Viral: ಜಗತ್ತಿನ ವಿವಿಧೆಡೆ ಶಾಲಾಮಕ್ಕಳ ಊಟದ ತಟ್ಟೆಗಳು ಹೇಗಿರುತ್ತವೆ ನೋಡಿದ್ದೀರಾ?

|

Updated on: May 24, 2023 | 4:41 PM

Meals for School Children : ಪೌಷ್ಠಿಕ ಆಹಾರ ಮಕ್ಕಳ ಹಕ್ಕು. ಅಮೆರಿಕಾ, ಇಟಲಿ, ಫ್ರಾನ್ಸ್‌ನಂತಹ ದೇಶಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೆಂದೇ ಉಚಿತ ಊಟ ಒದಗಿಸಲಾಗುತ್ತದೆ. ನಮ್ಮ ದೇಶದ ಮಕ್ಕಳ ಊಟದ ತಟ್ಟೆಯಲ್ಲಿ ಏನೇನಿರಬೇಕೆನ್ನುತ್ತೀರಿ?

Viral: ಜಗತ್ತಿನ ವಿವಿಧೆಡೆ ಶಾಲಾಮಕ್ಕಳ ಊಟದ ತಟ್ಟೆಗಳು ಹೇಗಿರುತ್ತವೆ ನೋಡಿದ್ದೀರಾ?
ಫಿನ್​ಲ್ಯಾಂಡ್​ ಶಾಲಾಮಕ್ಕಳ ಮಧ್ಯಾಹ್ನದ ಬಿಸಿಯೂಟ
Follow us on

Food: ಶಾಲಾಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಎಂದಾಕ್ಷಣ ಕಣ್ಣೆದುರಿಗೆ ಸಾಲುಸಾಲಾಗಿ ಅವಘಡಗಳೇ ಬರುತ್ತವೆ. ಆಹಾರದಲ್ಲಿ ಹಲ್ಲಿ ಬಿದ್ದು ಅಸ್ವಸ್ಥರಾದ ವಿದ್ಯಾರ್ಥಿಗಳು. ಅನ್ನದೊಳಗೆ ಕುದ್ದು ಮಲಗಿರುವ ಹುಳುಗಳು, ಬೇಳೆಕಾಳುಗಳೊಳಗೆ ಪುತಪುತನೇ ಓಡಾಡಿಕೊಂಡಿರುವ ಬಾಲದಹುಳುಗಳು ಹೀಗೆ…  ಇಂಥ ದುರಾವಸ್ಥೆಯ ಕಥೆಗಳೇ. ಆದರೆ ಬೇರೆ ಬೇರೆ ದೇಶದಲ್ಲಿ ಶಾಲಾಮಕ್ಕಳಿಗಾಗಿ ಎಂಥ ಊಟದ ವ್ಯವಸ್ಥೆ ಇರುತ್ತದೆ ಎನ್ನುವ ಕುತೂಹಲ ನಿಮಗೆ ಎಂದಾದರೂ ಬಂದಿದ್ದಿದೆಯೇ? ಹಾಗಿದ್ದರೆ ನೋಡಿ ಈ ಪೋಸ್ಟ್​.

ಪೌಷ್ಠಿಕ ಆಹಾರ ಮಗುವಿನ ಹಕ್ಕು. ಅಂತೆಯೇ ಅಮೆರಿಕಾ, ಇಟಲಿ, ಫ್ರಾನ್ಸ್‌ನಂತಹ ದೇಶಗಳಲ್ಲಿನ ಶಾಲೆಗಳಲ್ಲಿ ಈ ಬಗ್ಗೆ ಹೆಚ್ಚು ಗಮನ ಹರಿಸಾಗುತ್ತದೆ. ಹಾಗಾಗಿಯೇ ಶಾಲಾ ವಿದ್ಯಾರ್ಥಿಗಳಿಗೆಂದೇ ಸಬ್ಸಿಡಿ ಅಥವಾ ಉಚಿತ ಊಟವನ್ನು ಇಲ್ಲಿ ಒದಗಿಸಲಾಗುತ್ತದೆ. ಮೊದಲ ಚಿತ್ರವು ಅಮೆರಿಕದ ಶಾಲೆಗಳಲ್ಲಿರುವ ಊಟದ ತಟ್ಟೆ. ಇಲ್ಲಿ ಹಣ್ಣುಗಳು, ಬೀನ್ಸ್​, ಚಿನ್​ ಫ್ರೈ, ಕುಕೀಸ್ ನೋಡಬಹುದು. ಎರಡನೇ ಚಿತ್ರವು ಬ್ರೆಝಿಲಿಯನ್​ ಶಾಲೆಗಳಲ್ಲಿ ಕೊಡುವ ಊಟದ ತಟ್ಟೆ. ಇದರಲ್ಲಿ ತರಕಾರಿ, ಬೀನ್ಸ್​, ಗ್ರೀನ್​ ಸಲಾಡ್​. ಇಟಲಿಯ ಶಾಲೆಗಳಲ್ಲಿ ಪಾಸ್ತಾ, ದ್ರಾಕ್ಷಿ, ಸಲಾಡ್​, ಬ್ರೆಡ್, ಮಾಂಸಖಾದ್ಯ.

ಇದನ್ನೂ ಓದಿ : Viral: ಗರಗಸ ಗಣಿತ; ಸರಳವೆನ್ನಿಸುವ ಈ ಗಣಿತ ಸಮಸ್ಯೆ ಗೊಂದಲ ಮೂಡಿಸಿದ್ದ್ಯಾಕೆ?

ಪೋಷಕಾಂಶಗಳುಳ್ಳ ಆಹಾರವನ್ನು ಸೇವಿಸುವುದರಿಂದ ದಿನವಿಡೀ ಮಕ್ಕಳು ಮಾನಸಿಕವಾಗಿ, ದೈಹಿಕವಾಗಿ ಚಟುವಟಿಕೆಯಿಂದ ಇರುತ್ತಾರೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೆ? ಈ ಪೋಸ್ಟ್​ ನೋಡಿದ ಅನೇಕರು ಈ ವ್ಯವಸ್ಥೆಯನ್ನು ಶ್ಲಾಘಿಸಿದ್ದಾರೆ. ಹಲವರು ಈ ಮಾಹಿತಿ ಸತ್ಯಕ್ಕೆ ದೂರವಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : Viral Video: ಊರ್ಫಿಯ ಹೊಸ ಅವತಾರ; ಸೆಗಣಿ ಮೆತ್ತಿಕೊಂಡಂತಿದೆ ಎನ್ನುತ್ತಿರುವ ನೆಟ್ಟಿಗರು

ಎಲ್ಲ ತಟ್ಟೆಗಳಿಗಿಂತ ಅಮೆರಿಕದ ಶಾಲಾಮಕ್ಕಳ ತಟ್ಟೆಯೇ ಆರೋಗ್ಯಕರ ಮತ್ತು ರುಚಿಯಾದ ಪದಾರ್ಥಗಳಿಂದ ಕೂಡಿದೆ ಎಂದಿದ್ದಾರೆ ಬಹಳಷ್ಟು ಜನ. ನಾನು ಬ್ರೆಝಿಲಿಯನ್​ ಪ್ರಜೆ, ನನ್ನ ಶಾಲಾದಿನಗಳಲ್ಲಿ ಕೆಟ್ಟ ಬ್ರೆಡ್​ ಮತ್ತು ಬೆಣ್ಣೆಯನ್ನು ತಿನ್ನುತ್ತಿದ್ದೆ ಎಂದು ಒಬ್ಬರು ಹೇಳಿದ್ದಾರೆ. ಈ ಇನ್​​ಸ್ಟಾಗ್ರಾಂ ಪೋಸ್ಟ್​ ನಿಖರವಾದ ಮಾಹಿತಿಯನ್ನು ಹೊಂದಿಲ್ಲ ಎಂದು ನನಗನ್ನಿಸುತ್ತದೆ ಎಂದು ಹಲವಾರು ಜನ ಪ್ರತಿಕ್ರಿಯಿಸಿದ್ದಾರೆ.

ಏನಂತೀರಿ ನೀವು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:39 pm, Wed, 24 May 23