Viral Video : ಕಾರಿನೊಳಗೆ ಕುಕೀಸ್​ ಹಿಟ್ಟು ಇಡುತ್ತಾನೆ ಈತ, ಮುಂದೇನಾಗುತ್ತದೆ?

Cookies : ಮರಳಿನ ಶಾಖದಲ್ಲಿ, ತವಾದ ಬಿಸಿಯಲ್ಲಿ, ಓವನ್ನಿನಲ್ಲಿ ಹೀಗೆಲ್ಲ ಕುಕೀಸ್​ ಬೇಯಿಸಿರುತ್ತೀರಲ್ಲವೆ? ಇಲ್ಲೊಬ್ಬ ಪ್ರಯೋಗಧೀರ ಕಾರಿನೊಳಗೆ ಕುಕೀಸ್​ ಬೇಯಿಸಿದ್ದಾನೆ! ಈ ವಿಡಿಯೋ ನೋಡಿದರೆ ಹೇಗೆಂದು ತಿಳಿಯುತ್ತದೆ.

Viral Video : ಕಾರಿನೊಳಗೆ ಕುಕೀಸ್​ ಹಿಟ್ಟು ಇಡುತ್ತಾನೆ ಈತ, ಮುಂದೇನಾಗುತ್ತದೆ?
ಬೆಂದಿವೆಯೇ?
Updated By: ಶ್ರೀದೇವಿ ಕಳಸದ

Updated on: Sep 15, 2022 | 3:43 PM

Viral Video : ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹೀಗೆ ಪ್ರಯೋಗಾತ್ಮಕ ವಿಡಿಯೋಗಳು ಅಪ್​ಲೋಡ್ ಆಗುತ್ತಿರುತ್ತವೆ. ಕೆಲವೊಂದು ವಿಚಿತ್ರವೂ ವಿಲಕ್ಷಣವೂ ಎನ್ನಿಸುವ ಸಾಧ್ಯತೆಗಳೂ ಇರುತ್ತವೆ. ಮ್ಯಾಟ್​ ಪೀಟರ್ಸ್​ನ್ ಎನ್ನುವವರು ತಮ್ಮ ಇನ್​ಸ್ಟಾಗ್ರಾಂ ಪುಟದಲ್ಲಿ ಆಗಾಗ ಇಂಥ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಹೊಸಬಗೆಯಲ್ಲಿ ಹೊಸ ವಿಧಾನಗಳಲ್ಲಿ ತಿಂಡಿತಿನಿಸುಗಳನ್ನು ತಯಾರಿಸುವಲ್ಲಿ ಇವರು ಸದಾ ಉತ್ಸುಕರು. ಇತ್ತೀಚೆಗೆ ಪೋಸ್ಟ್ ಮಾಡಲಾದ ಈ ವಿಡಿಯೋದಲ್ಲಿ ಅವರು, ಐದು ಗಂಟೆಗಳ ಕಾಲ ಕುಕೀಸ್​ ಹಿಟ್ಟನ್ನು ಕಾರಿನಲ್ಲಿಟ್ಟು ಬೇಯಿಸುವಲ್ಲಿ ಯಶಸ್ವಿಯಾಗಿದ್ದಾರೆ!

 

ಇದನ್ನೂ ಓದಿ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಕಾರಿನಲ್ಲಿ ಚಾಕೋ ಚಿಪ್ಸ್​ ಕುಕೀಸ್​ ಬೇಯಿಸಿದ್ದೇನೆ ಎಂಬ ಶೀರ್ಷಿಕೆಯಡಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಹಿಟ್ಟು ಬೇಯಲು ಬೇಕಾಗಿರುವಂಥ ತಾಪಮಾನ ಇದೆಯೋ ಇಲ್ಲವೋ ಎಂಬುದನ್ನು ದೃಢಪಡಿಸುವ ಫ್ರೇಮ್​ನಿಂದ ಈ ವಿಡಿಯೋ ಆರಂಭವಾಗುತ್ತದೆ. ಕಾರಿನೊಳಗೆ ಕುಕೀಸ್​ ಹಿಟ್ಟಿನ ಸಣ್ಣಸಣ್ಣ ಉಂಡೆಗಳನ್ನು ಮಾಡಿ ಇಟ್ಟಾಗ, ಸೂರ್ಯನ ಕಿರಣಗಳು ಕಾರಿನ ಗಾಜಿನಿಂದ ನೇರ ಆ ಉಂಡೆಗಳ ಮೇಲೆ ಬೀಳುತ್ತವೆ. ನಂತರ ಐದು ಗಂಟೆಗಳಾದ ಮೇಲೆ ಕುಕೀಸ್​ ಬೆಂದಿದೆಯೇ ಎಂದು ಪರೀಕ್ಷಿಸಲು ಸ್ನೇಹಿತನೊಬ್ಬನಿಗೆ ಕೊಡುತ್ತಾನೆ. ಇಬ್ಬರೂ ಸೇರಿ ಬೆಂದ ಕುಕೀಸ್​ ತಿಂದು ಬಾಯಿ ಚಪ್ಪರಿಸುತ್ತಾರೆ.

ಈ ವಿಡಿಯೋ 3.5 ಮಿಲಿಯನ್​ ವೀಕ್ಷಕರನ್ನು ಸೆಳೆದಿದೆ. ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಲು ನೆಟ್ಟಿಗರನ್ನು ಹುರಿದುಂಬಿಸಿದೆ. ‘ನಾನು ಕೂಡ ಇದೇ ರೀತಿ ಮಾಡಲು ಪ್ರಯತ್ನಿಸುತ್ತೇನೆ’ ಎಂದು ಒಬ್ಬರು ಹೇಳಿದ್ದಾರೆ. ‘ಬಹುಶಃ ಇದು ಜಾಸ್ತಿ ಬೆಂದಹಾಗಿದೆ’ ಎಂದು ಮತ್ತೊಬ್ಬರು ಹೇಳಿದ್ದಾರೆ. ‘ಸೌರಶಕ್ತಿಯ ಮಹಿಮೆ’ ಎಂದು ಮಗದೊಬ್ಬರು ಶ್ಲಾಘಿಸಿದ್ದಾರೆ.

ನೀವೂ ಪ್ರಯತ್ನಿಸುತ್ತೀರಾ ಒಮ್ಮೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ