ಕಾಡಿನಲ್ಲಿರುವ ಇತರೆ ಪ್ರಾಣಿಗಳಂತೆ ಕರಡಿಗಳು ಕೂಡಾ ಮನುಷ್ಯನ ಮೇಲೆ ದಾಳಿ ನಡೆಸುತ್ತವೆ. ಇನ್ನೂ ಈ ದೈತ್ಯ ಕರಡಿಗಳೇನಾದ್ರೂ ಕಣ್ಣ ಮುಂದೆ ಬಂದ್ರೆ ನಾವೆಲ್ರೂ ಮಾರು ದೂರು ಓಡಿ ಬಿಡುತ್ತೇವೆ. ಆದ್ರೆ ಇಲ್ಲೊಬ್ಬ ಭಂಡ ಧೈರ್ಯದ ಯುವಕ ಹೋಗಿ ಹೋಗಿ ಕಾಡಿನಲ್ಲಿರುವ ಕರಡಿಯ ಗುಹೆಯೊಳಗೆಯೇ ಕೂರಲು ಹೋಗಿದ್ದಾನೆ. ಅದೇ ಸಂದರ್ಭದಲ್ಲಿ ದೈತ್ಯ ಕರಡಿಯೊಂದು ಎಂಟ್ರಿ ಕೊಟ್ಟಿದ್ದು, ಅಯ್ಯೋ ದೇವ್ರೆ ಹೇಗಪ್ಪಾ ಈ ಕರಡಿಯಿಂದ ಪಾರಾಗೋದು ಎಂದು ಪರದಾಡಿದ್ದಾನೆ. ಜೊತೆಗೆ ಆ ಸಂದರ್ಭದಲ್ಲಿ ಬಹಳ ತಾಳ್ಮೆಯಿಂದ ವರ್ತಿಸಿದ ಯುವಕ ಕರಡಿಯ ದಾಳಿಯಿಂದ ಸ್ವಲ್ಪದರಲ್ಲಿಯೇ ಪಾರಾಗಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಈ ಕುರಿತ ಪೋಸ್ಟ್ ಒಂದನ್ನು ಸರ್ಬಿಯಾದ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸ್ಟೀಫನ್ ಜಾಂಕೋವಿಕ್ (stefan_jankovich) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಾಡಿಗೆ ಹೋಗಿದ್ದಂತಹ ಜಾಂಕೋವಿಕ್ ಕರಡಿಗಳು ಮಲಗುವಂತಹ ಗುಹೆಗಳಿಗೆ ಒಮ್ಮೆ ಭೇಟಿ ಕೊಡ್ಬೇಕಲ್ವಾ ಎಂದು ಕರಡಿಯ ಗುಹೆಗೆ ಹೋಗಿದ್ದು, ಅಲ್ಲಿ ಅವರು ಹಾಯಾಗಿ ಕುಳಿತಿದ್ದ ಸಂದರ್ಭದಲ್ಲಿ ದೈತ್ಯ ಕರಡಿಯೊಂದಿ ಎಂಟ್ರಿ ಕೊಟ್ಟಿದೆ. ಆದ್ರೆ ವಿಶೇಷ ಏನಪ್ಪಾ ಅಂದ್ರೆ ಬೇರೆ ಕರಡಿಗಳಂತೆ ಈ ಕರಿಡಿಯೂ ಕೋಪದಲ್ಲಿ ಜಾಂಕೋವಿಕ್ ಮೇಲೆ ಯಾವುದೇ ದಾಳಿಯನ್ನು ಮಾಡಿಲ್ಲ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಜಾಂಕೋವಿಕ್ ಗುಹೆಯಲ್ಲಿ ಕುಳಿತಿದ್ದ ಸಂದರ್ಭದಲ್ಲಿ ಕರಡಿಯೊಂದು ಗುಹೆಯ ಸಮೀಪ ಬರುವಂತಹ ದೃಶ್ಯವನ್ನು ಕಾಣಬಹುದು. ಹೀಗೆ ಬಂದ ಯಾವುದೇ ದಾಳಿಯನ್ನು ಮಾಡದೇ ಒಂದು ಬಾರಿ ಕ್ಯಾಮೆರಾ ಇನ್ನೊಂದು ಬಾರಿ ಜಾಂಕೋವಿಕ್ ಮುಖವನ್ನು ನೋಡುತ್ತಾ ತಾಳ್ಮೆಯಿಂದ ವರ್ತಿಸಿದೆ.
ಇದನ್ನೂ ಓದಿ: ಫುಡ್ ಪಾರ್ಸೆಲ್ ಕೊಡಲು ಬಂದು ಶೂ ಕದ್ದೊಯ್ದ ಸ್ವಿಗ್ಗಿ ಡೆಲಿವರಿ ಬಾಯ್
ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ 69.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಕರಡಿ ಎಂಟ್ರಿ ಕೊಟ್ಟಿದ್ದು ನೋಡಿ ನನಗೆ ಒಮ್ಮೆಗೆ ಭಯವಾಯ್ತುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಕರಡಿ ದಾಳಿ ಮಾಡದಿರುವುದನ್ನು ಕಂಡು ನನಗೆ ಆಶ್ಚರ್ಯವಾಯ್ತುʼ ಎಂದು ಹೇಳಿದ್ದಾರೆ.
ವೈರಲ್ ಸುದದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ