ಎಷ್ಟು ಬಡದಾಡ್ತೀರೋ, ನಮ್ಮನ್ನು ನೋಡಿಯಾದರೂ ಕಲೀರಿ

Chimpanzee : ಒಂದೇ ವರ್ಗದ ಮರಿಗಳು ಆಡುವುದು ಸಾಮಾನ್ಯ. ಆದರೆ ಭಿನ್ನವರ್ಗದ ಮರಿಗಳು ಹೀಗೆ ತನ್ಮಯಗೊಂಡು ಆಡುವುದು ಬಹಳ ಅಪರೂಪ. 10 ಮಿಲಿಯನ್​ ವೀಕ್ಷಕರ ಮನಗೆದ್ದಿದೆ ಈ ವಿಡಿಯೋ.

ಎಷ್ಟು ಬಡದಾಡ್ತೀರೋ, ನಮ್ಮನ್ನು ನೋಡಿಯಾದರೂ ಕಲೀರಿ
Baby Chimpanzee Plays With Tiger Cubs
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 13, 2022 | 5:54 PM

Viral Video : ಎಲ್ಲವೂ ಸಾಕೆನ್ನಿಸುತ್ತಿರುವಾಗ, ಇನ್ನು ಇದಕ್ಕೆ ಪರಿಹಾರವೇ ಇಲ್ಲ ಎನ್ನಿಸುತ್ತಿರುವಾಗ, ಏನೂ ತೋಚದಂತಾದಾಗ, ಮನಸ್ಸು ಖಿನ್ನವಾದಾಗ ಪ್ರಾಣಿಗಳ ಒಡನಾಟ ಉಲ್ಲಾಸವನ್ನೀಯುತ್ತವೆ. ಮನಸ್ಸನ್ನು ಶಾಂತಗೊಳಿಸುತ್ತವೆ. ತಲೆಯೊಳಗೆ ಇಟ್ಟುಕೊಂಡಿದ್ದ ದೊಡ್ಡಬಂಡೆಯೊಂದು ನಿಮಗರಿವಿಲ್ಲದೆಯೇ ತಾನಾಗಿಯೇ ಉರುಳಿರುತ್ತದೆ. ಸ್ವತಃ ಪ್ರಾಣಿಗಳೊಂದಿಗೆ ಸಮಯ ಕಳೆಯಲು ಸಾಧ್ಯವಾಗದಿದ್ದಲ್ಲಿ ಹೀಗೆ ವಿಡಿಯೋ ಕೂಡ ನೋಡಬಹುದು. ನಿಮ್ಮನ್ನು ನೀವೇ ಗಮನಿಸಿಕೊಳ್ಳಿ, ಪ್ರಾಣಿಗಳ ವಿಡಿಯೋ ನೋಡುವ ಮೊದಲು ನಿಮ್ಮ ಮನಸ್ಸು ಹೇಗಿತ್ತು ನಂತರ ಹೇಗೆ ಅರಳುತ್ತ ಹೋಯಿತು ಅಂತ. ಅದೇ ವಾತ್ಸಲ್ಯ, ಮಮತೆಯ ಮಾಯೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಹುಲಿ ಮತ್ತು ಚಿಂಪಾಂಜಿ ಮರಿಗಳು ಪರಸ್ಪರ ಆಟವಾಡಿಕೊಂಡಿರುವ ಚೆಂದದ ದೃಶ್ಯ ನೋಡಿ,

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

mokshabybee_tigers ಎಂಬ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಅನ್ನು 10 ಮಿಲಿಯನ್​ ವೀಕ್ಷಕರು ನೋಡಿದ್ದಾರೆ. ಇನ್ನೇನು ಈ ವಿಡಿಯೋ ಇಷ್ಟಪಟ್ಟವರ ಸಂಖ್ಯೆ ನಾಲ್ಕು ಲಕ್ಷಕ್ಕೆ ಏರಬಹುದು. ಒಂದೇ ವರ್ಗದ ಮರಿಗಳು ಹೀಗೆ ಚಿನ್ನಾಟಕ್ಕೆ ಬೀಳುವುದು ಸಹಜ. ಆದರೆ ಭಿನ್ನ ವರ್ಗದ ಮರಿಗಳು ಹೀಗೆ ಆಟದಲ್ಲಿ ಮುಳುಗುವುದು ಅಪರೂಪದ ದೃಶ್ಯ. ಆಟದಲ್ಲಿ ಎಷ್ಟೊಂದು ಲೀನವಾಗಿವೆ ನೋಡಿ.

ಎಂಥ ಮುದ್ದಾದ ವಿಡಿಯೋ ಇದು ಪರಸ್ಪರ ಅಪ್ಪಿಕೊಳ್ಳುತ್ತವೆ ಬೇರೆ – ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಖುಷಿಪಡುತ್ತಿದ್ದಾರೆ.

ರಾತ್ರಿ ಹೊತ್ತು ನಿಮ್ಮ ಮಕ್ಕಳು ತುಂಬಾ ಹಟ ಮಾಡುತ್ತಿದ್ದರೆ ಅಥವಾ ನಿಮಗೇ ಬೇಸರವಾಗುತ್ತಿದ್ದರೆ ಇಂಥ ವಿಡಿಯೋಗಳನ್ನು ತೋರಿಸಿ, ನೋಡಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:53 pm, Thu, 13 October 22