ಹೆಚ್ಚಾಗಿ ಚಳಿಗಾಲದಲ್ಲಿ ಹಿಮಾಚಲ ಪ್ರದೇಶದಿಂದ ಹಿಡಿದು ಕಾಶ್ಮೀರದವರೆಗೆ ಇಲ್ಲಿನ ಹಿಮಪಾತದ ದೃಶ್ಯಗಳನ್ನು ಕಣ್ತುಂಬಿಕೊಳ್ಳಲೆಂದೇ ಪ್ರವಾಸಿಗರು ಈ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಹೌದು ಹಿಮಚ್ಛಾದಿತ ಪ್ರದೇಶಗಳನ್ನು ನೋಡಲೆಂದೇ ಹೆಚ್ಚಿನವರು ಕಾಶ್ಮೀರ, ಶಿಮ್ಲಾ, ಕುಲು-ಮನಾಲಿ ಇತ್ಯಾದಿ ರಮಣೀಯ ಸ್ಥಳಗಳಿಗೆ ಪ್ರವಾಸ ಹೋಗ್ತಾರೆ. ಈ ಬಾರಿಯೂ ಭಾರೀ ಹಿಮಪಾತವಾಗುತ್ತಿದ್ದು, ಮನಾಲಿಯಲ್ಲಿ ಹಿಮಪಾತವಾದ ಪರಿಣಾಮ ರಸ್ತೆಯಲ್ಲಿ ಕಾರುಗಳು ಸರ ಸರನೇ ಜಾರಿ ಹೋದಂತಹ ಭಯಾನಕ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ನೀವೇನಾದರೂ ಈ ಸಮಯದಲ್ಲಿ ಅಲ್ಲಿಗೆ ಪ್ರವಾಸ ಹೋಗುವವರಿದ್ದರೆ, ಆ ಹಿಮದ ರಾಶಿಯಲ್ಲಿ ಜಾಗರೂಕವಾಗಿ ವಾಹನ ಚಲಾಯಿಸಲು ಈ ಕೆಲವು ಸಲಹೆಗಳನ್ನು ತಪ್ಪದೆ ಪಾಲಿಸಿ.
ಹಿಮಭರಿತ ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ ಹೆಚ್ಚಿನವರು ಒಮ್ಮೆಲೆ ಗಟ್ಟಿಯಾಗಿ ಬ್ರೇಕ್ ಹಾಕುವಂತಹ ತಪ್ಪನ್ನು ಮಾಡ್ತಾರೆ. ಹೀಗೆ ಒಮ್ಮೆಲೆ ಬ್ರೇಕ್ ಹಾಕುವುದರಿಂದ ವಾಹನಗಳು ಸರ್ರನೆ ಹಿಮದಲ್ಲಿ ಜಾರಿ ಹೋಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಅದು ಟೈರ್‌ಗಳು ಲಾಕ್ ಆಗಲು ಕೂಡಾ ಕಾರಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಎಬಿಎಸ್ ಕೂಡಾ ಸಹಾಯಕ್ಕೆ ಬರಲ್ಲ. ಆದ್ದರಿಂದ ಹಿಮ ಭರಿತ ರಸ್ತೆಗಳಲ್ಲಿ ವಾಹನ ಚಲಾಯಿಸುತ್ತಿದ್ದೀರಾ ಎಂದಾರರೇ ಆದಷ್ಟು ನಿಧಾನಕ್ಕೆ ಬ್ರೇಕ್ ಹಾಕಬೇಕಾಗುತ್ತದೆ. ಜೊತೆಗೆ ಮುಂಬದಿಯಲ್ಲಿರುವ ವಾಹನದಿಂದ ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳಿ.
ಹಿಮ ಭರಿತ ರಸ್ತೆಗಳಲ್ಲಿ ಆದಷ್ಟು ಸ್ಮೂತ್ ಮತ್ತು ನಿಧಾನಕ್ಕೆ ಡ್ರೈವ್ ಮಾಡಬೇಕಾಗುತ್ತದೆ. ಹೌದು ಯಾವುದೇ ಕಾರಣಕ್ಕೂ ವೇಗವಾಗಿ ಬ್ರೇಕ್ ಹಾಕಬಾರದು, ವೇಗವಾಗಿ ವಾಹನಗಳನ್ನು ತಿರುಗಿಸಬಾರದು ಮತ್ತು ಒಮ್ಮೆಲೇ ವಾಹನದ ವೇಗವನ್ನು ಸಹ ಹೆಚ್ಚಿಸಬಾರದು. ಹೀಗೆ ಮಾಡಿದರೆ ನೀವು ಚಲಾಯಿಸುವ ವಾಹನ ನಿಯಂತ್ರಣವನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಜೊತೆಗೆ ಡ್ರೈವ್ ಮಾಡಬೇಕಾದರೆ ಥ್ರೊಟಲ್ ಅನ್ನು ಮಾಡ್ಯುಲೇಟ್ ಮಾಡಲು ಕಲಿಯಿರಿ.
ಟೈರ್ ಒತ್ತಡವನ್ನು ಕಡಿಮೆ ಮಾಡಿ. ಹೀಗೆ ಮಾಡುವುದರಿಂದ ಟೈರ್‌ನ ಕಾಂಟ್ಯಾಕ್ಟ್ ಪ್ಯಾಚ್ ಹೆಚ್ಚಿಸಲು ಸುಲಭವಾಗುತ್ತದೆ. ಅಲ್ಲದೆ ಹಿಮಭರಿತ ರಸ್ತೆಗಳಲ್ಲಿ ಸಾಗುವಾಗ ಟೈರ್‌ನಲ್ಲಿ ಏರ್ ಪ್ರೆಷರ್ ಕಡಿಮೆ ಇರಲಿ, ಇದು ಹಿಮದಲ್ಲಿ ವಾಹನಗಳು ಜಾರಿ ಹೋಗದಂತೆ ತಡೆಯಲು ನೆರವಾಗುತ್ತದೆ.
ಹಿಮ ಭರಿತ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವಾಗ ಎಂಜಿನ್ ಬ್ರೇಕ್ ನಿಮ್ಮ ಉತ್ತಮ ಸ್ನೇಹಿತನಾಗಿ ಕಾರ್ಯನಿರ್ವಹಿಸುತ್ತದೆ. ಹೌದು ಇದು ವಾಹನವನ್ನು ನಿಧಾನಗೊಳಸಲು ಸಹಾಯ ಮಾಡುತ್ತದೆ ಮತ್ತು ಆರಾಮದಾಯಕವಾಗಿ ವಾಹನ ಚಾಲನೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಸಾಲ ಕೊಡಿಸುವುದಾಗಿ ನಂಬಿಸಿ 39 ಸಾವಿರ ರೂ.ಮೌಲ್ಯದ ಚಿಕನ್ ತಿಂದ ಎಸ್ ಬಿಐ ಮ್ಯಾನೇಜರ್
ಹಿಮ ಭರಿತ ರಸ್ತೆಯಲ್ಲಿ ವಾಹನ ಚಲಾಯಿಸುತ್ತೀರಾ ಎಂದಾದರೆ ನಿಮ್ಮ ವಾಹನಕ್ಕೆ ಚಳಿಗಾಲಕ್ಕೆ ಸೂಕ್ತವಾದ ಟೈರ್ ಅಳವಡಿಸಿ. ಇಂತಹ ಟೈರ್‌ಗಳನ್ನು ಶೀತ ಹವಾಮಾನದ ಪರಿಸ್ಥಿತಿಗಳಲ್ಲಿ ಉತ್ತಮ ಹಿಡಿತ ಮತ್ತು ನಿಯಂತ್ರಣವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಇಂತಹ ಟೈರ್‌ಗಳು ವಾಹನಗಳನ್ನು ಸರ್ರನೆ ಜಾರಿ ಹೋಗಲು ಬಿಡುವುದಿಲ್ಲ. ಮತ್ತು ಜಾರುವಂತಹ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. ಮತ್ತು ಸ್ನೋ ಚೈನ್‌ಗಳು ರಸ್ತೆಗಳಲ್ಲಿ ಬಿದ್ದ ಮಂಜುಗಡ್ಡೆಗಳನ್ನು ತುಂಡಾಗಿಸುವ ಮೂಲಕ ಸ್ಮೂತ್ ಆಗಿ ಡ್ರೈವ್ ಮಾಡಲು ಅನುವು ಮಾಡಿಕೊಡುತ್ತದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ