ಕೂದಲ ವಿನ್ಯಾಸ ಎಲ್ಲರಿಗೂ ಒಂದು ಕ್ರೇಜ್. ಹುಡುಗರಂತೂ ಹೊಸಹೊಸ ಮಾದರಿಯಲ್ಲಿ ಹೇರ್ಸ್ಟೈಲ್ ಮಾಡಿಕೊಳ್ಳುತ್ತಾರೆ. ಯಾವುದಾದರೂ ಹೊಸ ಸಿನಿಮಾ ಬಂದರೆ ಅದರಲ್ಲಿ ಹೀರೋ, ವಿಲನ್ ಯಾವುದೇ ಹೊಸ ಮಾದರಿಯಲ್ಲಿ ಕೂದಲು ವಿನ್ಯಾಸ ಮಾಡಿಕೊಂಡಿದ್ದರೆ ಸ್ವಲ್ಪ ದಿನ ಅದೇ ಹೇರ್ಕಟ್ ಟ್ರೆಂಡ್ ಆಗುವುದನ್ನು ನೋಡಿದ್ದೇವೆ. ಎಷ್ಟೆಷ್ಟೋ ಜನ, ವಿವಿಧ ಮಾದರಿಯಲ್ಲಿ ಕೂದಲು ಕತ್ತರಿಸಿಕೊಂಡು ಸುದ್ದಿಯಾದವರೂ ಇದ್ದಾರೆ. ಆದರೆ ಇಲ್ಲೊಬ್ಬ ವಿವಿಧ ಆಹಾರಗಳನ್ನೇ ಹೇರ್ಸ್ಟೈಲ್ ಮಾಡಿಕೊಳ್ಳುತ್ತಿದ್ದಾರೆ. ಅವರ ಫೋಟೋ, ವಿಡಿಯೋಗಳು ಸಿಕ್ಕಾಪಟೆ ವೈರಲ್ ಆಗುತ್ತಿದ್ದು, ಜನರು ಹುಬ್ಬೇರಿಸುತ್ತಿದ್ದಾರೆ. ನೀವು ಬಿಎಂಆರ್ ಟ್ವಿನ್ಸ್ ಎಂಬ ಇನ್ಸ್ಟಾಗ್ರಾಂ ಅಕೌಂಟ್ ನೋಡಿದರೆ ವಿಡಿಯೋಗಳನ್ನೆಲ್ಲ ನೋಡಬಹುದು. ಅದರಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿಯ ಹೆಸರು ಪೌಲ್ ಜೋನ್ಸ್ ಎಂದಾಗಿದ್ದು, ಆತ ಸ್ವತಃ ಕ್ಷೌರಿಕ. ತಲೆಗೆ ನ್ಯೂಡಲ್ಸ್ ಅಂಟಿಸಿಕೊಂಡು, ಇಬ್ಬರು ಹೆಣ್ಣುಮಕ್ಕಳು ಅದನ್ನು ತಿನ್ನುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಸ್ವತಃ ಕ್ಷೌರಿಕನಾಗಿರುವ ಪೌಲ್ಗೆ ಇನ್ನೊಬ್ಬ ಕೇಶವಿನ್ಯಾಸಕಾರ ಹೇರ್ಸ್ಟೈಲ್ ಮಾಡಿದ್ದಾನೆ. ರಾಮೆನ್ ನ್ಯೂಡಲ್ಸ್ನ್ನು ಪೌಲ್ ತಲೆಗೆ ಪ್ಯಾಕ್ ಮಾಡಿದ್ದನ್ನು ವಿಡಿಯೋದಲ್ಲಿ ನೋಡಬಹದು. ನಿಜ ಹೇಳಬೇಕೆಂದರೆ ಪೌಲ್ ತಲೆಯಲ್ಲಿ ಕೂದಲು ಇಲ್ಲ. ಬೋಳಾಗಿರುವ ಅವರ ತಲೆಗೆ ನ್ಯೂಡಲ್ಸ್ ಸೇರಿ ಇನ್ನೂ ವಿವಿಧ ಆಹಾರಗಳನ್ನು ಪ್ಯಾಕ್ ಮಾಡುವುದು, ಆ ವಿಡಿಯೋ ವೈರಲ್ ಮಾಡುವುದು ಇವರ ಕಾಯಕವಾಗಿದೆ. ಇದನ್ನು ನೋಡಿ ನೆಟ್ಟಿಗರು ನಕ್ಕಿದ್ದಾರೆ.
ಹೀಗೆ ಎರಡು ಮೂರು ವಿಡಿಯೋಗಳನ್ನು ನೀವು ನೋಡಬಹುದು. ಒಂದರಲ್ಲಿ ನ್ಯೂಡಲ್ಸ್, ಇನ್ನೊಂದರಲ್ಲಿ ಪೋರ್ಕ್ ಮತ್ತು ಬೀನ್ಸ್ ಹೀಗೆ ವಿವಿಧ ಆಹಾರಗಳನ್ನು ಪೌಲ್ ತಲೆಗೆ ಹಾಕಿ ವಿನ್ಯಾಸ ಮಾಡಲಾಗುತ್ತದೆ. ಈ ವಿಡಿಯೋಕ್ಕೆ ಹಿನ್ನೆಲೆ ಸಂಗೀತದ ಧ್ವನಿಯನ್ನೂ ಕೊಡಲಾಗುತ್ತದೆ. ನೀವು ನೋಡಿ ಇಲ್ಲಿವೆ ವಿಡಿಯೋಗಳು.
ಇದನ್ನೂ ಓದಿ: ಡೈರೆಕ್ಟರ್ ಜತೆ ಖ್ಯಾತ ನಟಿಯ ಸೀಕ್ರೆಟ್ ಅಫೇರ್ ಬಯಲು; ಪ್ರೆಗ್ನೆನ್ಸಿ ವಿಷಯ ಕೇಳಿ ಕಣ್ಣೀರು ಹಾಕಿದ ಕಂಗನಾ
Published On - 9:29 am, Mon, 11 April 22