Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಬೆನ್ನಿನ ಕೆಳಗೆ ಉದ್ದನೆಯ ಬಾಲವಿರುವ ಯುವಕನ ವಿಡಿಯೋ ವೈರಲ್; ಹನುಮಂತನ ಪುನರ್ಜನ್ಮವೆಂದ ಜನರು!

ಸ್ಥಳೀಯ ಅರ್ಚಕರು ದೇಶಾಂತ್ ಹಿಂದೂ ಮಂಗಗಳ ದೇವರಾದ ಹನುಮಂತನ ಪುನರ್ಜನ್ಮ ಎಂದು ಪೋಷಕರಿಗೆ ತಿಳಿಸಿದರು. ಇದು ಪಾಲಕರಲ್ಲಿ ಸಂತಸ ಮೂಡಿಸಿತು. ಅಂದಿನಿಂದ ಆತ ದೇವರ ರೂಪವೆಂದೇ ಸ್ಥಳೀಯರು ಭಾವಿಸಿದ್ದಾರೆ.

Viral News: ಬೆನ್ನಿನ ಕೆಳಗೆ ಉದ್ದನೆಯ ಬಾಲವಿರುವ ಯುವಕನ ವಿಡಿಯೋ ವೈರಲ್; ಹನುಮಂತನ ಪುನರ್ಜನ್ಮವೆಂದ ಜನರು!
ನೇಪಾಳದ ಬಾಲವಿರುವ ಯುವಕ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Apr 13, 2022 | 10:11 PM

ನವದೆಹಲಿ: ನೇಪಾಳದ ಯುವಕನೊಬ್ಬನಿಗೆ ಬಾಲ ಮೂಡಿರುವ ಘಟನೆ ಎಲ್ಲೆಡೆ ಭಾರೀ ಚರ್ಚೆಯಾಗುತ್ತಿದೆ. ತನ್ನ ದೇಹದಿಂದ ಕೂದಲುಳ್ಳ ಬಾಲವನ್ನು ಬೆಳೆಸಿದ ಕಾರಣ ಈ ಯುವಕ ವೈರಲ್ ಆಗಿದ್ದಾನೆ. ಇದೀಗ ಅವನನ್ನು ದೇವರ ಪುನರ್ಜನ್ಮ ಎಂದು ಕರೆಯಲಾಗುತ್ತಿದೆ. ದೇಶಾಂತ್ ಅಧಿಕಾರಿ ಎಂಬ ಹೆಸರಿನ ಈ 16 ವರ್ಷದ ಯುವಕ ಜನರನ್ನು ಬೆರಗುಗೊಳಿಸಿದ್ದಾನೆ. ಆತನ ಬೆನ್ನಿನ ಕೆಳಗೆ ಬೆಳೆಯುತ್ತಿರುವ 70 ಸೆಂ.ಮೀ ಬಾಲದಿಂದಾಗಿ ಆತನ ಭಾರೀ ಪ್ರಸಿದ್ಧಿಯಾಗಿದ್ದಾನೆ.

ಬೆನ್ನೆಲುಬಿನ ಕಾಲಮ್‌ನ ಕೆಳಭಾಗದಲ್ಲಿರುವ ಅವನ ಕೋಕ್ಸಿಕ್ಸ್‌ನಿಂದ ಇರುವ ಈ ಬಾಲವನ್ನು ಅವನು ಹುಟ್ಟಿದ ಕೆಲವು ದಿನಗಳ ನಂತರ ಅವನ ಹೆತ್ತವರು ಮೊದಲು ಗುರುತಿಸಿದರು. ದಿ ಮಿರರ್ ಪ್ರಕಾರ, ಬಾಲವನ್ನು ಗುರುತಿಸಿದ ನಂತರ ದೇಶಾಂತ್​ನ ಪೋಷಕರು ಅವನನ್ನು ಹಲವಾರು ಸ್ಥಳೀಯ ಆಸ್ಪತ್ರೆಗಳಿಗೆ ಕರೆದೊಯ್ದರು. ಆಗ ಅರ್ಚಕರೊಬ್ಬರು ಆತನ ಬಾಲದ ಬಗ್ಗೆ ವಿಚಿತ್ರವಾದ ಮಾಹಿತಿಯನ್ನು ಹೇಳುವವರೆಗೂ ಅವರು ಚಿಕಿತ್ಸೆಯನ್ನು ಹುಡುಕುವ ಪ್ರಯತ್ನದಲ್ಲಿ ವಿದೇಶದಿಂದ ಮಾಹಿತಿ ಮತ್ತು ಶಿಫಾರಸುಗಳನ್ನು ಪಡೆಯುತ್ತಿದ್ದರು. ಆದರೆ, ಅರ್ಚಕರು ಹೇಳಿದ ಮಾತಿನಿಂದ ಅವರು ವೈದ್ಯರನ್ನು ಸಂಪರ್ಕಿಸುವ ಯೋಚನೆಯನ್ನು ಕೈಬಿಟ್ಟರು.

nepal tail boy

ನೇಪಾಳದ ಬಾಲವಿರುವ ಯುವಕ

ಸ್ಥಳೀಯ ಅರ್ಚಕರು ದೇಶಾಂತ್ ಹಿಂದೂ ಮಂಗಗಳ ದೇವರಾದ ಹನುಮಂತನ ಪುನರ್ಜನ್ಮ ಎಂದು ಪೋಷಕರಿಗೆ ತಿಳಿಸಿದರು. ಇದು ಪಾಲಕರಲ್ಲಿ ಸಂತಸ ಮೂಡಿಸಿತು. ಅಂದಿನಿಂದ ಆತ ದೇವರ ರೂಪವೆಂದೇ ಸ್ಥಳೀಯರು ಭಾವಿಸಿದ್ದಾರೆ.

ಈಗ, ದೇಶಾಂತ್ ಜಗತ್ತಿಗೆ ತಮ್ಮ ಬಾಲವನ್ನು ತೋರಿಸಿದ್ದಾನೆ. ಈತ ಆರಂಭದಲ್ಲಿ ತನ್ನ ಬಾಲದಿಂದಾಗಿ ಭಾರೀ ಮುಜುಗರಕ್ಕೀಡಾಗಿದ್ದ. ಆದರೆ, ಕ್ರಮೇಣ ಆತನಿಗೆ ಅದು ಅಭ್ಯಾಸವಾಗಿಹೋಯಿತು. ಈ ಬಗ್ಗೆ ಆತ ಯೂಟ್ಯೂಬ್​ನಲ್ಲಿ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದು, ತನ್ನ ಬಾಲವನ್ನು ತೋರಿಸುತ್ತಿದ್ದಾನೆ. “ಜನರು ನನ್ನನ್ನು ಹನುಮಾನ್ (ಮಂಗಗಳ ದೇವರು) ಮತ್ತು ಶಿವಾಜಿ (ಹಿಂದೂ ದೇವರು) ಎಂದೂ ಕರೆಯುತ್ತಾರೆ ಎಂದು ಆತ ಹೇಳಿದ್ದಾನೆ.

ಕೆಲವೊಮ್ಮೆ ಈ ರೀತಿಯ ವೈದ್ಯಕೀಯ ಅದ್ಭುತಗಳು ಸಂಭವಿಸುತ್ತವೆ. ವಿಭಿನ್ನ ಆನುವಂಶಿಕ ಅಸಹಜತೆಗಳು, ಬೆಳವಣಿಗೆಯ ನಿರ್ಬಂಧಗಳು ಮತ್ತು ಯಾಂತ್ರಿಕ ಶಕ್ತಿಗಳೊಂದಿಗಿನ ಜನರು ಬೆಳವಣಿಗೆಯ ಸಮಯದಲ್ಲಿ ಗರ್ಭಾಶಯದಲ್ಲಿನ ಮಗುವಿನ ಮೇಲೆ ಪರಿಣಾಮ ಬೀರುತ್ತಾರೆ. ಆದ್ದರಿಂದ ಕೆಲವು ಜನರು ವಿಶಿಷ್ಟ ಲಕ್ಷಣಗಳೊಂದಿಗೆ ಜನಿಸುತ್ತಾರೆ. ಇತ್ತೀಚೆಗೆ ಇದೇ ರೀತಿಯ ಘಟನೆ ಮಧ್ಯಪ್ರದೇಶದ ರತ್ಲಂನಲ್ಲಿ ನಡೆದಿತ್ತು. ಎರಡು ತಲೆಗಳು ಮತ್ತು ಮೂರು ಕೈಗಳೊಂದಿಗೆ ಒಂದು ಮಗು ಜನಿಸಿತ್ತು.

ಇದನ್ನೂ ಓದಿ: Viral News: ಪ್ರೀತಿಯ ನಾಯಿಯ ನೆನಪಿನಲ್ಲಿ ಅಮೃತಶಿಲೆಯಿಂದ ದೇವಸ್ಥಾನ ಕಟ್ಟಿದ ವೃದ್ಧ!

Viral News: ಗಾಳಿಯ ರಭಸಕ್ಕೆ ತಲೆ ಮೇಲಿಂದ ಹಾರಿ ಹೋಯ್ತು ವಿಗ್; ನಕ್ಕು ನಕ್ಕು ಸುಸ್ತಾದ ನೆಟ್ಟಿಗರು

Published On - 10:09 pm, Wed, 13 April 22

ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ
ಸಿದ್ದರಾಮಯ್ಯ ಸರ್ಕಾರ ಭ್ರಷ್ಟವೆಂದು ನಾನು ಹೇಳಿಲ್ಲ: ಬಸವರಾಜ ರಾಯರೆಡ್ಡಿ
ಸಿದ್ದರಾಮಯ್ಯ ಸರ್ಕಾರ ಭ್ರಷ್ಟವೆಂದು ನಾನು ಹೇಳಿಲ್ಲ: ಬಸವರಾಜ ರಾಯರೆಡ್ಡಿ
ತಮಿಳುನಾಡುನಲ್ಲಿ ಮುಂದೊಂದು ದಿನ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಅಣ್ಣಾಮಲೈ
ತಮಿಳುನಾಡುನಲ್ಲಿ ಮುಂದೊಂದು ದಿನ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಅಣ್ಣಾಮಲೈ
ಕುಟುಂಬ, ಮಕ್ಕಳು, ಸಿನಿಮಾ ಇತ್ಯಾದಿ.. ಮಗಳೊಟ್ಟಿಗೆ ಮಾತಿಗೆ ಕೂತ ಶಿವಣ್ಣ
ಕುಟುಂಬ, ಮಕ್ಕಳು, ಸಿನಿಮಾ ಇತ್ಯಾದಿ.. ಮಗಳೊಟ್ಟಿಗೆ ಮಾತಿಗೆ ಕೂತ ಶಿವಣ್ಣ
ಜೆಡಿಎಸ್ ಈಗಲೂ ಕರ್ನಾಟಕದಲ್ಲಿ ಸಾಕಷ್ಟು ಬಲಾಢ್ಯ: ನಿಖಿಲ್ ಕುಮಾರಸ್ವಾಮಿ
ಜೆಡಿಎಸ್ ಈಗಲೂ ಕರ್ನಾಟಕದಲ್ಲಿ ಸಾಕಷ್ಟು ಬಲಾಢ್ಯ: ನಿಖಿಲ್ ಕುಮಾರಸ್ವಾಮಿ
ವಕ್ಫ್ ತಿದ್ದುಪಡಿ ಕಾಯ್ದೆ ಕುರಿತು ಜಮ್ಮು ಕಾಶ್ಮೀರದ ವಿಧಾನಸಭೆಯಲ್ಲಿ ಗಲಾಟೆ
ವಕ್ಫ್ ತಿದ್ದುಪಡಿ ಕಾಯ್ದೆ ಕುರಿತು ಜಮ್ಮು ಕಾಶ್ಮೀರದ ವಿಧಾನಸಭೆಯಲ್ಲಿ ಗಲಾಟೆ
Video: ಕಚ್ಚಿದ್ದಕ್ಕೆ ಬೀದಿ ನಾಯಿಯನ್ನು ಗುಂಡಿಕ್ಕಿ ಕೊಂದ ವ್ಯಕ್ತಿ
Video: ಕಚ್ಚಿದ್ದಕ್ಕೆ ಬೀದಿ ನಾಯಿಯನ್ನು ಗುಂಡಿಕ್ಕಿ ಕೊಂದ ವ್ಯಕ್ತಿ
ಬೀದರ್ ಮತ್ತು ಕಲಬುರಗಿ ದರೋಡೆ ಪ್ರಕರಣಗಳ ನಡುವೆ ಲಿಂಕ್ ಇರೋ ಸಾಧ್ಯತೆ
ಬೀದರ್ ಮತ್ತು ಕಲಬುರಗಿ ದರೋಡೆ ಪ್ರಕರಣಗಳ ನಡುವೆ ಲಿಂಕ್ ಇರೋ ಸಾಧ್ಯತೆ
ಸಮಾಜ ಸ್ವಾಮೀಜಿಯನ್ನು ಕಡೆಗಣಿಸಿಲಾರಂಭಿಸಿದರೆ ಅಚ್ಚರಿಯಿಲ್ಲ: ವಿಜುಗೌಡ
ಸಮಾಜ ಸ್ವಾಮೀಜಿಯನ್ನು ಕಡೆಗಣಿಸಿಲಾರಂಭಿಸಿದರೆ ಅಚ್ಚರಿಯಿಲ್ಲ: ವಿಜುಗೌಡ
2 ಬಾರಿ ಫೈನ್ ಕಟ್ಟಿದ ಬಳಿಕ ಹೊಸ ಸೆಲೆಬ್ರೇಷನ್ ಪರಿಚಯಿಸಿದ ದಿಗ್ವೇಶ್ ರಾಠಿ
2 ಬಾರಿ ಫೈನ್ ಕಟ್ಟಿದ ಬಳಿಕ ಹೊಸ ಸೆಲೆಬ್ರೇಷನ್ ಪರಿಚಯಿಸಿದ ದಿಗ್ವೇಶ್ ರಾಠಿ