಣಪುಟ್ಟ ಸವೆತಗಳನ್ನು ಕಾಣದಂತೆ ಮರೆಮಾಡುತ್ತದೆ. ಇದರಿಂದ ಬಸ್ ಮಾಲೀಕರು ಬಸ್ಸಿನ ಸೀಟುಗಳನ್ನು ಬದಲಾಯಿಸುವ ಅಗತ್ಯವನ್ನು ಕಡಿಮೆ ಮಾಡುತ್ತದೆ. ಈ ಕಾರಣಗಳಿಂದಲೇ ಗಾಢ ಬಣ್ಣದ ಸೀಟುಗಳನ್ನು ಆಯ್ಕೆ ಮಾಡಲಾಗುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:50 pm, Wed, 7 January 26