ಅಳಿಲಿಗೆ ಈ ಪುಟ್ಟಿ ತಿನ್ನೋದಕ್ಕೆ ಏನೋ ಕೊಡ್ತಿದಾಳೆ, ಏನಿರಬಹುದು?
Squirrel : ತಿಂಡಿಪೋತ ಈ ಅಳಿಲು ಹೇಗೆ ಈ ಪುಟ್ಟಿಯ ಜಾಕೆಟ್ ಏರಿ ಅವಳ ಕೈಯ್ಯೊಳಗಿನ ತಿಂಡಿ ತಿಂದು ಓಡಿಹೋಗುವುದು ನೋಡಿ. 1.8 ಮಿಲಿಯನ್ ಜನರು ಈ ಮುದ್ದಾದ ದೃಶ್ಯ ನೋಡಿದ್ದಾರೆ.
Viral Video : ಅಳಿಲುಗಳಿಗೆ ನಮ್ಮ ಸಾಂಗತ್ಯ ಬೇಕು. ಹಾಗಂತ ಪೂರ್ತಿ ಮನೆಗಳಲ್ಲೇ ಇರಲಾರವು, ತಮಗೆ ಬೇಕಾದ ಸ್ವಾತಂತ್ರ್ಯವನ್ನು ಪಡೆದುಕೊಂಡು ನಮ್ಮನ್ನು ದಿನಕ್ಕೊಮ್ಮೆಯಾದರೂ ಮಾತನಾಡಿಸಿ, ಕೊಟ್ಟ ತಿಂಡಿ ತಿಂದು ಮುದ್ದು ಮಾಡಿ, ಮಾಡಿಸಿಕೊಂಡು ಮತ್ತೆ ತಮ್ಮ ಜಾಗಗಳಿಗೆ ಸಾಗುವಂಥವು. ಈ ವಿಡಿಯೋ 1.8 ಮಿಲಿಯನ್ ವೀಕ್ಷಕರನ್ನು ತಲುಪಿ ವೈರಲ್ ಆಗುತ್ತಿದೆ. ಈ ಪುಟ್ಟಿ ಕೈಯಲ್ಲಿ ಏನನ್ನೋ ಹಿಡಿದುಕೊಂಡಿದ್ದಾಳೆ. ಅದಕ್ಕೇ ಅಲ್ಲವೆ ಈ ಅಳಿಲು ಹೀಗೆ ಅವಳನ್ನು ಏರಿ ಅವಳ ಕೈಲಿದ್ದ ತಿಂಡಿಯನ್ನು ತಿಂದು ಸರಕ್ಕನೆ ಮತ್ತೆ ಓಡಿಹೋಗುತ್ತಿರುವುದು.
In a world where you can be anything, be kind.. ? pic.twitter.com/gFkIKlPXsV
ಇದನ್ನೂ ಓದಿ— Buitengebieden (@buitengebieden) October 12, 2022
ನಮ್ಮಲ್ಲಿ ಸಹನೆ, ಸಹಾನುಭೂತಿ ಇದ್ದಲ್ಲಿ ಪ್ರಾಣಿ, ಪಕ್ಷಿಗಳು ತಾವಾಗಿಯೇ ಹತ್ತಿರ ಬರುತ್ತವೆ. ಮನುಷ್ಯನ ಆಂತರ್ಯವನ್ನು ಬಹುಬೇಗನೆ ಅರ್ಥ ಮಾಡಿಕೊಳ್ಳುವಂಥ ಶಕ್ತಿ ಇವುಗಳಿಗಿದೆ. ತಿಂಡಿ ಎನ್ನುವುದು ನೆಪವಷ್ಟೇ. ನಮಗೂ ಅವುಗಳ ಸಾಂಗತ್ಯ ಬೇಕು, ಅವುಗಳಿಗೂ ನಮ್ಮ ಸಾಂಗತ್ಯ ಬೇಕು. ಎಳವೆಯಿಂದಲೇ ಮಕ್ಕಳಿಗೆ ಪ್ರಾಣಿಗಳೊಂದಿಗೆ ಒಡನಾಟ ಅಭ್ಯಾಸ ಮಾಡಿಸಿದರೆ ಕರುಣೆ, ದಯೆ, ಸಹಾನುಭೂತಿ, ತಾಳ್ಮೆ, ಸಹಾಯದಂಥ ಮಾನವೀಯ ಗುಣಗಳು ಮೊಳಕೆ ಒಡೆಯುತ್ತವೆ. ಮುಂದೆ ವಿದ್ಯೆ, ಬುದ್ಧಿಯೂ ಸೇರಿ ಅವರ ವ್ಯಕ್ತಿತ್ವವು ಉದಾತ್ತವಾಗುತ್ತದೆ.
ನಿಮ್ಮ ಮನೆ ಹೀಗೆ ಬರುವ ಅಳಿಲು, ಬೆಕ್ಕು, ನಾಯಿ, ಹಸು, ಕಾಗೆ, ಪಾರಿವಾಳಗಳಿಗೆ ಆಹಾರ ಕೊಡುವ ಅಭ್ಯಾಸವನ್ನು ನೀವೂ ಮಾಡಿ, ನಿಮ್ಮ ಮಕ್ಕಳಿಗೂ ಮಾಡಿಸಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ