Viral: ಪವರ್ ಕಟ್ ನೆಪ ಹೇಳಿ ಕಚೇರಿ ಕೆಲಸದಿಂದ ತಪ್ಪಿಸಿಕೊಂಡ ಉದ್ಯೋಗಿಯನ್ನು ತರಾಟೆಗೆ ತೆಗೆದುಕೊಂಡ ಮ್ಯಾನೇಜರ್

ಮನೆಯಲ್ಲೇ ಕುಳಿತು ಮಾಡುವ ವರ್ಕ್ ಫ್ರಮ್ ಹೋಮ್ ಬೆಸ್ಟ್ ಎನ್ನುವುದು ಅನೇಕರ ಅಭಿಪ್ರಾಯ. ಕೆಲವರು ಇದನ್ನೇ ಪ್ಲಸ್ ಪಾಯಿಂಟ್ ಆಗಿ ತೆಗೆದುಕೊಳ್ಳುತ್ತಾರೆ. ಸುಳ್ಳು ಕಾರಣ ಹೇಳಿ ಕೆಲಸದಿಂದ ತಪ್ಪಿಸಿಕೊಳ್ತಾರೆ. ಇಲ್ಲೊಬ್ಬ ಉದ್ಯೋಗಿ ಇದೇ ರೀತಿ ಮಾಡಿದ್ದು, ಕೋಪಕೊಂಡ ಮ್ಯಾನೇಜರ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಪವರ್ ಕಟ್ ನೆಪ ಹೇಳಿ ಕಚೇರಿ ಕೆಲಸದಿಂದ ತಪ್ಪಿಸಿಕೊಂಡ ಉದ್ಯೋಗಿಯನ್ನು ತರಾಟೆಗೆ ತೆಗೆದುಕೊಂಡ ಮ್ಯಾನೇಜರ್
ಸಾಂದರ್ಭಿಕ ಚಿತ್ರ
Image Credit source: Pinterest

Updated on: Nov 02, 2025 | 12:34 PM

ಆಫೀಸಿಗೆ ಹೋಗಿ ಕೆಲಸ ಮಾಡೋದಕ್ಕಿಂತ ವರ್ಕ್ ಫ್ರಮ್ ಹೋಮ್ (work from home) ಬೆಸ್ಟ್. ಹೀಗಾಗಿ ಯಾರಿಗಾದ್ರೂ ವರ್ಕ್ ಫ್ರಮ್ ಹೋಮ್ ಆಪ್ಷನ್ ಸಿಕ್ರೆ ಮಿಸ್ ಮಾಡಲ್ಲ. ಆದರೆ ಮನೆಯಲ್ಲೇ ಕುಳಿತು ಕೆಲಸ ಮಾಡುವುದು ಆರಾಮ ಎಂದೆನಿಸುತ್ತದೆ. ಕೆಲಸದ (job) ನಡುವೆ ನೆಟ್ ವರ್ಕ್ ಕೈ ಕೊಡೋದು, ಪವರ್ ಕಟ್ ಆಗೋದು ಹೀಗೆ ಒಂದಲ್ಲ ಒಂದು ಸಮಸ್ಯೆಗಳು ಬರುತ್ತದೆ. ಆದರೆ ಮನೆಯಲ್ಲಿ ಕೆಲಸ ಮಾಡುವ ಉದ್ಯೋಗಿಯೊಬ್ಬ ಆಫೀಸ್ ಕೆಲಸದಿಂದ ತಪ್ಪಿಸಿಕೊಳ್ಳಲು ಪವರ್ ಕಟ್ ಆಗಿದೆ ಎಂದು ಸುಳ್ಳು ಹೇಳಿದ್ದಾನೆ. ರಿಮೋಟ್ ಉದ್ಯೋಗಿಗಳು ಮೀಟಿಂಗ್‌ನಲ್ಲಿ ಭಾಗವಹಿಸುವುದನ್ನು ಬಿಟ್ಟು ಕೆಲಸದ ಸಮಯದಲ್ಲಿ ಆಫ್‌ಲೈನ್‌ಗೆ ಹೋಗಲು “ಪವರ್ ಕಟ್” ನೆಪವನ್ನು ಪದೇ ಪದೇ ಬಳಸುತ್ತಿದ್ದಾರೆ. ಉದ್ಯೋಗಿಯ ಈ ವರ್ತನೆಯ ವಿರುದ್ಧ ಮ್ಯಾನೇಜರ್ ಗರಂ ಆಗಿದ್ದು ಪೋಸ್ಟ್‌ನಲ್ಲಿ ಈ ಬಗ್ಗೆ ವಿವರಿಸಿದ್ದಾರೆ.

ರೆಡ್ಡಿಟ್‌ನಲ್ಲಿ ಉದ್ಯೋಗಿಗಳ ವರ್ತನೆಯನ್ನು ದೂರಿರುವ ಮ್ಯಾನೇಜರ್ ಉದ್ಯೋಗಿಗಳ ಇಂತಹ ನೆಪ ಸೇರಿದಂತೆ ಹೇಳುವ ಸುಳ್ಳನ್ನು ಟೀಕಿಸಿದ್ದಾರೆ. ರೆಡ್ಡಿಟ್ ಪೋಸ್ಟ್‌ನಲ್ಲಿ, ವಿದ್ಯುತ್ ಇಲ್ಲದ ಕಾರಣ ಕರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ನನಗೆ ಸಹಿಸಲು ಸಾಧ್ಯವಾಗದ ಒಂದು ನೆಪ ಎಂದು  ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಪೋಸ್ಟ್‌ನಲ್ಲಿ ಏಳು ಜನರ ತಂಡದ ಇಬ್ಬರು ಸದಸ್ಯರು ನೆಟ್‌ವರ್ಕ್ ಸಮಸ್ಯೆ ಅಥವಾ ವಿದ್ಯುತ್ ಕಡಿತ ಎಂದು ಪದೇ ಪದೇ ಹೇಳುತ್ತಾರೆ. ನಂತರ ಗಂಟೆಗಟ್ಟಲೆ ಕಣ್ಮರೆಯಾಗುತ್ತಾರೆ. ಒಮ್ಮೆ ನೆಟ್‌ವರ್ಕ್ ಸಮಸ್ಯೆಗಳು ಉಂಟಾಗುವುದು ಅರ್ಥವಾಗುವಂತಹದ್ದೇ, ಆದರೆ ಅದು ವಾರಗಳವರೆಗೆ ಮುಂದುವರಿದರೆ, ನೀವು ಪೂರೈಕೆದಾರರನ್ನು ಬದಲಾಯಿಸಬೇಕಲ್ಲವೇ? ಎಂದು ಹೇಳಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ:

ಇದನ್ನೂ ಓದಿ
ಸ್ಟಾರ್ಟ್ಅಪ್‌ನಲ್ಲಿನ ಕಹಿ ಅನುಭವ ಹಂಚಿಕೊಂಡ ಇಂಟರ್ನ್
ಈ ಟೈಮ್‌ನಲ್ಲಿ ಕೆಲ್ಸದಿಂದ ವಜಾಗೊಳಿಸಿದ್ರೆ ತೊಂದರೆಯೇ ಹೆಚ್ಚು ಎಂದ ವ್ಯಕ್ತಿ
ವಿಚಿತ್ರ ಕಾರಣ ಹೇಳಿ ಹನ್ನೆರಡು ದಿನ ರಜೆ ಕೋರಿದ ಉದ್ಯೋಗಿ, ಶಾಕ್‌ ಆದ ಬಾಸ್‌
ಅಭ್ಯರ್ಥಿ ಆಯ್ಕೆಯ ಕಠಿಣ ಸಂದರ್ಭ ವಿವರಿಸಿದ ಸಂದರ್ಶಕಿ

ಉತ್ತಮ ಸಂಬಳ ಪಡೆಯುವ ಉದ್ಯೋಗಿಗಳು ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಂದು ಹೇಗೆ ಹೇಳಿಕೊಳ್ಳುತ್ತಾರೆ. ಈ ಇಬ್ಬರೂ ಉದ್ಯೋಗಿಗಳು ತಿಂಗಳಿಗೆ 1.5 ಲಕ್ಷಕ್ಕಿಂತ ಹೆಚ್ಚು ಸಂಪಾದಿಸುತ್ತಾರೆ. ಎಂತಹ ಕಂಜೂಸ್ ವ್ಯಕ್ತಿ ಒಂದು ಸಾವಿರಕ್ಕೆ ಯುಪಿಎಸ್ ಖರೀದಿಸಲು ಸಾಧ್ಯವಿಲ್ಲವೇ. ಕಂಪನಿಯೂ ಎಲ್ಲರಿಗೂ ಮ್ಯಾಕ್‌ಬುಕ್ ಪ್ರೊಗಳನ್ನು ನೀಡುತ್ತದೆ. ಯಾರಾದರೂ ತಮ್ಮ ಬ್ಯಾಟರಿ ಹಾಳಾಗಿದೆ ಎಂದು ಹೇಳಿದರೆ, ಅವರು ಸುಳ್ಳು ಹೇಳುತ್ತಿದ್ದಾರೆ ಇಲ್ಲವಾದ್ರೆ ಕೆಲಸದ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ ಎಂದರ್ಥ. ಸಾಂದರ್ಭಿಕ ನೆಪಗಳು ಅರ್ಥವಾಗುವಂತಹವು. ಆದರೆ ನಾಳೆ ಆಡಳಿತ ಮಂಡಳಿ ಕ್ರಮ ಕೈಗೊಂಡರೆ, ಅದೇ ಉದ್ಯೋಗಿಗಳು ಕೆಲಸ-ಜೀವನದ ಸಮತೋಲನವಿಲ್ಲ ಎಂದು ಹೇಳ್ತಾರೆ ಎನ್ನುವುದನ್ನು ಇಲ್ಲಿ ಸ್ಪಷ್ಟ ಪಡಿಸಿದ್ದಾರೆ.

ಇದನ್ನೂ ಓದಿ:ಆರೋಗ್ಯ ಕೈ ಕೊಡ್ತು, ಸಹೋದ್ಯೋಗಿ ನನ್ನ ಬಳಸಿಕೊಂಡ್ರು; ಸ್ಟಾರ್ಟ್ಅಪ್‌ನಲ್ಲಿನ ಕಹಿ ಅನುಭವ ಹಂಚಿಕೊಂಡ ಇಂಟರ್ನ್

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಒಬ್ಬ ಬಳಕೆದಾರ ಕೆಲ ವರ್ಕ್ ಫ್ರಮ್ ಹೋಮ್ ಅವಕಾಶವನ್ನು ಲಘುವಾಗಿ ಪರಿಗಣಿಸುತ್ತಿದ್ದಾರೆ ಎಂದಿದ್ದಾರೆ. ಇನ್ನೊಬ್ಬರು, ಇದು ನಿಜಕ್ಕೂ ಕಳವಳಕಾರಿ ಸಂಗತಿ; ನನ್ನ ತಂಡದ ಕೆಲವರು ಈ ರೀತಿ ಮಾಡ್ತಾರೆ. ಹೀಗಾಗಿ ನಮಗೆ ಕೂಡ ರಜೆ ಕೊಡಲು ಮ್ಯಾನೇಜರ್ ಹಿಂದೇಟು ಹಾಕ್ತಾರೆ. ಬಾಕಿ ಇರುವ ಕೆಲಸಗಳನ್ನು ಹೇಳುತ್ತಾರೆ ಎಂದು ಕೆಲಸದ ಸ್ಥಳದಲ್ಲಿನ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ಮತ್ತೊಬ್ಬ ಬಳಕೆದಾರ ಒಂದು ಬಾರಿ, ನನ್ನ ತಂಡದ ಸದಸ್ಯರೊಬ್ಬರು ಇಂಟರ್ನೆಟ್ ಸಂಪರ್ಕವಿಲ್ಲದ ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್ ಮಾಡಿದ್ದರು. ನಾನು ಸ್ಕ್ರೀನ್‌ಶಾಟ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅದೇ ತಂಡದ ಸದಸ್ಯರು 2 ದಿನಗಳ ಹಿಂದೆ ಹಂಚಿಕೊಳ್ಳಲಾದ ಅದೇ ಸ್ಕ್ರೀನ್‌ಶಾಟ್ ಆಗಿತ್ತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ