ಡೇಟಿಂಗ್‌ ವೇಳೆ ಕೊಟ್ಟ ಗಿಫ್ಟ್‌ ಬಗ್ಗೆ ಕೇವಲವಾಗಿ ಮಾತನಾಡಿದ ಪ್ರೇಯಸಿ; ಕೋಪದಲ್ಲಿ ಸಂಬಂಧವನ್ನೇ ಮುರಿದುಕೊಂಡ ಯುವಕ

ಸೋಷಿಯಲ್‌ ಮೀಡಿಯಾದಲ್ಲಿ ಬಳಕೆದಾರರು ತಮ್ಮ ದೈನಿಂದಿನ ಜೀವನದಲ್ಲಿ ನಡೆಯುವ ಕೆಲವೊಂದು ಖುಷಿಯ ವಿಚಾರಗಳು ಹಾಗೂ ಬೇಸರದ ಸಂಗತಿಯ ಬಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ರು ಬಳಕೆದಾರರು ತಮ್ಮ ಬ್ರೇಕಪ್‌ ಸ್ಟೋರಿಯನ್ನು ಶೇರ್‌ ಮಾಡಿದ್ದಾರೆ. ಡೇಟಿಂಗ್‌ ಹೋದಾಗ ಕೊಟ್ಟ ಉಡುಗೊರೆಯ ಬಗ್ಗೆ ಪ್ರೇಯಸಿ ಅಸಮಾಧಾನ ವ್ಯಕ್ತಪಡಿಸಿದಳೆಂದು, ಈ ವ್ಯಕ್ತಿ ಈಕೆಯ ಸಹವಾಸವೇ ಬೇಡವೆಂದು ಬ್ರೇಕಪ್‌ ಮಾಡಿಕೊಂಡಿದ್ದು, ಈ ಕುರಿತ ಪೋಸ್ಟ್‌ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಡೇಟಿಂಗ್‌ ವೇಳೆ ಕೊಟ್ಟ ಗಿಫ್ಟ್‌ ಬಗ್ಗೆ ಕೇವಲವಾಗಿ ಮಾತನಾಡಿದ ಪ್ರೇಯಸಿ; ಕೋಪದಲ್ಲಿ ಸಂಬಂಧವನ್ನೇ ಮುರಿದುಕೊಂಡ ಯುವಕ
ವೈರಲ್​ ಪೋಸ್ಟ್
Edited By:

Updated on: Feb 14, 2025 | 5:53 PM

ಸಾಮಾನ್ಯವಾಗಿ ಹೆಚ್ಚಿನ ಹುಡುಗಿಯರು ತಮ್ಮ ಪ್ರಿಯತಮ ಒಂದು ಗುಲಾಬಿ ಹೂವನ್ನು ಗಿಫ್ಟ್‌ ಕೊಟ್ರು ಬಹಳ ಸಂತೋಷದಿಂದ ಸ್ವೀಕಾರ ಮಾಡುತ್ತಾರೆ. ಆದ್ರೆ ಇಲ್ಲೊಬ್ಬಳು ಹುಡುಗಿಯ ದುರಾಸೆ ಮತ್ತು ಅಹಂಕಾರದ ಮಾತಿನಿಂದ ಸಂಬಂಧವೇ ಮುರಿದು ಬಿದ್ದಿದೆ. ಹೌದು ಡೇಟಿಂಗ್‌ ಹೋದ ಸಂದರ್ಭದಲ್ಲಿ ಆಕೆಯ ಪ್ರೇಮಿ ಹೂವುಗಳನ್ನು ಉಡುಗೊರೆಯಾಗಿ ನೀಡಿದ್ದು, ಹೂವೆಲ್ಲಾ ಸಾಮಾನ್ಯ ಉಡುಗೊರೆ, ನಾನು ಇದಕ್ಕಿಂತ ಹೆಚ್ಚಿನದ್ದಕ್ಕೆ ಅರ್ಹಳಾಗಿದ್ದೇನೆ ಎಂದು ಹೇಳಿದ್ದಾನೆ. ತಾನು ಕೊಟ್ಟ ಉಡುಗೊರೆಯ ಬಗ್ಗೆಯೇ ಕೇವಲವಾಗಿ ಮಾತನಾಡಿದ್ದಕ್ಕೆ ಬೇಸರಗೊಂಡ ಪ್ರಿಯಕರ ಸಂಬಂಧವನ್ನೇ ಮುರಿದುಕೊಂಡಿದ್ದಾನೆ. ಇವರಿಬ್ಬರ ವಾಟ್ಸಾಪ್‌ ಸಂಭಾಷಣೆಯ ಫೋಟೋ ಇದೀಗ ವೈರಲ್‌ ಆಗುತ್ತಿದೆ.

ಡೇಟಿಂಗ್‌ ಹೋಗಿ ಬಂದ ನಂತರ ಯುವತಿ ಆ ವ್ಯಕ್ತಿಗೆ ಮೆಸೇಜ್‌ ಮಾಡಿ ಹೂವುಗಳು ಸಾಮಾನ್ಯ ಗಿಫ್ಟ್‌ , ನಾನು ಇದಕ್ಕಿಂತ ಹೆಚ್ಚಿನದ್ದಕ್ಕೆ ಅರ್ಹಳಾಗಿದ್ದೇನೆ. ರಾಣಿಯಂತೆ ನೋಡಿಕೊಳ್ಳದ ವ್ಯಕ್ತಿಯನ್ನು ನಾನು ಒಪ್ಪಿಕೊಳ್ಳಬಾರದಿತ್ತು ಎಂದು ಮೆಸೇಜ್‌ ಮಾಡಿದ್ದಾಳೆ. ಈಕೆಯ ಈ ಮಾತುಗಳಿಂದ ಬೇಸರಗೊಂಡ ವ್ಯಕ್ತಿ ʼಇದಕ್ಕಿಂತ ಉತ್ತಮವಾದುದಕ್ಕೆ ನೀನು ಅರ್ಹಳಲ್ಲ, ನೀನು ಬೀದಿಯಲ್ಲಿರಲು ಅರ್ಹಳು. ನಿನ್ನ ಭವಿಷ್ಯಕ್ಕೆ ಒಳ್ಳೆಯದಾಗಲಿ ನಾನು ಸಂಬಂಧವನ್ನು ಮುರಿಯುತ್ತಿದ್ದೇನೆʼ ಎಂದು ಮೆಸೇಜ್‌ ಮಾಡಿದ್ದಾನೆ. ಇವರಿಬ್ಬರ ವಾಟ್ಸಾಪ್‌ ಸಂಭಾಷಣೆಯ ಫೋಟೋ ಇದೀಗ ವೈರಲ್‌ ಆಗುತ್ತಿದೆ.

Able-Gap 1029 ಹೆಸರಿನ ರೆಡ್ಡಿಟ್‌ ಖಾತೆಯಲ್ಲಿ ಈ ಕುರಿತ ಪೋಸ್ಟ್‌ ಒಂದನ್ನು ಶೇರ್‌ ಮಾಡಲಾಗಿದ್ದು, “ನಾನು 20 ವರ್ಷದ ಯುವಕ ಆಕೆ 20 ರ ಹರೆಯದ ಹುಡುಗಿ. ಇದು ನಮ್ಮಿಬ್ಬರ ಮೂರನೇ ಬಾರಿಯ ಡೇಟಿಂಗ್‌ ಆಗಿತ್ತು. ನಾನು ಡೇಟಿಂಗ್‌ನಲ್ಲಿ ಆಕೆಗೆ ಹೂವನ್ನು ಗಿಫ್ಟ್‌ ಕೊಟ್ಟಿದೆ, ಆದ್ರೆ ಆಕೆ ಆ ಉಡುಗೊರೆಗೆ ಯೋಗ್ಯಳಲ್ಲ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.

ವೈರಲ್​​ ಪೋಸ್ಟ್​ ಇಲ್ಲಿದೆ ನೋಡಿ:

Still shocked by this
byu/Able-Gap1029 inNicegirls

ಮೊದಲಿಗೆ ನಾನು ಇಂದು ರಾತ್ರಿ ಡೇಟಿಂಗ್‌ನಲ್ಲಿ ಒಳ್ಳೆಯ ಸಮಯ ಕಳದೆ ಎಂದು ಮೆಸೇಜ್‌ ಮಾಡಿದ ಆ ಯುವತಿ ನಂತರ, ನೀವು ಹೂ ಕೊಟ್ರಲ್ಲ ಅದು ಸಾಮಾನ್ಯ ಗಿಫ್ಟ್‌ ನಾನು ಇದಕ್ಕಿಂತ ಹೆಚ್ಚಿನದ್ದಕ್ಕೆ ಅರ್ಹಳಾಗಿದ್ದೇನೆ. ರಾಣಿಯಂತೆ ನೋಡಿಕೊಳ್ಳದ ವ್ಯಕ್ತಿಯನ್ನು ನಾನು ಒಪ್ಪಿಕೊಳ್ಳಬಾರದಿತ್ತು ಎಂದು ಮೆಸೇಜ್‌ ಮಾಡಿದ್ದಾಳೆ. ಈಕೆಯ ಸಂದೇಶವನ್ನು ನೋಡಿ ಆಘಾತಕ್ಕೊಳಗಾದ ಯುವಕ ಇದಕ್ಕಿಂತ ಉತ್ತಮವಾದುದಕ್ಕೆ ನೀನು ಅರ್ಹಳಲ್ಲ, ನೀನು ಬೀದಿಯಲ್ಲಿರಲು ಅರ್ಹಳು. ನಿನ್ನ ಭವಿಷ್ಯಕ್ಕೆ ಒಳ್ಳೆಯದಾಗಲಿ ನಾನು ಸಂಬಂಧವನ್ನು ಮುರಿಯುತ್ತಿದ್ದೇನೆ ಎಂದು ಮೆಸೇಜ್‌ ಮಾಡಿರುವ ದೃಶ್ಯವನ್ನು ವೈರಲ್‌ ಫೋಟೋದಲ್ಲಿ ಕಾಣಬಹುದು.

ಇದನ್ನೂ ಓದಿ: ವ್ಯಾಲೆಂಟೈನ್ಸ್ ಡೇಗೆ ಬಾಡಿಗೆ ಬಾಯ್ ಫ್ರೆಂಡ್: ಬೆಂಗಳೂರಿನಲ್ಲಿ ಸಂಚನ ಮೂಡಿಸಿದ QR ಕೋಡ್​​

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್‌ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಿಜವಾಗಿಯೂ ಆಕೆ ನಿಮ್ಮ ಪರಿಶುದ್ಧ ಪ್ರೀತಿಗೆ ಅರ್ಹಳಲ್ಲʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಸಹೋದರ ನೀವು ಸರಿಯಾಗಿಯೇ ಮಾಡಿದ್ದೀರಿʼ ಎಂದು ಯುವಕನಿಗೆ ಸಪೋರ್ಟ್‌ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾಋಋಊ “ಆಕೆಯ ಹುಚ್ಚುತನಕ್ಕೆ ಏನ್‌ ಹೇಳ್ಬೇಕುʼ ಎಂದು ಹೇಳಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ