Viral Video : ಕೊರೊನಾದ ಹಾವಳಿಯಲ್ಲಿ ಬಹಳಷ್ಟು ಪ್ರಯೋಗಗಳಿಗೆ ಒಳಗಾದ ತಿನಿಸೆದೆಂದರೆ ಮ್ಯಾಗಿಯೇ! ಮಿಲಿಯನ್ಗಟ್ಟಲೆ ವಿಡಿಯೋಗಳೇ ಇದಕ್ಕೆ ಸಾಕ್ಷಿ. ಒಂದಕ್ಕಿಂತ ಒಂದು ಭಿನ್ನ ಈ ರೆಸಿಪಿಗಳು. ಚಾಕೋಲೇಟ್ ಮ್ಯಾಗಿಯಿಂದ ಹಿಡಿದು ಏನೇನೆಲ್ಲಾ. ಈಗ ಈ ರೆಸಿಪಿಗಳ ಪಾಲಿಗೆ ಈ ಹೊಸ ರೆಸಿಪಿ ಸೇರುತ್ತದೆಯಾ? ನೆಟ್ಟಿಗರು ಬಿಲ್ಕುಲ್ ಇಲ್ಲ ಎನ್ನುತ್ತಿದ್ದಾರೆ. ಹೌದು. ರಾಸ್ಬೆರ್ರಿ ಐಸ್ಕ್ರೀಮ್ ಕ್ಯಾಂಡಿಯನ್ನು ಮ್ಯಾಗಿ ಜೊತೆ ಕುದಿಸಿ ಮಾಡುವ ಹೊಸ ರೆಸಿಪಿ ಇದು! ಕೇಳುವುದಕ್ಕೆ ವಿಚಿತ್ರವೆನ್ನಿಸುತ್ತದೆಯಲ್ಲ? ನೆಟ್ಟಿಗರನ್ನು ಈ ವಿಡಿಯೋ ಹುಯಿಲೆಬ್ಬಿಸಿದೆ. ಆರ್ಜೆ ಮೋಹನ್ ಎನ್ನುವವರು ತಮ್ಮ ಇನ್ಸ್ಟಾಗ್ರಾಂ ಖಾತೆಯೊಳಗೆ ಈ ವಿಡಿಯೋ ಹಂಚಿಕೊಂಡಿದ್ದಾರೆ. ರಸ್ತೆಬದಿಯ ವ್ಯಾಪಾರಿಯೊಬ್ಬ ತಯಾರಿಸುವ ಖಾದ್ಯ ಇದಾಗಿದೆ. ವಿಡಿಯೋ ನೋಡಿ ಸಂತುಷ್ಟರಾಗಿ.
ಅತ್ಯಂತ ಸರಳ ಅಲ್ಲವೆ ಈ ತಿನಿಸನ್ನು ತಯಾರಿಸುವ ವಿಧಾನ? ನಿಜ ಹೇಳಿ, ನಿಮಗೆ ಈ ರೆಸಿಪಿ ಇಷ್ಟವಾಯಿತಾ? ನೋಡಿದ ಯಾರಾದರೂ ಇದನ್ನು ಮಾಡಿ ತಿನ್ನಬೇಕು ಎನ್ನುವ ಆಸೆ ಉಂಟಾಗುತ್ತದೆಯಾ? ಅದರಲ್ಲೂ ಮ್ಯಾಗಿ ಟೇಸ್ಟ್ಮೇಕರ್ ಸೇರಿಸಿದ ಮೇಲೆ ರಾಸ್ಬೆರ್ರಿ ಫ್ಲೇವರ್ನ ಐಸ್ಕ್ಯಾಂಡಿಯನ್ನು ಸುರಿದು ಕುದಿಸುವುದು. ಅದನ್ನು ಕೋನ್ಗೆ ಹಾಕುವುದು. ಅದರ ಮೇಲೆ ಚೀಸ್ನ ತುರಿ ಹಾಕಿ ಅಲಂಕರಿಸುವುದು. ಕೈಯಲ್ಲೇ ಕೋನ್ ಮುರಿದು ಹೋಗಿದೆ. ಇನ್ನು ಪಾಪ ಆ ಗ್ರಾಹಕ. ತಿನ್ನುವಾಗ ಆ ಗ್ರಾಹಕನ ಮುಖವನ್ನು ಒಮ್ಮೆ ತೋರಿಸಿದ್ದರೆ ಚೆನ್ನಾಗಿರುತ್ತಿತ್ತು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:14 pm, Mon, 12 September 22