ಪೆನ್ನಲ್ಲಿ ಬರೆ ಎಂದರೆ ಪೆನ್ನಿನ ಮೇಲೆ ಬರೆದು ಪರೀಕ್ಷೆಗೆ ನಕಲು ಮಾಡಿದ ಕಾನೂನು ವಿದ್ಯಾರ್ಥಿ

ಪೆನ್ನುಗಳು ಮೊದಲ ನೋಟದಲ್ಲಿ ಸಾಮಾನ್ಯವೆಂದು ತೋರುತ್ತಿದ್ದರೂ, ಪೆನ್ನುಗಳ ಮೇಲೆ ಅತ್ಯಂತ ಚಿಕ್ಕ ಅಕ್ಷರಗಳಲ್ಲಿ ಪಠ್ಯವಿಷಯವನ್ನು ಕೆತ್ತಿ ಬರೆಯಲಾಗಿದೆ.

ಪೆನ್ನಲ್ಲಿ ಬರೆ ಎಂದರೆ ಪೆನ್ನಿನ ಮೇಲೆ ಬರೆದು ಪರೀಕ್ಷೆಗೆ ನಕಲು ಮಾಡಿದ ಕಾನೂನು ವಿದ್ಯಾರ್ಥಿ
ನಕಲು ಮಾಡುವುದಕ್ಕಾಗಿ ತಂದ ಪೆನ್
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Oct 14, 2022 | 7:37 PM

ಕ್ರಿಮಿನಲ್ ಕಾರ್ಯವಿಧಾನದ ಕಾನೂನನ್ನು ಅಧ್ಯಯನ (criminal procedural law) ಅಷ್ಟುಸುಲಭವಲ್ಲ. ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಉತ್ತೀರ್ಣರಾಗಲು ಹೆಚ್ಚಿನ ಶ್ರದ್ಧೆ, ಶ್ರಮ ಬೇಕಾಗುತ್ತದೆ. ಆದರೆ ಸ್ಪೇನ್‌ನಲ್ಲಿ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ನಕಲು ಹೊಡೆಯುವುದಕ್ಕಾಗಿ ತನ್ನ ಸಂಪೂರ್ಣ ಪಠ್ಯಕ್ರಮವನ್ನು ಕೇವಲ 11 ಪೆನ್ನುಗಳಲ್ಲಿ ಕೆತ್ತಿದ್ದಾನೆ.ಈ ಪೆನ್ನುಗಳ ಚಿತ್ರಗಳು ಟ್ವಿಟರ್ ನಲ್ಲಿ ವೈರಲ್ ಆಗಿವೆ. ವಿದ್ಯಾರ್ಥಿಯು ನೀಲಿ ಬಿಕ್ ಪೆನ್ನುಗಳ ಮೇಲೆ ಸಣ್ಣ ಅಕ್ಷರಗಳನ್ನು ಕೆತ್ತಿದ್ದಾನೆ. ನಕಲು ಮಾಡುತ್ತಿದ್ದಾಗ ಆತ ಸಿಕ್ಕಿ ಬಿದ್ದಿದ್ದು, ಪೆನ್ ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.  ಆ 11 ಪೆನ್ನುಗಳ ಚಿತ್ರಗಳನ್ನು ಯೊಲಂಡಾ ಡಿ ಲುಚಿ ಎಂಬ ಪ್ರಾಧ್ಯಾಪಕರು ಕಳೆದ ವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪೆನ್ನುಗಳು ಮೊದಲ ನೋಟದಲ್ಲಿ ಸಾಮಾನ್ಯವೆಂದು ತೋರುತ್ತಿದ್ದರೂ, ಪೆನ್ನುಗಳ ಪ್ಲಾಸ್ಟಿಕ್ ಕವರ್ ಮೇಲೆ ಅತ್ಯಂತ ಚಿಕ್ಕ ಅಕ್ಷರಗಳಲ್ಲಿ ಪಠ್ಯವಿಷಯವನ್ನು ಕೆತ್ತಿ ಬರೆಯಲಾಗಿದೆ.

ಪ್ರೀತಿಸಿ ಕೈಕೊಟ್ಟ ಟೀಚರ್, ಮನನೊಂದು ಆತ್ಮಹತ್ಯೆ ಮಾಡಿಕೊಂಡ 10ನೇ ಕ್ಲಾಸ್ ಸ್ಟುಡೆಂಟ್

“ನನ್ನ ಕಚೇರಿ ಸ್ವಚ್ಛ ಮಾಡುವಾಗ ನಾವು ಕೆಲವು ವರ್ಷಗಳ ಹಿಂದೆ ವಿದ್ಯಾರ್ಥಿಯಿಂದ ವಶಪಡಿಸಿಕೊಂಡ ಈ ವಸ್ತು ಸಿಕಿದೆ ಬಿಕ್ ಪೆನ್‌ಗಳಲ್ಲಿ ಕ್ರಿಮಿನಲ್ ಕಾರ್ಯವಿಧಾನದ ಕಾನೂನು. ಎಂಥಾ ಕಲೆ ” ಎಂದು ಲುಚಿ ಬರೆದಿದ್ದಾರೆ.

ಈ ಪೋಸ್ಟ್‌ಗೆ 3.8 ಲಕ್ಷ ಲೈಕ್‌ಗಳು ಮತ್ತು 24,000 ಕ್ಕೂ ಹೆಚ್ಚು ರೀಟ್ವೀಟ್‌ಗಳು ಬಂದಿವೆ. ಹಲವಾರು ಬಳಕೆದಾರರು ವಿದ್ಯಾರ್ಥಿಯು ಇಷ್ಟು ಪ್ರಯತ್ನವನ್ನು ಕಲಿಕೆಯಲ್ಲಿ ತೋರಿಸಬಹುದಿತ್ತು ಎಂದರೆ ಇನ್ನು ಕೆಲವರು ಅವರವರ ಕತೆಗಳನ್ನು ಹೇಳಿದ್ದಾರೆ. ಫೋಟೋ ತೆಗೆದು ಅದನ್ನು ಹಿರಿದಾಗಿಸಿ ನೋಡಿದಾಗ ಇದು ಕ್ರಿಮಿನಲ್ ಪ್ರಕ್ರಿಯೆ ಎಂದು ನನಗೆ ತಿಳಿಯಿತು ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. Metro.co.UK ನ ವರದಿಯ ಪ್ರಕಾರ, ಇದನ್ನು ಮಾಡಿರುವ ವಿದ್ಯಾರ್ಥಿ ಹೆಸರು ಗೊಂಜೊ ಎಂದಾಗಿದೆ.

Published On - 8:54 pm, Thu, 13 October 22

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್