ಹೊಸ ಗಾಡಿಗೆ ಹಾರ ಹಾಕುವ ಬದಲಾಗಿ ತನ್ನ ಪತ್ನಿಗೆ ಹಾಕಿದಾಗ…

Man garlands his wife : ಯಾರಿಗೆ ಹಾರ ಹಾಕುವುದು ಎಂಬ ಗೊಂದಲ ಉಂಟಾಗಿದೆ ಈ ವ್ಯಕ್ತಿಗೆ. ನೆಟ್ಟಿಗರೆಲ್ಲ ಈ ವಿಡಿಯೋ ನೋಡಿ, ನೀವು ಮಾಡಿದ್ದು ಸರಿ ಇದೆ, ನಿಮಗೆ ರಾಣಿ ಯಾರೆಂದು ಚೆನ್ನಾಗಿ ಗೊತ್ತಿದೆ ಎಂದು ಬೆನ್ನುತಟ್ಟಿದ್ದಾರೆ.

ಹೊಸ ಗಾಡಿಗೆ ಹಾರ ಹಾಕುವ ಬದಲಾಗಿ ತನ್ನ ಪತ್ನಿಗೆ ಹಾಕಿದಾಗ...
Man garlands his wife instead of brand new motorcycle
Updated By: ಶ್ರೀದೇವಿ ಕಳಸದ

Updated on: Oct 13, 2022 | 2:39 PM

Viral Video : ಹೊಸತೆನ್ನುವುದೆಲ್ಲ ಹಾಗೇ. ಕನಸು ನನಸಾಗುವ ಹೊತ್ತು, ಕುತೂಹಲ, ಸಂಭ್ರಮ ಎಲ್ಲವೂ ಮೇಳೈಸಿ ಎದುರಿಗೆ ಏನಿದೆ ಏನು ನಡೆಯುತ್ತಿದೆ ಎನ್ನುವುದು ಮರೆಯುವಷ್ಟು ಗೊಂದಲ ಉಂಟಾಗುವ ಸಾಧ್ಯತೆ ಇರುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಇಲ್ಲೊಬ್ಬರು ಹೊಸ ದ್ವಿಚಕ್ರವಾಹನ ಖರೀದಿಸಿದ್ದಾರೆ. ಅದನ್ನು ಪೂಜೆ ಮಾಡುವ ಸಂದರ್ಭ. ಕೈಗೆ ಕೊಟ್ಟ ಹಾರವನ್ನು ಖರೀದಿಸಿದ ತಮ್ಮ ಗಾಡಿಗೆ ಹಾಕುವ ಬದಲಾಗಿ ಪಕ್ಕದಲ್ಲಿ ನಿಂತಿದ್ದ ಹೆಂಡತಿಗೆ ಹಾಕಿದ್ದಾರೆ. ನೆಟ್ಟಿಗರು ಈ ವಿಡಿಯೋ ನೋಡಿ ಎಂಥಾ ಮುದ್ದಾಗಿದೆ ಎನ್ನುತ್ತಿದ್ದಾರೆ. ಸುಮಾರು ನಾಲ್ಕು ಲಕ್ಷ ಜನರು ಇದನ್ನು ವೀಕ್ಷಿಸಿದ್ದಾರೆ. ಹೊಸ ಗಾಡಿಗಿಂತ ಹಳೆಯ ಹೆಂಡತಿಯ ಮೇಲೆಯೇ ಅವರಿಗೆ ಪ್ರೀತಿ ಉಕ್ಕಿರಬಹುದು ಅಂತೆಲ್ಲ ಮೆಚ್ಚುಗೆಯಿಂದ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿದ್ದಾರೆ ನೆಟ್ಟಿಗರು.

ಶೋರೂಮ್​ನಲ್ಲಿ ಗಾಡಿ ಖರೀದಿಸಿದ ನಂತರ ಸೇಲ್ಸ್​ ಮ್ಯಾನ್​ ಗಾಡಿಯ ಪೂಜೆಗೆ ಸಹಾಯ ಮಾಡುತ್ತಾರೆ. ಹಾರವನ್ನು ವಾಹನ ಖರೀದಿಸಿದ ವ್ಯಕ್ತಿಗೆ ಕೊಡುತ್ತಾರೆ. ಇದನ್ನು ವಿಡಿಯೋ ಮಾಡುತ್ತಿರುವ ವ್ಯಕ್ತಿ, ಖರೀದಿದಾರರ ಹೆಂಡತಿಗೆ ಗಾಡಿಯ ಪಕ್ಕದಲ್ಲಿ ಹೋಗಿ ನಿಂತುಕೊಳ್ಳಲು ಹೇಳುತ್ತಾರೆ. ಆ ಪ್ರಕಾರ ಗಾಡಿಯ ಪಕ್ಕ ಆಕೆ ನಿಂತುಕೊಳ್ಳುತ್ತಾರೆ. ಗಲಿಬಿಲಿಗೊಂಡ ಖರೀದಿದಾರರು ಗಾಡಿಯ ಬದಲಾಗಿ ಹೆಂಡತಿಗೆ ಹಾರ ಹಾಕಿಬಿಡುತ್ತಾರೆ. ಆ ಮಹಿಳೆಗೆ ನಗು ತಡೆದುಕೊಳ್ಳಲಾಗುವುದಿಲ್ಲ. ಆಕೆಗಷ್ಟೇ ಯಾಕೆ ಇದನ್ನು ಓದುತ್ತಿರುವ ಯಾರಿಗೂ! ಎಂಥ ಮುಗ್ಧ ದೃಶ್ಯ ಅಲ್ಲವಾ ಇದು?

ಅವರು ಮಾಡಿದ್ದು ಸರಿ ಇದೆ. ರಾಣಿ ಯಾರೆಂದು ಅವರಿಗೆ ಗೊತ್ತಿದೆ! ಎಂದು ನಗುವಿನ ಚಟಾಕಿ ಹಾರಿಸಿದ್ದಾರೆ ಒಬ್ಬ ನೆಟ್ಟಿಗರು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 2:35 pm, Thu, 13 October 22