ಹೊಸ ವಿನ್ಯಾಸದ ಲಕ್ಷುರಿ ರೇಂಜ್ ರೋವರ್ ಕಾರು ಹೇಗಿದೆ ನೋಡಿ; ವಿಡಿಯೋ ವೈರಲ್​​

|

Updated on: Jan 18, 2024 | 3:26 PM

ವೈರಲ್​ ಆಗಿರುವ ವಿಡಿಯೋದಲ್ಲಿ ಲಕ್ಷುರಿ ರೇಂಜ್ ರೋವರ್ ಕಾರಿನ ಟಯರ್​​ ತೆಗೆಯಲಾಗಿದೆ. ಬದಲಾಗಿ ಅದಕ್ಕೆ ಎತ್ತಿನ ಗಾಡಿ ಅಥವಾ ಬಂಡಿಗಳಿಗೆ ಹಾಕುವಂತಹ ಚಕ್ರವನ್ನು ಜೋಡಿಸಲಾಗಿದೆ. ಈ ಚಕ್ರದಿಂದಾಗಿ ಕಾರು ಹಿಮದಲ್ಲಿ ಜಾರದೆ ವೇಗವಾಗಿ ಚಲಿಸಬಹುದು ಎಂಬ ಕಾರಣಕ್ಕೆ ಈ ಚಕ್ರವನ್ನು ಅಳವಡಿಸಲಾಗಿರಬಹುದು ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್​​ ಮಾಡಿದ್ದಾರೆ.

ಹೊಸ ವಿನ್ಯಾಸದ ಲಕ್ಷುರಿ ರೇಂಜ್ ರೋವರ್ ಕಾರು ಹೇಗಿದೆ ನೋಡಿ; ವಿಡಿಯೋ ವೈರಲ್​​
Viral video
Image Credit source: instagram
Follow us on

ರೇಂಜ್ ರೋವರ್ ಲಕ್ಷುರಿ ಹಾಗೂ ದುಬಾರಿ ಕಾರುಗಳಲ್ಲಿ ಒಂದಾಗಿದ್ದು,ವಿಶೇಷವಾಗಿ ಸಿನಿಮಾ ಸೆಲೆಬ್ರಿಟಿಗಳು, ಉದ್ಯಮಿಗಳು ಈ ಕಾರನ್ನು ಖರೀದಿಸುತ್ತಾರೆ. ಕೋಟಿ ಕೋಟಿ ಬೆಲೆಬಾಳುವ ಈ ಕಾರು ಖರೀದಿಸಬೇಕು ಎನ್ನುವುದು ಸಾಕಷ್ಟು ಜನರ ಕನಸು. ಇದೀಗಾ ವಿಶೇಷವಾದ ರೇಂಜ್ ರೋವರ್ ಕಾರಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದೆ. ಹಿಮದಿಂದ ಆವೃತವಾಗಿರುವ ಪ್ರದೇಶದಲ್ಲಿ ಸುಲಭವಾಗಿ ಸಂಚರಿಸಲು ಈ ಟ್ರಿಕ್ಸ್​​​​ ಮಾಡಲಾಗಿದೆ ಎಂದು ಹೇಳಲಾಗಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಲಕ್ಷುರಿ ರೇಂಜ್ ರೋವರ್ ಕಾರಿನ ಟಯರ್​​ ತೆಗೆಯಲಾಗಿದೆ. ಬದಲಾಗಿ ಅದಕ್ಕೆ ಎತ್ತಿನ ಗಾಡಿ ಅಥವಾ ಬಂಡಿಗಳಿಗೆ ಹಾಕುವಂತಹ ಚಕ್ರವನ್ನು ಜೋಡಿಸಲಾಗಿದೆ. ಈ ಚಕ್ರದಿಂದಾಗಿ ಕಾರು ಹಿಮದಲ್ಲಿ ಜಾರದೆ ವೇಗವಾಗಿ ಚಲಿಸಬಹುದು ಎಂಬ ಕಾರಣಕ್ಕೆ ಈ ಚಕ್ರವನ್ನು ಅಳವಡಿಸಲಾಗಿರಬಹುದು ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್​​ ಮಾಡಿದ್ದಾರೆ.

ಇದನ್ನೂ ಓದಿ: ಟೆಂಪೋದಲ್ಲಿ ಆನೆ ಸವಾರಿ; ವಿಡಿಯೋ ನೋಡಿ ಮಿಸ್ಟೇಕ್ ಕಂಡು ಹಿಡಿದ ನೆಟ್ಟಿಗರು

Farming database ಹೆಸರಿನ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದ್ದು,ಇದೀಗಾಗಲೇ ಸಖತ್​​ ಆಗಿ ವೈರಲ್​​ ಆಗಿದೆ. ಜೊತೆಗೆ ಈ ವಿಡಿಯೋ ಸಾಕಷ್ಟು ಲೈಕ್ಸ್​​ಗಳನ್ನು ಕೂಡ ಪಡೆದುಕೊಂಡಿದೆ. ಸಾಕಷ್ಟು ನೆಟ್ಟಿಗರು ಕಾಮೆಂಟ್​​ ಮೂಲಕ ಬಗೆಬಗೆಯಾಗಿ ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ