Video: ಬೀದಿ ನಾಯಿಗಳನ್ನು ತನ್ನ ಮದುವೆಗೆ ಆಹ್ವಾನಿಸಿ, ಫೋಟೋ ಕ್ಲಿಕಿಸಿ ಖುಷಿಪಟ್ಟ ವ್ಯಕ್ತಿ

ಮದುವೆಯೆನ್ನುವುದು ಸಂಭ್ರಮದ ಕ್ಷಣ. ತಮ್ಮ ಜೀವನದ ಈ ಘಳಿಗೆಗೆ ಸಂಬಂಧಿಕರು ಆತ್ಮೀಯ ಗೆಳೆಯರು ಸಾಕ್ಷಿಯಾಗಬೇಕೆಂದು ಬಯಸುವುದು ಸಹಜ ಕೂಡ. ಹೀಗಾಗಿ ಮದುವೆಗೆ ತಮ್ಮ ಬಾಲ್ಯದ ಸ್ನೇಹಿತರು, ಆತ್ಮೀಯ ಗೆಳೆಯರು, ಹಿತೈಷಿಗಳು ಹಾಗೂ ಸಂಬಂಧಿಕರನ್ನು ಮಿಸ್‌ ಮಾಡದೇ ಆಹ್ವಾನಿಸುವುದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಬ್ಬ ವ್ಯಕ್ತಿ ಮಾಡಿದ ಕೆಲಸ ನೋಡಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ. ಈ ವ್ಯಕ್ತಿಯ ಮದುವೆಗೆ ಬಂದ ಸ್ಪೆಷಲ್ ಗೆಸ್ಟ್‌ಗಳನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದು, ಈ ಕುರಿತಾದ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

Video: ಬೀದಿ ನಾಯಿಗಳನ್ನು ತನ್ನ ಮದುವೆಗೆ ಆಹ್ವಾನಿಸಿ, ಫೋಟೋ ಕ್ಲಿಕಿಸಿ ಖುಷಿಪಟ್ಟ ವ್ಯಕ್ತಿ
ಮದ್ವೆಗೆ ಬೀದಿ ನಾಯಿಗಳನ್ನು ಆಹ್ವಾನಿಸಿದ ವ್ಯಕ್ತಿ
Image Credit source: Instagram

Updated on: Sep 07, 2025 | 2:56 PM

ಮದುವೆ (marriage) ಎರಡು ಕುಟುಂಬಗಳ ಬೆಸುಗೆ ಮಾತ್ರವಲ್ಲದೇ ಎರಡು ಮನಸ್ಸುಗಳ ಸಮ್ಮಿಲನ. ಗಂಡು ಹೆಣ್ಣಿನ ಪಾಲಿಗೆ ಮದುವೆ ಎನ್ನುವುದು ಸಂತೋಷದ ಹಾಗೂ ಸಂಭ್ರಮದ ಕ್ಷಣ. ಹೀಗಾಗಿ ತಮ್ಮ ಈ ಕ್ಷಣವನ್ನು ಸುಂದರವಾಗಿಸಲು ತನ್ನ ಆತ್ಮೀಯರನ್ನ, ಬಂಧು ಬಳಗವನ್ನು ಹಾಗೂ ಸ್ಪೆಷಲ್ ವ್ಯಕ್ತಿಯನ್ನು ಮದುವೆಗೆ ಆಹ್ವಾನಿಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಯ ಮದುವೆಗೆ ಸ್ನೇಹಿತರು, ಸಂಬಂಧಿಕರ ಜೊತೆಗೆ ಬೀದಿ ನಾಯಿಗಳು ಸಾಕ್ಷಿಯಾಗಿವೆ. ಹೌದು, ಬೀದಿ ನಾಯಿಗಳನ್ನು (street dogs) ಅತಿಥಿಗಳಂತೆ ಮದುವೆಗೆ ಆಹ್ವಾನಿಸಿ ಫೋಟೋ ಕ್ಲಿಕಿಸಿಕೊಂಡ ಸುಂದರ ಕ್ಷಣದ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ. ಈ ವಿಡಿಯೋ ನೋಡಿದ ಬಳಕೆದಾರರು ಇವನು ನಿಜವಾಗ್ಲೂ ಶ್ವಾನ ಪ್ರೇಮಿಯೇ ಇರಬೇಕು ಎಂದಿದ್ದಾರೆ.

ಬೀದಿ ನಾಯಿಗಳನ್ನು ಮದುವೆಗೆ ಆಹ್ವಾನಿಸಿದ ವ್ಯಕ್ತಿ

ಇದನ್ನೂ ಓದಿ
ಸಮೋಸ ತರಲು ನಿರಾಕರಿಸಿದ ಪತಿ, ಕೋಪದಲ್ಲಿ ಥಳಿಸಿ ಹಲ್ಲೆಗೆ ಯತ್ನಿಸಿದ ಪತ್ನಿ
ನೆರೆಮನೆಯ ಯುವಕನೊಂದಿಗೆ ಓಡಿಹೋದ ಒಂದೇ ಮನೆಯ ಸೊಸೆಯಂದಿರು
ಲವರ್​ ಜತೆ ಹೊರಟ ತಾಯಿಯನ್ನು ಪರಿ ಪರಿಯಾಗಿ ಬೇಡಿದ ಮಕ್ಕಳು
15 ದಿನ ಗಂಡನ ಜೊತೆ, 15 ದಿನ ಪ್ರೇಮಿ ಜೊತೆ; ಈ ಮಹಿಳೆಯ ಶೋಕಿಗೆ ಊರವರು ಶಾಕ್!

tv1indialive ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಬೀದಿ ನಾಯಿಗಳನ್ನು ತನ್ನ ಮದುವೆಗೆ ಆಹ್ವಾನಿಸಿ ಅವುಗಳ ಜೊತೆಗೆ ತನ್ನ ಜೀವನದ ಸುಂದರ ಕ್ಷಣಗಳನ್ನು ಸಂಭ್ರಮಿಸಿದ್ದಾನೆ. ಹೌದು ಈ ದೃಶ್ಯದಲ್ಲಿ ವೇದಿಕೆಯ ಮೇಲೆ ವಧುವರನಿಗೆ ಕುಟುಂಬಸ್ಥರು ಮತ್ತು ಸ್ನೇಹಿತರು ಶುಭಾಶಯ ತಿಳಿಸಿ ಫೋಟೋಗೆ ಪೋಸ್ ನೀಡಿದ್ದಾರೆ. ಇತ್ತ ತನ್ನ ಮದುವೆಗೆ ಬಂದಿದ್ದ ಬೀದಿ ನಾಯಿಗಳು ವೇದಿಕೆಯ ಮೇಲೆ ಸಾಲಾಗಿ ಕುಳಿತು, ಫೋಟೋಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ: ಹೋಗ್ಬೇಡಮ್ಮ, ನೀನು ಬೇಕು, ಕುಟುಂಬವ ತೊರೆದು ಲವರ್​ ಜತೆ ಹೊರಟ ತಾಯಿಯನ್ನು ಪರಿ ಪರಿಯಾಗಿ ಬೇಡಿದ ಮಕ್ಕಳು

ಈ ವಿಡಿಯೋ 13 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು ಝೆಡ್ + ಸೆಕ್ಯೂರಿಟಿ ಅಂದ್ರೆ ಇದೇ ಇರ್ಬೇಕು ಎಂದಿದ್ದಾರೆ. ಇನ್ನೊಬ್ಬರು ಇವರು ನಿಜವಾದ ಹಾಗೂ ಬೆಸ್ಟ್ ಅತಿಥಿಗಳು. ಇವರಿಗೆ ಹೊಟ್ಟೆ ಕಿಚ್ಚು ಇಲ್ಲ, ದ್ವೇಷ ಇಲ್ಲ, ಹಿಂದೆಯಿಂದ ಮಾತನಾಡುವ ಗುಣವಿಲ್ಲ, ಗಾಸಿಫ್ ಮಾಡಲ್ಲ, ಇವರಲ್ಲಿರುವುದು ಪ್ರೀತಿ ಮತ್ತು ಖುಷಿ ಮಾತ್ರ ಎಂದು ಕಾಮೆಂಟ್ ಮಾಡಿದ್ದಾರೆ. ಇದು ಡಾಂಗೇಶ್ ಅಣ್ಣನ ಪವರ್ ಎಂದು ಇನ್ನೊಬ್ಬರು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ