ಆನೆ ರಸ್ತೆ ದಾಟುತ್ತಿರುವಾಗ ಅಡ್ಡ ಬಂದ ಈ ಬೈಕ್, ಮುಂದೇನಾಯಿತು?
Accident : ಈ ಮಹಿಳೆ ಹೀಗೆ ಗಾಡಿ ಓಡಿಸುತ್ತ ಹೋಗುವಾಗ ಬಲಬದಿಯಿಂದ ಆನೆ ರಸ್ತೆ ದಾಟಲು ಹೊರಟಿದೆ. ನಿಯಂತ್ರಣ ತಪ್ಪಿದೆ. ಮುಂದೇನಾಗಿದೆ ನೋಡಿ ವಿಡಿಯೋ.
Viral Video : ಮಹಿಳೆಯೊಬ್ಬರು ಬೈಕ್ ಸವಾರಿ ಮಾಡುತ್ತಿದ್ದಾರೆ. ಆನೆಯೊಂದು ತನ್ನ ಪಾಡಿಗೆ ತಾನು ರಸ್ತೆ ದಾಟುತ್ತಿದೆ. ಸ್ವಲ್ಪ ನಿಯಂತ್ರಣ ತಪ್ಪಿದ್ದರೆ ಅನಾಹುತವಾಗುತ್ತಿತ್ತು. ಆದರೆ ಆನೆ ಸಾವರಿಸಿಕೊಂಡು ರಸ್ತೆ ದಾಟಿಕೊಂಡಿದೆ. ಬೈಕ್ ಸವಾರಿ ಮಾಡುತ್ತಿರುವ ಮಹಿಳೆಯೂ ಮುಗ್ಗರಿಸದೆ ಪಾರಾಗಿದ್ದಾರೆ. ಬಲಿಷ್ಠ ಮತ್ತು ಚಾಣಾಕ್ಷ ಆನೆ ತಾನೂ ಘಾಸಿಗೊಳಗಾಗದೆ ಮಹಿಳೆಗೂ ಏನೂ ತೊಂದರೆ ಮಾಡದೆ ದಾಟಿದೆ. ಪರಸ್ಪರರ ಜೀವ ಉಳಿದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಐಎಫ್ಎಸ್ ಅಧಿಕಾರಿ ಸುಸಾಂತ ನಂದಾ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ.
Elephant barely managed to save herself from the lady driver pic.twitter.com/UIN9J41tZK
ಇದನ್ನೂ ಓದಿ— Susanta Nanda (@susantananda3) October 13, 2022
ಈ ವಿಡಿಯೋ 16,000ಕ್ಕಿಂತಲೂ ಹೆಚ್ಚು ಜನರನ್ನು ತಲುಪಿದೆ. ಧುತ್ತನೆ ಹೀಗೆ ಬಲಬದಿಯಿಂದ ಆನೆ ಪ್ರತ್ಯಕ್ಷವಾದಾಗ ಮಹಿಳೆಗೆ ಗಾಡಿ ನಿಯಂತ್ರಿಸುವುದು ಕಷ್ಟವಾಗಿದೆ. ಆದರೂ ಸದ್ಯ ಏನೂ ಅವಘಡ ಸಂಭವಿಸಿಲ್ಲ. ಅಕ್ಕ ಪಕ್ಕ ಅಥವಾ ಮುಂದೆ ಹಿಂದೆ ಯಾವ ಗಾಡಿಗಳೂ ಇಲ್ಲದಿದುದರಿಂದ ಅದೃಷ್ಟವಶಾತ್ ಈಕೆ ಪಾರಾಗಿದ್ದಾರೆ. ಇನ್ನು ಆನೆ ಬಲವುಳ್ಳ ಪ್ರಾಣಿಯಾಗಿರುವುದರಿಂದ ಅದಕ್ಕೂ ಏನು ಹೆಚ್ಚು ತೊಂದರೆಯಾಗಿರಲಾರದು ಎಂಬ ಊಹೆ.
ಪ್ರತೀ ವರ್ಷ ವನ್ಯಮೃಗಗಳ ವಲಯದಲ್ಲಿ ನೂರಾರು ಅಪಘಾತಗಳು ವಾಹನ ಸಂಚಾರದಿಂದಲೇ ಸಂಭವಿಸುತ್ತಿವೆ. ಹಾಗಾಗಿ ವಾಹನ ಸವಾರರು ನಿಧಾನವಾಗಿ ಸಂಚರಿಸಬೇಕೆಂದು ಅರಣ್ಯ ಇಲಾಖೆ ಆಗಾಗ ಎಚ್ಚರಿಸುತ್ತಲೇ ಇರುತ್ತದೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:13 pm, Thu, 13 October 22