Viral Video : ಮೆಟಾ ಕಂಪೆನಿಯ ಸಿಇಒ ಜುಕರ್ಬರ್ಗ್ ಉದ್ಯೋಗಿಗಳನ್ನು ವಜಾಗೊಳಿಸುವ ಕಾರ್ಯವನ್ನು ಮುಂದುವರಿಸಿದ್ದಾರೆ. ಈತನಕ 11,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ. ಈ ಮಧ್ಯೆ ಅನೇಕ ಉದ್ಯೋಗಿಗಳು ತಮ್ಮ ತಮ್ಮ ಅಭಿಪ್ರಾಯ, ಅನುಭವಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೆರಿಗೆ ರಜೆಯಲ್ಲಿದ್ದ ಫೇಸ್ಬುಕ್ನ ಕಮ್ಯೂನಿಕೇಷನ್ ಮ್ಯಾನೇಜರ್ ಅನ್ನೆಕಾ ಪಟೇಲ್ ವಜಾಗೊಳಿಸಲಾದ ಉದ್ಯೋಗಿಗಳ ಪೈಕಿ ಒಬ್ಬರು. ತಮ್ಮ ಮಗುವನ್ನು ಎತ್ತಿಕೊಂಡ ಫೋಟೋ ಜೊತೆ ವಿವಿರವಾದ ಪೋಸ್ಟ್ ಒಂದನ್ನು ಬರೆದು ಲಿಂಕ್ಡ್ಇನ್ ಗೆ ಹಾಕಿದ್ದಾರೆ.
‘ಈವತ್ತು ಬೆಳಗ್ಗೆ ಮೂರು ಗಂಟೆಗೆ ಎಚ್ಚರವಾಯಿತು. ನಾಲ್ಕು ಗಂಟೆಗೆ ನನ್ನ ಮೂರು ತಿಂಗಳ ಮಗು ಎಮಿಲಿಯಾಗೆ ಹಾಲು ಕುಡಿಸಿದೆ. ವಜಾಗೊಂಡ 11,000 ಉದ್ಯೋಗಿಗಳ ಪೈಕಿ ನಾನೂ ಒಬ್ಬಳಿರಬಹುದೆಂಬ ನಿರೀಕ್ಷೆಯಲ್ಲಿಯೇ ಆಫೀಸಿನ ಮೇಲ್ ತೆರೆದು ನೋಡಿದೆ. ನನಗೂ ಮೇಲ್ ಬಂದಿತ್ತು. ಸಹೋದ್ಯೋಗಿಗಳೊಂದಿಗೆ ವಿಚಾರಿಸಿದಾಗ ಅದು ಆಟೋಮ್ಯಾಟಿಕ್ ಆಗಿ ಬಂದ ಮೇಲ್ ಎಂದರು. ಆಗ ಸಮಯ ನಾಲ್ಕೂವರೆ. ಮುಂದಿನ ಬದುಕು ಹೇಗೆ ಎಂದು ಯೋಚಿಸುತ್ತ ಮಗುವಿನೊಂದಿಗೆ ಮಲಗಿದಾಗ ನಾಲ್ಕೂ ಮುಕ್ಕಾಲು. ಮತ್ತೆ ಮಲಗಬೇಕೋ ಬೇಡವೋ ಎಂಬ ಸಂದಿಗ್ಧ ಕಾಡಿತು. 5.35ಕ್ಕೆ ಮತ್ತೊಂದು ಮೇಲ್ ಬಂದಿತು. ವಜಾಗೊಳಿಸಿದ ಪಟ್ಟಿಯಲ್ಲಿ ನನ್ನ ಹೆಸರನ್ನೂ ನೋಡಿ ಆಘಾತವಾಯಿತು’ ಎಂದಿದ್ದಾರೆ ಅನ್ನೇಕಾ.
‘ಈ ತನಕ ಈ ಕಂಪೆಯನಿ ಇತಿಹಾಸದಲ್ಲಿ ಇಂಥ ಕಷ್ಟಕರವಾದ ನಿರ್ಧಾರವನ್ನು ತೆಗೆದುಕೊಂಡಿರಲಿಲ್ಲ. ಪ್ರತಿಭಾವಂತ ಉದ್ಯೋಗಿಗಗಳಲ್ಲಿ 11,000 ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದು ನೋವು ತರುತ್ತಿದೆ. ಇದಕ್ಕಾಗಿ ವಿಷಾದಿಸುತ್ತೇನೆ’ ಎಂದಿದ್ದಾರೆ ಜುಕರ್ ಬರ್ಗ್.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 7:31 pm, Thu, 10 November 22