ಕರ್ಮ ಎನ್ನುವುದು ಎಲ್ಲರನ್ನು ಕಾಡುತ್ತದೆ. ಯಾರನ್ನೂ ಬಿಡುವುದಿಲ್ಲ, ಇಂದಲ್ಲದಿದ್ದರೂ ನಾಳೆಯಾದರೂ ಇದರ ಪ್ರತಿಫಲ ಕಾಣುತ್ತದೆ. ಹೀಗೆ ನಾವು ಮಾಡಿದ ಒಳ್ಳೆಯ ಮತ್ತು ಕೆಟ್ಟ ಕೆಲಸಗಳ ಪ್ರತಿಫಲ ನಮಗೆ ಸಿಕ್ಕೇ ಸಿಗುತ್ತದೆ ಎಂದು ಕರ್ಮ ಎಂಬ ಕಾನ್ಸೆಪ್ಟ್ ಅನ್ನು ಬಹುತೇಕ ಹೆಚ್ಚಿನವರು ನಂಬುತ್ತಾರೆ. ಇನ್ನೂ ಅದೆಷ್ಟೋ ಜನರು ಇನ್ಸ್ಟೆಂಟ್ ಕರ್ಮವನ್ನು ನಂಬುತ್ತಾರೆ.ಇದಕ್ಕೆ ಸೂಕ್ತ ಉದಾಹರಣೆಯೆಂಬಂತೆ ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು, ಹಸುವೊಂದು ತನಗೆ ತೊಂದರೆ ಕೊಡಲು ಬಂದ ಯುವಕನ ಸೊಂಟಕ್ಕೆ ಒದ್ದು, ತಕ್ಕ ಪಾಠ ಕಲಿಸಿದೆ. ಇದೆಲ್ಲವೂ ಕರ್ಮದ ಫಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಈ ವೈರಲ್ ವಿಡಿಯೋವನ್ನು @gharkekalesh ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಇನ್ಸ್ಟೆಂಟ್ ಕರ್ಮ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್ ವಿಡಿಯೋದಲ್ಲಿ ರಾತ್ರಿ ಹೊತ್ತಲ್ಲಿ ಒಂದಷ್ಟು ಪೋಲಿ ಹುಡುಗರು ಹಾಡನ್ನು ಹಾಡುತ್ತಾ ಹಸುಗಳ ಹತ್ತಿರ ಬರುವಂತಹ ದೃಶ್ಯವನ್ನು ಕಾಣಬಹುದು. ಅದರಲ್ಲಿದ್ದ ಯುವಕನೊಬ್ಬ ಹಸುವಿನ ಕತ್ತನ್ನು ಹಿಡಿದು ಅದಕ್ಕೆ ತೊಂದರೆ ಕೊಡಲು ಹೋಗಿದ್ದು, ಇದರಿಂದ ಕೋಪಗೊಂಡ ಆ ಹಸು ಆತನ ಸೊಂಟಕ್ಕೆ ಒದ್ದು ತಕ್ಕ ಪಾಠ ಕಲಿಸಿದೆ.
Instant Karma Kinda Kalesh b/w a Cow amd Guy
pic.twitter.com/PkEnW2octM— Ghar Ke Kalesh (@gharkekalesh) April 11, 2024
ಇದನ್ನೂ ಓದಿ: ವಿಚಿತ್ರ ನಂಬಿಕೆ; ತಮ್ಮ ಇಚ್ಛೆಗೆ ತಕ್ಕ ಗಂಡ ಸಿಗಲು ಯುವತಿಯರು ಇಲ್ಲಿ ಬ್ರಾ ನೇತು ಹಾಕಿ ಹೋಗುತ್ತಾರೆ!
ಏಪ್ರಿಲ್ 11 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.8 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಇನ್ಸ್ಟೆಂಟ್ ಕರ್ಮ ಅಂದ್ರೆ ಇದೇ ಅಲ್ವೇ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ