
ಪ್ರೀತಿಸಿ ಮದುವೆಯಾದವರು (Marriage) ಸದಾ ಖುಷಿಯಾಗಿ ಇರಬೇಕೆಂದೇನಿಲ್ಲ. ಪ್ರೀತಿಯೇ ಬೇರೆ, ದಾಂಪತ್ಯ ಜೀವನವೇ ಬೇರೆ. ಪ್ರೀತಿಯಲ್ಲಿದ್ದಾಗ ಎಲ್ಲವೂ ಸುಂದರವಾಗಿಯೇ ಕಾಣುತ್ತದೆ. ಆದರೆ ಮದುವೆಯಾದ ಬಳಿಕ ಸಂಗಾತಿ ಮಾತುಗಳು ಕೆಲವೊಮ್ಮೆ ಕಿರಿಕಿರಿ ಎನಿಸುತ್ತದೆ. ಇಲ್ಲೊಬ್ಬ ಮಹಿಳೆಗೆ ಇದೇ ರೀತಿಯಾಗಿದೆ. ಮಹಿಳೆಯೂ (Women) ಮದುವೆಗೂ ಮೊದಲು ಎರಡು ವರ್ಷಗಳ ಕಾಲ ತನ್ನ ಸಂಗಾತಿಯೊಂದಿಗೆ ಡೇಟಿಂಗ್ ಮಾಡಿದ್ರೂ ಈಗ ತನ್ನ ಜೊತೆಗಾರನ ವರ್ತನೆಯೇ ಬಹಳಷ್ಟು ಬದಲಾಗಿದೆ. ತನ್ನ ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದೆ, ತನ್ನ ಆಯ್ಕೆಯ ಬಗ್ಗೆ ಪ್ರಶ್ನೆ ಮೂಡಿದ್ದು, ನೋವಿನ ಕಥೆಯನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾಳೆ. ಈ ಪೋಸ್ಟ್ ವೈರಲ್ ಆಗುತ್ತಿದೆ.
r/AskIndianWomen ಹೆಸರಿನ ರೆಡ್ಡಿಟ್ ಖಾತೆಯಲ್ಲಿ ತನ್ನ ನೋವಿನ ಕಥೆ ಬಿಚ್ಚಿಟ್ಟಿರುವ ಮಹಿಳೆಯೂ ಐದು ವರ್ಷಗಳ ಹಿಂದೆ ನಾನು ತನ್ನ ಸಂಗಾತಿಯನ್ನು 2 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದೆ, ಮದುವೆಗೆ ಮೊದಲು 1 ವರ್ಷಗಳ ಕಾಲ ಜತೆಗೆ ಇದ್ದೆವು. ನಾನು ಭೇಟಿಯಾದವರಲ್ಲಿ ಅವನು ಅತ್ಯಂತ ತಿಳುವಳಿಕೆ, ಪ್ರೀತಿಯ ಮತ್ತು ಸಹಾನುಭೂತಿಯುಳ್ಳ ವ್ಯಕ್ತಿಯಾಗಿದ್ದ. ಅವನು ನನ್ನನ್ನು ತುಂಬಾ ಪ್ರೀತಿಸುತ್ತಿದ್ದ. ನನ್ನ ಹೆತ್ತವರ ಇಚ್ಛೆಗೆ ವಿರುದ್ಧವಾಗಿ ನಾನು ಮದುವೆಯಾದೆ. ನನ್ನ ಸಂಗಾತಿಯ ಹೆತ್ತವರ ತಪ್ಪುಗಳಿಂದಾಗಿ ಕುಟುಂಬವು ಆರ್ಥಿಕವಾಗಿ ಬಹಳಷ್ಟು ತೊಂದರೆ ಅನುಭವಿಸಿತ್ತು. ಜೊತೆಗಾರನೇ ಕುಟುಂಬಕ್ಕೆ ಆಧಾರವಾಗಿದ್ದ. ಮನೆ ಸೇರಿದಂತೆ ಎಲ್ಲಾ ಹಣಕಾಸಿನ ಜವಾಬ್ದಾರಿಯನ್ನು ನನ್ನವನೇ ವಹಿಸಿಕೊಳ್ಳಬೇಕಾಗಿತ್ತು. ಹಣಕಾಸಿನ ತೊಂದರೆಗಳ ಬಗ್ಗೆ ನನಗೆ ತಿಳಿದಿತ್ತು, ಆದರೆ ನನ್ನ ಹೆತ್ತವರ ಇಚ್ಛೆಗೆ ವಿರುದ್ಧವಾಗಿ ನಾನು ಅವನನ್ನು ಮದುವೆಯಾದೆ. ಆ ವ್ಯಕ್ತಿ ಸಭ್ಯನಂತೆ ಕಾಣುತ್ತಿದ್ದರೂ, ನಾನು ಇಂದು ಈ ರೀತಿ ನೋವು ಅನುಭವಿಸುತ್ತೇನೆ ಎಂದು ಅಂದುಕೊಂಡಿರಲಿಲ್ಲ ಎಂದಿದ್ದಾಳೆ.
F29 suffocating in my marriage. Need advise
byu/Opening_Ant_6007 inAskIndianWomen ಇದನ್ನೂ ಓದಿ
ಅವನು ಸ್ವಾರ್ಥಿ ವ್ಯಕ್ತಿ ವಿಷ್ಯವೇ ನಂಗೆ ಇಷ್ಟವಾಗಿದ್ದು. ನಾನು ಅದನ್ನು ಅಂದು ಮೆಚ್ಚಿದೆ ಈಗಲೂ ನಾನು ಆ ಗುಣವನ್ನು ಇಷ್ಟಪಡುತ್ತೇನೆ. ಅವನು ನನಗಾಗಿ ಸಮಯ ಮೀಸಲಿಟ್ಟು ತನ್ನದೇ ಆದ ಸಾಮ್ರಾಜ್ಯವನ್ನು ನಿರ್ಮಿಸಬಲ್ಲ ಎನ್ನುವುದು ಇಷ್ಟವಾಯಿತು. ನಾನು ಅವನಿಗಿಂತ ತುಂಬಾ ಚಿಕ್ಕವಳು ನಾನು ನನ್ನ ವೃತ್ತಿಜೀವನದಲ್ಲಿಯೂ ಚೆನ್ನಾಗಿ ಕೆಲಸ ಮಾಡುತ್ತಿದ್ದೇನೆ. ಮದುವೆಯ ನಂತರದ ಸನ್ನಿವೇಶಕ್ಕೆ ತಾನು ಕಂಡ ವ್ಯಕ್ತಿ ಸಂಪೂರ್ಣವಾಗಿ ಬದಲಾಗಿದ್ದ. ಇದ್ದಕ್ಕಿದ್ದಂತೆ, ನಾನು ಮಾಡಿದ ಯಾವುದೇ ಕೆಲಸವೂ ಆತನ ನಿರೀಕ್ಷಿಸಿದ್ದಷ್ಟು ಇರುತ್ತಿರಲಿಲ್ಲ. ನಾವು ಮದುವೆಯಾದಾಗ ನಾನು 12-36 ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದೆ, ಮನೆ ನಿಭಾಯಿಸದೇ ಇರುವುದು, ತನ್ನವನಿಗೆ ಅಡುಗೆ ಮಾಡದಿರುವುದು, ಅತ್ತೆಯೊಂದಿಗೆ ಸಮಯ ಕಳೆಯದಿರುವುದು ಈ ಕಾರಣಗಳಿಂದಲೇ ಅವನಿಗೆ ನಾನು ಕೆಟ್ಟವಳಾಗಿ ಕಂಡೆ ಎಂದು ವಾಸ್ತವ ಸ್ಥಿತಿಯನ್ನು ಹೇಳಿಕೊಂಡಿದ್ದಾಳೆ.
ಏನು ಮಾಡಿದ್ರೂ ಅವನಿಗೆ ಅದು ಸಾಕಾಗುವುದಿಲ್ಲ. ನನ್ನನ್ನು ಅವನ ಜೀವನದೊಂದಿಗೆ ಹೋಲಿಕೆ ಮಾಡಿ ತಾನು ಹೆಚ್ಚು ಸಂಪಾದಿಸುತ್ತೇನೆ ಎನ್ನುತ್ತಾನೆ. ನನಗೆ ಅಂತಹ ಮಾತುಗಳು ಇಷ್ಟವಾಗುವುದಿಲ್ಲ. ಆದರೆ ನನ್ನ ದಣಿವು ಅಥವಾ ಹತಾಶೆಯನ್ನು ತೋರಿಸಲು ಅವಕಾಶವಿಲ್ಲ. ಇದರಿಂದ ಜಗಳವು ಆಗಬಹುದು. ಹೆತ್ತವರ ಬಗ್ಗೆ ಅತಿಯಾದ ಕಾಳಜಿ, ಅತ್ತೆ ಮಾವನ ನಡವಳಿಕೆಗಳು ನನಗೆ ನೋವುಂಟು ಮಾಡಿದ್ರೂ ನನ್ನ ಬಗ್ಗೆ ಸಹಾನುಭೂತಿ, ಕಾಳಜಿ ಇಲ್ಲ. ಸತತ 12 ಗಂಟೆಗಳ ಕಾಲ ಕೆಲಸ ಮಾಡಿದ ನಂತರ ತಲೆ ನೋವು ಎಂದರೆ ನಿನಗೆ ನನ್ನಂತೆ ಕೆಲಸ ಮಾಡಲು ಆಗಲ್ಲ ಎಂದು ಹೀಯಾಳಿಸುತ್ತಾನೆ. ಬೇರೆಯವರು ನನ್ನನ್ನು ಹೊಗಳಿದಾಗ ನನ್ನತ್ತ ತಿರುಗಿ ನೋಡುತ್ತಾನೆ. ಹಣಕ್ಕಾಗಿ ಮಾತ್ರ ನನ್ನೊಂದಿಗಿದ್ದಾನೆಯೇ ಎಂದು ನನಗೆ ಅನಿಸುತ್ತದೆ. ನಾನು ಡೇಟ್ ಮಾಡಿದ ವ್ಯಕ್ತಿಯನ್ನು ನಾನು ಎದುರು ನೋಡುತ್ತಿದ್ದೇನೆ. ಹೊರಗಿನ ಜನರು ನನ್ನವನು ತುಂಬಾ ಸುಂದರ, ಸ್ವಾರ್ಥಿ, ಸಭ್ಯ ನಡವಳಿಕೆಯ ವ್ಯಕ್ತಿ ಎನ್ನುವ ಕಾರಣಕ್ಕೆ ನನ್ನನ್ನು ದೂಷಿಸುತ್ತಾರೆ. ನನಗೆ ತಿಳಿದ ಮಟ್ಟಿಗೆ ಅವನು ನನಗೆ ಎಂದಿಗೂ ಮೋಸ ಮಾಡಿಲ್ಲ ಎಂದು ತನ್ನ ಮನಸ್ಸಿನ ನೋವನ್ನು ಬರೆದುಕೊಂಡಿದ್ದಾಳೆ.
ಇದನ್ನೂ ಓದಿ:ಮದ್ವೆಯಲ್ಲಿ ಮದ್ಯ, ನಾನ್ ವೆಜ್ ಇರಲ್ಲ; ವಿಚಿತ್ರ ಮದುವೆ ಆಮಂತ್ರಣ ಪತ್ರಿಕೆ ವೈರಲ್
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಒಬ್ಬ ಬಳಕೆದಾರ ತಮ್ಮ ಸಂಗಾತಿಯೂ ಹಿಂದೆ ಇದ್ದ ಹಾಗೆಯೇ ಇರಬೇಕು ಎಂದು ಬಯಸುವುದು ತಪ್ಪು. ಜವಾಬ್ದಾರಿಯಿಂದಾಗಿ ನಡವಳಿಕೆಯಲ್ಲಿ ಬದಲಾವಣೆಯಾಗಿರಬೇಕು. ಬದುಕನ್ನು ಖುಷಿಯಿಂದ ಕಳೆಯಿರಿ ಎಂದಿದ್ದಾರೆ. ಇನ್ನೊಬ್ಬರು, ಪ್ರೀತಿ ಹಾಗೂ ಮದ್ವೆಗೂ ತುಂಬಾ ವ್ಯತ್ಯಾಸವಿದೆ. ವಾಸ್ತವತೆಯನ್ನು ಒಪ್ಪಿಕೊಳ್ಳಿ ಎಂದು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಸಂಗಾತಿಯೊಂದಿಗೆ ಮಾತಾಡಿ ಎಲ್ಲವನ್ನು ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ