Viral Video: ಇವ್ರು ಮೋದಿಯಲ್ಲ ಕಣ್ರೀ; ವೈರಲ್ ಆಯ್ತು ಪಾನಿಪುರಿ ಮಾರುವ ಜ್ಯೂ. ಮೋದಿಜೀ ವಿಡಿಯೋ 

ದೇಹಾಕಾರ, ಉಡುಗೆ ತೊಡುಗೆ, ಕೇಶವಿನ್ಯಾಸ, ನೋಟದಲ್ಲೆಲ್ಲಾ ಹೆಚ್ಚು ಕಡಿಮೆ ಪ್ರಧಾನಿ ನರೇಂದ್ರ ಮೋದಿಯವರನ್ನೇ ಹೋಲುವ ವ್ಯಕ್ತಿಯೊಬ್ಬರ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಈ ವಿಡಿಯೋ ನೋಡಿ ಅರೇ ಏನಿದು ಪ್ರಧಾನಿ ಮೋದಿ ಪಾನಿಪುರಿ ಮಾರಾಟ ಮಾಡ್ತಿದ್ದಾರಾ ಎಂದು ನೆಟ್ಟಿಗರು ಕನ್ಫ್ಯೂಸ್ ಆಗಿದ್ದಾರೆ. 

Viral Video: ಇವ್ರು ಮೋದಿಯಲ್ಲ ಕಣ್ರೀ; ವೈರಲ್ ಆಯ್ತು ಪಾನಿಪುರಿ ಮಾರುವ ಜ್ಯೂ. ಮೋದಿಜೀ ವಿಡಿಯೋ 
Edited By:

Updated on: Apr 27, 2024 | 5:42 PM

ಇದೀಗ ದೇಶದೆಲ್ಲೆಡೆ ಲೋಕಸಭಾ ಚುನಾವಣಾ ರಣಕಣ ಕಾವೇರಿದೆ. ರಾಜಕೀಯ ನಾಯಕರು ಎಲ್ಲಾ ಕಡೆ ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರ ಭರ್ಜರಿಯಾಗಿ  ಪ್ರಚಾರ ನಡೆಸುತ್ತಿದ್ದಾರೆ.  ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ನಡುವೆ ಮೋದಿಯವರು ಪಾನಿಪುರಿ ಮಾರಾಟ ಮಾಡುತ್ತಿರುವಂತಹ ವಿಡಿಯೋವೊಂದು ವೈರಲ್ ಆಗಿದ್ದು, ಇದನ್ನು ನೋಡಿ ಅರೇ ಏನಿದು ಮೋದಿ ಪಾನಿಪುರಿ ಮಾರಾಟ ಮಾಡ್ತಿದ್ದಾರಾ ಎಂದು  ನೆಟ್ಟಿಗರು ಶಾಕ್ ಆಗಿದ್ದಾರೆ.

ವಾಸ್ತವವಾಗಿ ದೇಹಾಕಾರ, ಉಡುಗೆ ತೊಡುಗೆ, ಕೇಶವಿನ್ಯಾಸ, ನೋಟದಲ್ಲೆಲ್ಲಾ ಹೆಚ್ಚು ಕಡಿಮೆ ಪ್ರಧಾನಿ ಮೋದಿಯವರನ್ನೇ ಹೋಲುವ ವ್ಯಕ್ತಿಯ ವಿಡಿಯೋ ಇದಾಗಿದೆ. ಗುಜರಾತಿನ ಅಹಮದಾಬಾದಿನಲ್ಲಿ ಪಾನಿಪುರಿ ಮಾರಾಟ ಮಾಡುವ 71 ವರ್ಷ ವಯಸ್ಸಿನ ಅನಿಲ್ ಠಕ್ಕರ್ ಕಾಣಲು ಥೇಟ್ ಮೋದಿಯವರಂತೆ ಇದ್ದಾರೆ. ಈ ವ್ಯಕ್ತಿ ಕೂಡಾ ಮೋದಿಜೀಯ  ಅಪ್ಪಟ್ಟ ಅಭಿಮಾನಿಯಾಗಿದ್ದು, ತಮ್ಮ ಗ್ರಾಹಕರಿಗೆ ಶುಚಿ ರುಚಿಯಾದ ಆಹಾರವನ್ನು ಉಣಬಡಿಸುತ್ತಾರೆ. ಇವರ ಅಂಗಡಿಗೆ ಬರುವಂತಹ ಹೆಚ್ಚಿನವರು ಇವರನ್ನು ಪ್ರೀತಿಯಿಂದ ಮೋದಿಜೀ ಎಂದು  ಕರಿತಾರೆ, ಜೊತೆಗೆ ಸೆಲ್ಫಿ ಕೂಡಾ ಕ್ಲಿಕ್ಕಿಸಿಕೊಳ್ಳುತ್ತಾರೆ.  ಇದೀಗ ಪಾನಿಪುರಿ  ಮಾರಾಟ ಮಾಡುವ ಪ್ರಧಾನಿ ಮೋದಿ ತದ್ರೂಪಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಈ ವಿಡಿಯೋವನ್ನು ಫುಡ್ ವ್ಲೋಗರ್ ಮೆಹುಲ್ (@streetfoodrecipe) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಪ್ರಧಾನಿ ನರೇಂದ್ರ ಮೋದಿಯವರನ್ನೇ ಹೋಲುವ ಪಾನಿಪುರಿ ಮಾರುವ ವ್ಯಕ್ತಿಯನ್ನು ಭೇಟಿ ಮಾಡಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಥೇಟ್ ಪ್ರಧಾನಿ ಮೋದಿಯವರನ್ನೇ ಹೋಲುವ ವ್ಯಕ್ತಿಯೊಬ್ಬರು ತಮ್ಮ ಗ್ರಾಹಕರಿಗೆ ಪಾನಿಪುರಿ ಹಾಗೂ ಇತರೆ ಚಾಟ್ಸ್ ಗಳನ್ನು ಸರ್ವ್ ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಮುದ್ದು ಮರಿಗಳೊಂದಿಗೆ ತಾಯಿ ಹುಲಿಯ ಆಟ; ಕ್ಯಾಮೆರಾದಲ್ಲಿ ಸೆರೆಯಾಯಿತು ಮಮತೆಯ ದೃಶ್ಯ

ಕೆಲ ಸಮಯಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 37.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 1.5 ಮಿಲಿಯನ್ ಲೈಕ್ಸ್ ಗಳನ್ನು ಪಡೆದುಕೊಂಡಿದ್ದು, ಅಬ್ಬಬ್ಬಾ ಇವ್ರ ಧ್ವನಿ ಕೂಡಾ ಥೇಟ್ ಮೋದಿಯವರಂತೆಯೇ ಇದೆ ಎಂದು ಹೇಳುತ್ತಾ, ಈ ವಿಡಿಯೋಗೆ ನೆಟ್ಟಿಗರು ಭಾರಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ