Video: ಬೀದಿನಾಯಿ ಒಂದಕ್ಕೆ ಬೊಗಸೆಯಲ್ಲಿ ನೀರು ಕುಡಿಸಿದ ವ್ಯಕ್ತಿ; ಆಪ್ತ ವಿಡಿಯೋಗೆ ನೆಟ್ಟಿಗರ ಮೆಚ್ಚುಗೆ

| Updated By: ganapathi bhat

Updated on: Sep 25, 2021 | 10:00 PM

ಶ್ವಾನ ಪ್ರಿಯರು ಬೀದಿ ನಾಯಿ ಎಂಬ ಬೇಧ ಇಲ್ಲದೆ ಅದರ ಆರೈಕೆಯಲ್ಲೂ ಅಷ್ಟೇ ಆಸಕ್ತಿಯಿಂದ ತೊಡಗಿಕೊಳ್ಳುತ್ತಾರೆ. ಒಟ್ಟಾರೆ ಈ ವಿಚಾರದಲ್ಲಿ ಮನುಷ್ಯರು ಹಾಗೂ ಒಂದು ಮೂಕಪ್ರಾಣಿಯ ನಡುವಿನ ಒಡನಾಟ ಆಪ್ತವಾಗಿ ಕಾಣಿಸುತ್ತದೆ.

Video: ಬೀದಿನಾಯಿ ಒಂದಕ್ಕೆ ಬೊಗಸೆಯಲ್ಲಿ ನೀರು ಕುಡಿಸಿದ ವ್ಯಕ್ತಿ; ಆಪ್ತ ವಿಡಿಯೋಗೆ ನೆಟ್ಟಿಗರ ಮೆಚ್ಚುಗೆ
Follow us on

ಬಹಳಷ್ಟು ಮಂದಿಗೆ ನಾಯಿ ಎಂಬ ಸಾಕುಪ್ರಾಣಿ ಮೇಲೆ ಪ್ರೀತಿ ಇದ್ದರೂ ಅದನ್ನು ಒಂದು ಅಂತರದಲ್ಲೇ ನೋಡುತ್ತಿರುತ್ತಾರೆ, ಆದರೆ, ಇನ್ನು ಕೆಲವರು ನಾಯಿಯನ್ನು ಬಹಳ ಹಚ್ಚಿಕೊಂಡಿರುತ್ತಾರೆ. ಅದನ್ನು ಎಲ್ಲೆಡೆ ಜೊತೆಗೆ ಕರೆದುಕೊಂಡು ಹೋಗುವುದು, ಊಟ ಮಾಡಿಸುವುದು, ಫೋಟೊ ತೆಗೆಸುವುದು, ಮಲಗಿಸುವುದು ಇತ್ಯಾದಿ ಮಾಡುತ್ತಿರುತ್ತಾರೆ. ಇನ್ನು ಕೆಲವರು ಶ್ವಾನ ಪ್ರಿಯರು ಬೀದಿ ನಾಯಿ ಎಂಬ ಬೇಧ ಇಲ್ಲದೆ ಅದರ ಆರೈಕೆಯಲ್ಲೂ ಅಷ್ಟೇ ಆಸಕ್ತಿಯಿಂದ ತೊಡಗಿಕೊಳ್ಳುತ್ತಾರೆ. ಒಟ್ಟಾರೆ ಈ ವಿಚಾರದಲ್ಲಿ ಮನುಷ್ಯರು ಹಾಗೂ ಒಂದು ಮೂಕಪ್ರಾಣಿಯ ನಡುವಿನ ಒಡನಾಟ ಆಪ್ತವಾಗಿ ಕಾಣಿಸುತ್ತದೆ.

ಶ್ವಾನ ಪ್ರೀತಿ ಮನುಷ್ಯರಿಗೆ ಬಹಳ ಹೆಚ್ಚು. ನಾಯಿ ಇಷ್ಟಪಡುವ ಜನರು ತುಂಬಾ ಮಂದಿ. ವಿವಿಧ ತಳಿಯ, ವಿವಿಧ ಬಗೆಯ ನಾಯಿಯ ವಿಡಿಯೋಗಳು, ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದು ಕೂಡ ಸಹಜವೇ ಆಗಿದೆ. ಅಂತಹ ಒಂದು ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ನಾಯಿಯೊಂದು ಬಾಯಾರಿದಾಗ ಒಬ್ಬಾತ ತನ್ನ ಬೊಗಸೆಯಲ್ಲಿ ನೀರು ಹಿಡಿದು ನಾಯಿಗೆ ಕುಡಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡುಗರ ಮನ ಗೆದ್ದಿದೆ.

ವಿಡಿಯೋದಲ್ಲಿ ನೋಡುವಂತೆ, ನಾಯಿ ನಿಧಾನಕ್ಕೆ ಬೊಗಸೆಯಿಂದ ನೀರು ಕುಡಿಯುತ್ತದೆ. ಹಾಗೂ ನೀರು ಖಾಲಿ ಆದಾಗ ಮತ್ತೆ ಕೈಯಲ್ಲಿ ನೀರು ತೆಗೆದು ನಾಯಿಗೆ ಕುಡಿಸುತ್ತಾನೆ. ನಾಯಿ ಮತ್ತೆ ಮತ್ತೆ ನೀರು ಕೇಳುತ್ತಿರುವುದನ್ನು ಕೂಡ ವಿಡಿಯೋದಲ್ಲಿ ನೋಡಬಹುದು.

ಈ ವಿಡಿಯೋವನ್ನು ಐಎಫ್​ಎಸ್ ಆಫೀಸರ್ ಒಬ್ಬರು ಶೇರ್ ಮಾಡಿದ್ದಾರೆ. ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಜೀವನವನ್ನು ಬೇರೆಯವರಿಗಾಗಿ ಜೀವಿಸಿದಾಗ ಬದುಕು ಹೆಚ್ಚು ಸಂತೋಷದಾಯಕ ಆಗಿರುತ್ತದೆ ಎಂಬಂತೆ ಅವರು ಬರೆದುಕೊಂಡಿದ್ದಾರೆ.

ನೆಟ್ಟಿಗರು ವಿಡಿಯೋ ನೋಡಿ, ಶ್ವಾನಕ್ಕೆ ನೀರು ಕುಡಿಸಿದವನ ಕಾರ್ಯವನ್ನು ಶ್ಲಾಘಿಸಿದ್ದಾರೆ. ವಿಡಿಯೋವನ್ನು ಸುಮಾರು 90 ಸಾವಿರ ಜನರು ನೋಡಿದ್ದಾರೆ. ಮಾನವೀಯತೆ, ಸಂತಸ ಇತ್ಯಾದಿ ವಿಚಾರವಾಗಿ ಜನರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Viral Photo: ಸೈಕಲ್ ಮೇಲೆ ಕುರ್ಚಿಯಲ್ಲಿ ಕುಳಿತು ನಾಯಿಯ ಸವಾರಿ; ಮುದ್ದಾದ ಫೋಟೋ ವೈರಲ್

ಇದನ್ನೂ ಓದಿ: Viral Video: ಬಾಂಗ್ರಾ ನೃತ್ಯಕ್ಕೆ ಸಖತ್ತಾಗಿ ಹೆಜ್ಜೆ ಹಾಕಿದ ಪಂಜಾಬ್ ಸಿಎಂ ಚರಣ್​ಜಿತ್ ಸಿಂಗ್; ವಿಡಿಯೋ ವೈರಲ್