Shocking Video: ನಾಯಿಯನ್ನು ಹಗ್ಗದಲ್ಲಿ ಕಟ್ಟಿ ಟೆರೇಸ್‌ನಿಂದ ನೇತಾಡಿಸಿದ ಯುವಕ; ಶಾಕಿಂಗ್ ವಿಡಿಯೋ ವೈರಲ್

Viral News: ತಮ್ಮ ಮನೆಯಲ್ಲಿ ಸಾಕಿದ್ದ ನಾಯಿಗೆ ಹಗ್ಗವನ್ನು ಕಟ್ಟಿ, ಟೆರೇಸ್​ನಿಂದ ನೇತಾಡಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ಕಾಮಿಡಿ ಚಾನೆಲ್​ನಲ್ಲಿ ಪ್ರಕಟವಾಗಿದೆ. ಫೇಸ್‌ಬುಕ್​ನಲ್ಲಿ ಹರಿದಾಡುತ್ತಿರುವ ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಬ್ರಿಜೇಶ್‌ ಲಾಲ್‌ ಎಂಬಾತ ಈ ನಿಷ್ಕರುಣೆಯ ಕೃತ್ಯ ಎಸಗಿದ್ದು, ನಾಯಿಯ ರೀಲ್‌ ಅನ್ನು ತನ್ನ 'ಕಾಮಿಡಿ' ಪೇಜ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ.

Shocking Video: ನಾಯಿಯನ್ನು ಹಗ್ಗದಲ್ಲಿ ಕಟ್ಟಿ ಟೆರೇಸ್‌ನಿಂದ ನೇತಾಡಿಸಿದ ಯುವಕ; ಶಾಕಿಂಗ್ ವಿಡಿಯೋ ವೈರಲ್
ನಾಯಿ
Image Credit source: istock

Updated on: Jul 18, 2024 | 4:37 PM

ಯುವಕನೊಬ್ಬ ತನ್ನ ಕಟ್ಟಡದ ಟೆರೇಸ್‌ನಿಂದ ನಾಯಿಯನ್ನು ಹಗ್ಗಕ್ಕೆ ಕಟ್ಟಿ ತೂಗಾಡುತ್ತಿರುವ ದೃಶ್ಯ ವೈರಲ್ ಆಗಿದೆ. ತಾರಸಿಯ ತುದಿಯಲ್ಲಿ ನಿಂತು ಹಗ್ಗದಿಂದ ಕಟ್ಟಿದ ನಾಯಿಯನ್ನು ತನ್ನ ಮೋಜಿಗಾಗಿ ನೆಲದ ಮೇಲೆ ಬಿಸಾಡಿದ್ದಾನೆ. ಫೇಸ್‌ಬುಕ್‌ ಇನ್​ಫ್ಲುಯೆನ್ಸರ್ ಆಗಿರುವ ಬ್ರಿಜೇಶ್‌ ಲಾಲ್‌ ಎಂಬಾತ ಈ ಭಯಾನಕ ಕೃತ್ಯ ಎಸಗಿದ್ದು, ನಾಯಿಯ ರೀಲ್‌ ಅನ್ನು ತನ್ನ ‘ಕಾಮಿಡಿ’ ಪೇಜ್‌ನಲ್ಲಿ ‘ಕಾಮಿಡಿ ಅಫೀಶಿಯಲ್’ ಎಂಬ ಶೀರ್ಷಿಕೆಯಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಈ ಅಮಾನವೀಯ ಘಟನೆಯನ್ನು ಕಾಮಿಡಿ ಎಂದು ಕರೆದಿದ್ದಕ್ಕೆ ಪ್ರಾಣಿ ಪ್ರೇಮಿಗಳು ಆತಂಕ ಹೊರಹಾಕಿದ್ದಾರೆ.

ಯುವಕರು ಕಟ್ಟಿಹಾಕಿದ್ದ ನಾಯಿಯನ್ನು ನೆಲದ ಕಡೆಗೆ ಬೀಳಿಸುತ್ತಿರುವುದನ್ನು ತೋರಿಸುವ ಈ ವಿಡಿಯೋದಲ್ಲಿ ತೋರಿಸಲಾಗಿದೆ. ಸೆಕೆಂಡುಗಳ ನಂತರ, ಅವನು ಅದನ್ನು ಎಳೆದು ಅದನ್ನು ನೇತಾಡಿಸಲು ಪ್ರಾರಂಭಿಸಿದನು. ಆ ನಾಯಿ ನರಳುವುದನ್ನು ನೋಡುತ್ತಾ ಆತ ನಗುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.


ಇದನ್ನೂ ಓದಿ: Shocking News: ಶಾಲೆಯಲ್ಲೇ 16 ವರ್ಷದ ವಿದ್ಯಾರ್ಥಿಗೆ ಹೃದಯಾಘಾತ; ಶಾಕಿಂಗ್ ವಿಡಿಯೋ ವೈರಲ್

ಕೇವಲ ರೀಲ್ ಉದ್ದೇಶಕ್ಕಾಗಿ ದಾಖಲಿಸಲಾದ ಕೃತ್ಯವನ್ನು ನೆಟ್ಟಿಗರು ಖಂಡಿಸಿದ್ದಾರೆ. ಪ್ರಾಣಿ ಹಿಂಸೆಯ ಘಟನೆ ಮತ್ತು ಅದರ ರೀಲ್ ಅನ್ನು ಚಿತ್ರೀಕರಿಸಿದ್ದಕ್ಕೆ ಆಕ್ರೋಶ ಉಂಟಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us