ಮಹಾರಾಷ್ಟ್ರದಲ್ಲಿ ಬೆಂಗಾಲ್ ಮಾನಿಟರ್ ಹಲ್ಲಿಯ ಮೇಲೆ ಸಾಮೂಹಿಕ ಅತ್ಯಾಚಾರ; ನಾಲ್ವರ ಬಂಧನ

ಮಹಾರಾಷ್ಟ್ರ ಅರಣ್ಯ ಇಲಾಖೆ ಆರೋಪಿಯ ಮೊಬೈಲ್‌ ಪರಿಶೀಲಿಸಿದಾಗ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಆರೋಪಿಗಳು ಮಾನಿಟರ್ ಹಲ್ಲಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಕೃತ್ಯದ ದಾಖಲೆಯನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಬೆಂಗಾಲ್ ಮಾನಿಟರ್ ಹಲ್ಲಿಯ ಮೇಲೆ ಸಾಮೂಹಿಕ ಅತ್ಯಾಚಾರ; ನಾಲ್ವರ ಬಂಧನ
ಬೆಂಗಾಲ್ ಮಾನಿಟರ್ ಹಲ್ಲಿ
Updated By: ಗಂಗಾಧರ​ ಬ. ಸಾಬೋಜಿ

Updated on: Apr 14, 2022 | 4:34 PM

ಮಹಾರಾಷ್ಟ್ರ: ಕಾಮಾಂಧರು ಮಾಡಿರೋ ಈ ಕೃತ್ಯದ ಬಗ್ಗೆ ನೀವು ಕೇಳಿದ್ರೆ ನಿಜಕ್ಕೂ ಅಸಹ್ಯಪಟ್ಟುಕೊಳ್ಳುತ್ತೀರಾ. ಮಹಾರಾಷ್ಟ್ರದ ಗೊಠಾಣೆ ಗ್ರಾಮದ ಬಳಿ ಇರುವ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಗಾಲ್ ಮಾನಿಟರ್ ಹಲ್ಲಿಯ ಮೇಲೆ ನಾಲ್ವರು ಅತ್ಯಾಚಾರ (Rape) ಎಸಗಿರುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಅತ್ಯಾಚಾರದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ. ಇಂಡಿಯಾ ಟುಡೇ ವರದಿಯ ಪ್ರಕಾರ , ಆರೋಪಿಗಳನ್ನು ಬೇಟೆಗಾರರು ಎಂದು ಗುರುತಿಸಲಾಗಿದ್ದು, ಗೊಠಾಣೆಯಲ್ಲಿರುವ ಗಭಾ ಪ್ರದೇಶದ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ ಕೋರ್​ಝೋನ್‌ಗೆ ಪ್ರವೇಶಿಸಿ ಅಪರಾಧ ಎಸಗಿದ್ದಾರೆ ಎನ್ನಲಾಗುತ್ತಿದೆ. ಅಪರಾಧಿಗಳನ್ನು ಸಂದೀಪ್ ತುಕ್ರಾಮ್, ಪವಾರ್ ಮಂಗೇಶ್, ಜನಾರ್ದನ್ ಕಾಮ್ಟೇಕರ್ ಮತ್ತು ಅಕ್ಷಯ್ ಸುನೀಲ್ ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರ ಅರಣ್ಯ ಇಲಾಖೆ ಆರೋಪಿಯ ಮೊಬೈಲ್‌ ಪರಿಶೀಲಿಸಿದಾಗ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಆರೋಪಿಗಳು ಮಾನಿಟರ್ ಹಲ್ಲಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಕೃತ್ಯದ ದಾಖಲೆಯನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ.

ನಂತರ ಸಾಂಗ್ಲಿ ಮೀಸಲು ಅರಣ್ಯದಲ್ಲಿ ನಿಯೋಜಿಸಲಾದ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಆರೋಪಿಗಳನ್ನು ಪತ್ತೆಹಚ್ಚಿದ್ದು, ಅದರಲ್ಲಿ ಅವರು ಕಾಡಿನಲ್ಲಿ ತಿರುಗುತ್ತಿರುವುದನ್ನು ಕಾಣಬಹುದಾಗಿದೆ. ವರದಿಗಳ ಪ್ರಕಾರ, ಮೂವರು ಆರೋಪಿಗಳು ಕೊಂಕಣದಿಂದ ಕೊಲ್ಲಾಪುರದ ಚಂದೋಳಿ ಗ್ರಾಮಕ್ಕೆ ಬೇಟೆಯಾಡಲು ಬಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಬಗ್ಗೆ ಗೊಂದಲಕ್ಕೊಳಗಾಗಿರುವ ಅರಣ್ಯಾಧಿಕಾರಿಗಳು, ಆರೋಪಿಗಳ ವಿರುದ್ಧದ ಆರೋಪಗಳ ಬಗ್ಗೆ ಚರ್ಚಿಸಲು ಭಾರತೀಯ ದಂಡನಾ ನ್ಯಾಯಾಲಯಕ್ಕೆ ಈ ವಿಷಯವನ್ನು ತಿಳಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಾಲ್​ ಮಾನಿಟರ್ ಹಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ರ ಅಡಿಯಲ್ಲಿ ಮೀಸಲು ಜಾತಿಯಾಗಿದೆ. ತಪ್ಪಿತಸ್ಥರಾದರೆ, ಆರೋಪಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

ಇದನ್ನೂ ಓದಿ:

Video: ಮೆಟ್ರೋ ಸ್ಟೇಶನ್​ ಗೋಡೆ ಹತ್ತಿ, ಆತ್ಮಹತ್ಯೆಗೆ ಯತ್ನಿಸಿದ ಹುಡುಗಿಯನ್ನು ಉಪಾಯದಿಂದ ಕಾಪಾಡಿದ ಸಿಐಎಸ್​ಎಫ್ ಸಿಬ್ಬಂದಿ

‘ಎಲ್ಲ ಶೋ ನೋಡ್ತೀನಿ, ಥಿಯೇಟರ್​ನಲ್ಲೇ ಮಲಗ್ತೀನಿ’: ಅಮೆರಿಕದಲ್ಲಿ ‘ಕೆಜಿಎಫ್​ 2’ ಪ್ರೇಕ್ಷಕರ ಪ್ರತಿಕ್ರಿಯೆ

Published On - 3:55 pm, Thu, 14 April 22