Viral Video: ವ್ಯಕ್ತಿ ತಯಾರಿಸಿದ ವಾಟರ್​ಮೆಲಾನ್​ ಪಿಜ್ಜಾ ನೋಡಿ ತಯಾರಿಗೆ ಮುಂದಾದ ಆಸ್ಟ್ರೇಲಿಯಾ ಡಾಮಿನೋಸ್​!

ಓಲಿ ಪ್ಯಾಟರ್ಸನ್ ಅವರು ಈ ಹೊಸ ಬಗೆಯ ಕಲ್ಲಂಗಡಿ ಪಿಜ್ಜಾವನ್ನು ಜನರು ತಯಾರಿಸಲು ಪ್ರಯತ್ನಿಸಬೇಕೆಂದು ಬಯಸಿದ್ದರು. ಮೊದಲಿಗೆ ವಿಡಿಯೋವನ್ನು ಟಿಕ್ಟಾಕ್​ನಲ್ಲಿ ಹರಿಬಿಟ್ಟಿದ್ದರು. ಬಳಿಕ ಇನ್ಸ್ಟಾಗ್ರಾಂನಲ್ಲಿಯೂ ವಿಡಿಯೋ ಹಂಚಿಕೊಂಡಿದ್ದಾರೆ.

Viral Video: ವ್ಯಕ್ತಿ ತಯಾರಿಸಿದ ವಾಟರ್​ಮೆಲಾನ್​ ಪಿಜ್ಜಾ ನೋಡಿ ತಯಾರಿಗೆ ಮುಂದಾದ ಆಸ್ಟ್ರೇಲಿಯಾ ಡಾಮಿನೋಸ್​!
ಕ್ತಿ ತಯಾರಿಸಿದ ವಾಟರ್​ಮೆಲಾನ್​ ಪಿಜ್ಜಾ ನೋಡಿ ತಯಾರಿಗೆ ಮುಂದಾದ ಆಸ್ಟ್ರೇಲಿಯಾ ಡಾಮಿನೋಸ್​!
Edited By:

Updated on: Aug 22, 2021 | 10:04 AM

ಓಲಿ ಪ್ಯಾಟರ್ಸನ್ ಅವರಿಗೆ ಅಡುಗೆ ಮಾಡುವುದೆಂದರೆ ಇಷ್ಟ. ಅವರ ಇನ್​ಸ್ಟಾಗ್ರಾಂ ಅಧಿಕೃತ ಖಾತೆಯಲ್ಲಿ ಅವರ ಹವ್ಯಾಸದ ವಿಡಿಯೋಗಳನ್ನು ಸಾಮಾನ್ಯವಾಗಿ ಹಂಚಿಕೊಳ್ಳುತ್ತಿರುತ್ತಾರೆ. ಅಡುಗೆ ಮಾಡುವುದು ಅವರ ಕಲೆ ಮತ್ತು ಹವ್ಯಾಸಗಳಲ್ಲಿ ಒಂದು. ರುಚಿಕರವಾದ ತಿನಿಸುಗಳನ್ನು ತಯಾರಿಸಿದ ಬಳಿಕ ಅವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಾರೆ. ಅದೇನೇ ಆಗಿರಲಿ ಇದೀಗ ಹೊಸದಾದ ತಿನಿಸಿನ ವಿಡಿಯೋವನ್ನು ಟಿಕ್​ಟಾಕ್​ ಬಳಿಕ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ನೀವು ಎಂದಾದರೂ ವಾಟರ್ಮೆಲನ್ ಪಿಜ್ಜಾವನ್ನು ತಿಂದಿದ್ದೀರಾ? ಹೇಳಲು ಹೊಸದಾಗಿ ರುವಾಗ ರುಚಿ ಕೂಡಾ ಹೊಸದಾಗಿಯೇ ಇರುತ್ತೆ ಅಲ್ವೇ? ಹಾಗದ್ರೆ ವಾಟರ್​ಮೆಲಾನ್​ ಪಿಜ್ಜಾ ತಯಾರಿಸುವುದು ಹೇಗೆ ಎಂಬುದು ಈ ಕೆಳಗಿನ ವಿಡಿಯೋದಲ್ಲಿದೆ.

ಈ ಹೊಸ ವಿಧದ ಪಿಜ್ಜಾವನ್ನು ನೆಟ್ಟಿಗರು ಅಷ್ಟು ಇಷ್ಟಪಟ್ಟಿಲ್ಲ. ಆದರೆ ಆಸ್ಟ್ರೇಲಿಯಾ ಡಾಮಿನೋಸ್ ಈ ಪಿಜ್ಜಾ ತಯಾರಿಸಲು ನಿರ್ಧರಿಸಿತು. ಈ ಕುರಿತಂತೆ ಪಿಜ್ಜಾ ಆಯ್ಕೆಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ಎಂದು ನೆಟ್ಟಿಗರನ್ನು ಪ್ರಶ್ನೆ ಮಾಡಿದೆ.

ಓಲಿ ಪ್ಯಾಟರ್ಸನ್ ಅವರು ಈ ಹೊಸ ಬಗೆಯ ಕಲ್ಲಂಗಡಿ ಪಿಜ್ಜಾವನ್ನು ಜನರು ತಯಾರಿಸಲು ಪ್ರಯತ್ನಿಸಬೇಕೆಂದು ಬಯಸಿದ್ದರು. ಮೊದಲಿಗೆ ವಿಡಿಯೋವನ್ನು ಟಿಕ್​ಟಅಕ್​ನಲ್ಲಿ ಹರಿಬಿಟ್ಟಿದ್ದರು. ಬಳಿಕ ಇನ್​ಸ್ಟಾಗ್ರಾಂನಲ್ಲಿಯೂ ವಿಡಿಯೋ ಹಂಚಿಕೊಂಡಿದ್ದಾರೆ.

ಇವರು ಕಲ್ಲಂಗಡಿ ಹಣ್ಣಿನ ಮೇಲೆ ಪಿಜ್ಜಾ ತಯಾರಿಸುತ್ತಾರೆ ಬಳಿಕ ಸಾಸ್ ಅನ್ನು ಹಾಕುತ್ತಾರೆ. ಬಳಿಕ ಪಿಜ್ಜಾ ಆಕಾರದಲ್ಲಿ ಕಟ್ ಮಾಡಿದ್ದಾರೆ. ತಯಾರಿಸುವ ವಿಧಾನವನ್ನು ವಿಡಿಯೋದಲ್ಲಿ ನೋಡಬಹುದು. ನಾನು ತಯಾರಿಸಿದ ಹೊಸ ವಿಧಾನದ ವಾಟರ್ಮೆಲಾನ್ ಪಿಜ್ಜಾವನ್ನು ಟಿಕ್ಟಾಕ್ ಬಳಕೆದಾರರು ಪ್ರಯತ್ನಿಸಿರಬಹುದು. 5 ನಿಮಿಷ ವಾಟರ್ಮೆಲಾನ್ಅನ್ನು ಫ್ರೈ ಮಾಡಿ. ಹೇಳಿದಂತೆಯೇ ವಾಟರ್​ಮೆಲಾನ್​ ಪಿಜ್ಜಾ ತಯಾರಿಸಿ ಸವಿಯಿರಿ.. ಎಂಜಾಯ್ ಮಾಡಿ ಎಂದು ಓಲಿ ಪ್ಯಾಟರ್ಸನ್ ಹೇಳಿದ್ದಾರೆ.

ಇದನ್ನೂ ಓದಿ:

Bitcoin: ಡಾಮಿನೋಸ್ ಪಿಜ್ಜಾ, ಬಾಸ್ಕಿನ್ ರಾಬಿನ್ ಐಸ್​ಕ್ರೀಮ್​ ಬಿಟ್​ಕಾಯಿನ್​ ಮೂಲಕವೇ ಭಾರತದಲ್ಲಿ ಖರೀದಿಸಬಹುದು

Pizza: ಮನೆಯಲ್ಲೇ ಸರಳ ವಿಧಾನದ ಜತೆ ಪಿಜ್ಜಾ ಮಾಡಿ ಸವಿಯಿರಿ