ವಿಭಿನ್ನವಾಗಿ ಕಾಣುವ ಪ್ರಯತ್ನದಲ್ಲಿ ಮೆಕ್ಸಿಕನ್ ರಾಪರ್ ಚಿನ್ನದ ಚೈನ್ಗಳನ್ನು ಶಸ್ತ್ರ ಚಿಕಿತ್ಸೆಯ ಮೂಲಕ ತಲೆಯ ನೆತ್ತಿಯ ಭಾಗಕ್ಕೆ ಅಳವಡಿಸಿಕೊಂಡಿದ್ದಾರೆ. ಮೆಕ್ಸಿಕನ್ ರಾಪರ್ ಡಾರ್ ಸುರ್ ಎಂಬುವವರು ಈ ರೀತಿಯ ವಿಚಿತ್ರ ಸ್ಟೈಲ್ನಲ್ಲಿನ ವಿಡಿಯೋ ಮಾಡಿ ಅಭಿಮಾನಿಗಳು ಬೆರಗಾಗುವಂತೆ ಮಾಡಿದ್ದಾರೆ. ಚಿನ್ನದ ಚೈನ್ಗಳನ್ನು ತಲೆಗೆ ಅಳವಡಿಸಿಕೊಂಡವರಲ್ಲಿ ನಾನೇ ಮೊದಲಿಗ ಎಂದು ಹೇಳಿಕೊಂಡಿದ್ದಾರೆ.
ಏಪ್ರಿಲ್ನಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಚಿನ್ನದ ಚೈನ್ಗಳನ್ನು ನೆತ್ತಿಯ ಭಾಗಕ್ಕೆ ಅಳವಡಿಸಿಕೊಂಡಿದ್ದಾರೆ. ತಲೆಯ ಕೂದಲಿಗೆ ನೆಟ್ಟಿ ಮಾಡಿಸಿಕೊಂಡಂತೆಯೇ ಚಿನ್ನದ ಎಳೆಗಳನ್ನು ಅಳವಡಿಸಿಕೊಂಡಿದ್ದಾರೆ. ವಿಡಿಯೋ ಮೂಲಕ ತನ್ನ ಇನ್ಸ್ಟಾಗ್ರಾಂ ಹಿಂಬಾಲಕರಿಗೆ ಆಶ್ಚರ್ಯವನ್ನುಂಟು ಮಾಡಿದ್ದಾರೆ. ಅಭಿಮಾನಿಗಳು ನಾನಾ ಪ್ರತಿಕ್ರಿಯೆಗಳನ್ನು ಮಾಡುವ ಮೂಲಕ ಕಾಮೆಂಟ್ ವಿಭಾಗದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮೆಕ್ಸಿಕನ್ ರಾಪರ್, ಎಲ್ಲರಂತೆಯೇ ಕೂದಲಿಗೆ ಬಣ್ಣ ಹಚ್ಚಲು ಇಷ್ಟಪಡುವುದಿಲ್ಲ. ಎಲ್ಲರಿಗಿಂತ ವಿಭಿನ್ನವಾಗಿ ಕಾಣಿಸಬೇಕೆಂಬ ಆಸೆ ಅವರದ್ದು. ಹಾಗಾಗಿ ಚಿನ್ನದ ಚೈನ್ಗಳನ್ನು ಕೂದಲಿನಂತೆಯೇ ಶಸ್ತ್ರ ಚಿಕಿತ್ಸೆಯ ಮೂಲಕ ಅಳವಡಿಸಿಕೊಂಡಿದ್ದಾರೆ.
ಸತ್ಯವೆಂದರೆ ನಾನು ವಿಭಿನ್ನವಾಗಿ ಏನನ್ನಾದರೂ ಪ್ರಯತ್ನಿಸಲು ಬಯಸುತ್ತೇನೆ. ಪ್ರತಿಯೊಬ್ಬರೂ ಕೂದಲಿಗೆ ಬಣ್ಣ ಹಚ್ಚುವುದು ಸಾಮಾನ್ಯ. ಇದು ನನ್ನ ಕೂದಲು, ಚಿನ್ನದ ಕೂದಲು. ಇತಿಹಾಸದಲ್ಲಿಯೇ ಚಿನ್ನದ ಕೂದಲುಗಳನ್ನು ಅಳವಡಿಸಿಕೊಂಡ ಮೊದಲ ರಾಪರ್ ನಾನು ಎಂದು ಹೇಳಿಕೊಂಡಿದ್ದಾರೆ. ವಿಡಿಯೋವನ್ನು ಮೊದಲಿಗೆ ಟಿಕ್ಟಾಕ್ನಲ್ಲಿ ಹಂಚಿಕೊಳ್ಳಲಾಗಿದ್ದು, ಇದೀಗ ಫುಲ್ ವೈರಲ್ ಆಗಿದೆ.
ಇದನ್ನೂ ಓದಿ:
Viral Video: ಮನೆ ಬಳಿ ಕಾಣಿಸಿಕೊಂಡ ನಾಗರಹಾವಿಗೆ ಮಾತಿನಲ್ಲೇ ಸಮಾಧಾನ ಹೇಳಿ ವಾಪಾಸು ಕಳುಹಿಸಿದ ಮಹಿಳೆ
Viral Video: ಹಾವು ನೋಡಿ ಕಂಗಾಲಾಗಿ ಕಿರುಚುತ್ತಾ ಓಡಿದ ಯುವತಿ ವಿಡಿಯೋ ವೈರಲ್
(Mexican rappers get gold chain surgically implanted into scalp bizarre video goes viral)
Published On - 12:40 pm, Mon, 13 September 21