Viral Video: ಗೋಲ್​ಗಪ್ಪ ಐಸ್ ಕ್ರೀಮ್ ತಿಂದಿದ್ದೀರಾ? ವೈರಲ್ ಆದ ಹೊಸ ರೆಸಿಪಿಯ ವಿಡಿಯೋ ನೋಡಿ

ವೈರಲ್​ ಆದ ಈ ವಿಡಿಯೋದಲ್ಲಿ ರಸ್ತೆಬದಿಯ ಅಂಗಡಿಯೊಂದರಲ್ಲಿ ಗೋಲ್​ಗಪ್ಪವನ್ನು ಪುಡಿ ಮಾಡಿ ಐಸ್‌ ಕ್ರೀಮ್ ಅನ್ನು ತಯಾರಿಸಿದ್ದಾರೆ. ಈ ಹೊಸ ವಿಧಾನದ ವಿಲಕ್ಷಣ ಆಹಾರ ಸಂಯೋಜನೆಯನ್ನು ನೆಟ್ಟಿಗರು ಇಷ್ಟಪಟ್ಟಿಲ್ಲ. ಈ ತಿನಿಸು ನೋಡಿ ಹಲವರು ಅಸಾಮಾಧಾನ ಹೊರಹಾಕಿದ್ದಾರೆ.

Viral Video: ಗೋಲ್​ಗಪ್ಪ ಐಸ್ ಕ್ರೀಮ್ ತಿಂದಿದ್ದೀರಾ? ವೈರಲ್ ಆದ ಹೊಸ ರೆಸಿಪಿಯ ವಿಡಿಯೋ ನೋಡಿ
ಗೋಲ್​ಗಪ್ಪ ಐಸ್ ಕ್ರೀಮ್
Edited By:

Updated on: Feb 01, 2022 | 10:32 AM

ಸಾಮಾಜಿಕ ಜಾಲತಾಣದಲ್ಲಿ ಹೊಸ ಹೊಸ ಖಾದ್ಯಗಳ ವಿಡಿಯೋ ಸಾಕಷ್ಟು ಹರಿದಾಡುತ್ತವೆ. ಅವುಗಳಲ್ಲಿ ಕೆಲವನ್ನು ಜನರು ಇಷ್ಟ ಪಟ್ಟಿದ್ದರೆ ಇನ್ನು ಕೆಲವು ವಿಲಕ್ಷಣ ಆಹಾರ ಸಂಯೋಜನೆಗಳು ಹೆಚ್ಚಿನ ಜನರಿಗೆ ಇಷ್ಟವಾಗುವುದಿಲ್ಲ. ಇದೀಗ ಮತ್ತೊಂದು ಹೊಸ ತಿನಿಸಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) ಸಖತ್ ವೈರಲ್ ಆಗುತ್ತಿದೆ. ಗ್ರೇಟ್​ ಇಂಡಿಯನ್​ ಫುಡ್ಡಿ(thegreatindianfoodie) ಎಂಬ ಇನ್​ಸ್ಟಾಗ್ರಾಮ್(Instagram)​ ಖಾತೆಯಲ್ಲಿ ಗೋಲ್​ಗಪ್ಪ ಐಸ್ ಕ್ರೀಮ್ ರೋಲ್ ಮಾಡುವ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಲಕ್ಷಕ್ಕೂ ಹೆಚ್ಚು ವ್ಯೂವ್ಸ್​ ಪಡೆದು ಈ ವಿಡಿಯೋ ವೈರಲ್​ ಆಗಿದೆ.

ವೈರಲ್​ ಆದ ಈ ವಿಡಿಯೋದಲ್ಲಿ ರಸ್ತೆಬದಿಯ ಅಂಗಡಿಯೊಂದರಲ್ಲಿ ಗೋಲ್​ಗಪ್ಪವನ್ನು ಪುಡಿ ಮಾಡಿ ಐಸ್‌ ಕ್ರೀಮ್ ಅನ್ನು ತಯಾರಿಸಿದ್ದಾರೆ. ಈ ಹೊಸ ವಿಧಾನದ ವಿಲಕ್ಷಣ ಆಹಾರ ಸಂಯೋಜನೆಯನ್ನು ನೆಟ್ಟಿಗರು ಇಷ್ಟಪಟ್ಟಿಲ್ಲ. ಈ ತಿನಿಸು ನೋಡಿ ಹಲವರು ಅಸಾಮಾಧಾನ ಹೊರಹಾಕಿದ್ದಾರೆ. ತಮ್ಮ ಅನಿಸಿಕೆಗಳನ್ನು ಕಾಮೆಂಟ್ ವಿಭಾಗದಲ್ಲಿ ತಿಳಿಸಿದ್ದಾರೆ. ಈ ರೀತಿಯ ಆಹಾರ ಸೇವಿಸಲು ಸಾಧ್ಯವಿಲ್ಲ ಎಂದು ಕೆಲವರು ಕಮೆಂಟ್​ ಮಾಡಿದ್ದರೆ ಮತ್ತೆ ಕೆಲವರು ಇದನ್ನು ನೋಡುವುದಕ್ಕೆ ಚಿತ್ರಹಿಂಸೆಯಾಗುತ್ತಿದೆ ಎಂದು ಕಮೆಂಟ್​ ಮಾಡಿದ್ದಾರೆ.

ಮೊದಲು ಗೋಲ್​ಗಪ್ಪ ತಯಾರಿಯಲ್ಲಿ ನಿರತರಾದ ಅಂಗಡಿ ಮಾಲಿಕ, ಆಲೂಗಡ್ಡೆ, ಬಟಾಣಿಯನ್ನು ಪೂರಿಯಲ್ಲಿ ಇಟ್ಟಿದ್ದಾನೆ. ಬಳಿಕ ಗೋಲ್​ಗಪ್ಪ ಸಿದ್ದವಾದ ಮೇಲೆ ಅದನ್ನು ಪುಡಿ ಮಾಡಿ ಐಸ್​ಕ್ರೀಮ್​ ಹದಕ್ಕೆ ಮಾಡಿಕೊಂಡಿದ್ದಾನೆ. ಬಳಿಕ ಫ್ರೀಜ್​ ಮಾಡಿದ್ದು, ಐಸ್ ​ಕ್ರೀಮ್​ ರೋಲ್​ ರೀತಿಯಲ್ಲಿ ಸಿದ್ಧಮಾಡಿಕೊಂಡಿದ್ದಾನೆ. ನಂತರ ಸರ್ವಿಂಗ್​ ಬೋಲ್​ಗೆ ಈ ಗೋಲ್​ಗಪ್ಪ ಐಸ್ ಕ್ರೀಮ್​ ಹಾಕಿ ಮೇಲೆ ಮತ್ತೆ ಪೂರಿ ಪುಡಿ ಮಾಡಿ ಹಾಕಿದ್ದಾರೆ.  ಒಂದೇ ರೀತಿಯ ಗೋಲ್​ಗಪ್ಪ ತಿಂದು ಬೋರ್​ ಆಗಿದೆಯೇ ಎಂಬ ಶೀರ್ಷಿಕೆಯಡಿಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ:
Viral Video: ಆನೆ ಜತೆಗೆ ಫುಟ್​ಬಾಲ್​ ಆಡುತ್ತಿದ್ದ ಬಾಲಕಿ ಆನೆ ಹಾಲು ಕುಡಿಯಲು ಮುಂದಾಗಿದ್ದೇಕೆ? ಇಲ್ಲಿದೆ ವೈರಲ್​ ವಿಡಿಯೋ

ಮ್ಯಾಗಿ ಪರೋಟಾ ನೋಡಿ ಹೀಗೂ ಮಾಡಬಹುದಾ ಎಂದ ನೆಟ್ಟಿಗರು; ವಿಡಿಯೋ ವೈರಲ್​​