
ಗುಜರಾತ್‌ನ ಅಹಮದಾಬಾದ್‌ನಿಂದ ಲಂಡನ್‌ನ ಗ್ಯಾಟ್‌ವಿಕ್‌ಗೆ 242 ಜನರನ್ನು ಹೊತ್ತು ಪ್ರಯಾಣ ಆರಂಭಿಸಿದ್ದ ಏರ್ ಇಂಡಿಯಾ ವಿಮಾನ AI171, ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ (Plane Crash) ಪತನಗೊಂಡ ಆಘಾತಕಾರಿ ಘಟನೆ ಗುರುವಾರ (ಮೇ. 12) ನಡೆದಿದೆ. ದುರಂತದಲ್ಲಿ ವಿಮಾನದಲ್ಲಿದ್ದ 242 ಪ್ರಯಾಣಿಕರಲ್ಲಿ ಓರ್ವ ಪವಾಡ ಸದೃಶ್ಯವಾಗಿ ಬದುಕುಳಿದ್ದು, ಮತ್ತೆಲ್ಲರೂ ಮೃತಪಟ್ಟಿದ್ದಾರೆ. ನೂರಾರು ಕನಸುಗಳನ್ನು ಹೊತ್ತು ಆಕಾಶಕ್ಕೆ ಏರುವ ಮೊದಲೇ ಅವರ ಜೀವಗಳು ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿದೆ. ಈ ಅಪಘಾತವನ್ನು ವಿಮಾನ ಅಪಘಾತಗಳ ಇತಿಹಾಸದಲ್ಲೇ ಅತ್ಯಂತ ದೊಡ್ಡ ಅಪಘಾತವೆಂದು ಪರಿಗಣಿಸಲಾಗಿದೆ. ಇನ್ನೂ ಈ ಅಪಘಾತದಲ್ಲಿ ಎಲ್ಲವೂ ಸುಟ್ಟು ಭಸ್ಮವಾಗಿದ್ದು, ಇದಕ್ಕೆ ಸಂಬಂಧಪಟ್ಟ ಆಘಾತಕಾರಿ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದನ್ನು ನೀವು ನೋಡಿರಬಹುದು. ಆದರೆ ಈ ಸುದ್ದಿಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಇನ್ನೊಂದು ವಿಡಿಯೋ ಮೈ ಜುಮ್ ಎನ್ನಿಸುತ್ತದೆ. ಪೈಲೆಟ್ ಸಮಯಪ್ರಜ್ಞೆಯಿಂದ ಬರ್ಡ್ ಸ್ಟ್ರೈಕ್ (Bird strike) ಆಗುವುದು ಹೇಗೆ ಕ್ಷಣದಲ್ಲಿ ತಪ್ಪಿದೆ ಎಂಬುದನ್ನು ನೀವಿಲ್ಲಿ ನೋಡಬಹುದಾಗಿದೆ.
ವಿಮಾನ ಹಾರಾಟದಲ್ಲಿರುವಾಗ ಪೈಲೆಟ್ ಹಕ್ಕಿಗಳ ಚಲನವಲನಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಅದರಲ್ಲಿಯೂ ವಿಮಾನದ ಟೇಕ್-ಆಫ್ ಅಥವಾ ಲ್ಯಾಂಡಿಂಗ್ ಸಮಯದಲ್ಲಿ ಬರ್ಡ್ ಸ್ಟ್ರೈಕ್ ಆಗುವ ಸಂಭವ ಹೆಚ್ಚಿರುತ್ತದೆ. ಏಕೆಂದರೆ ಈ ಸಮಯದಲ್ಲಿ ವಿಮಾನದ ವೇಗ ಕಡಿಮೆ ಇರುವುದರಿಂದ ಹಕ್ಕಿ ಬರುವುದನ್ನು ತಪ್ಪಿಸಲು ಕಷ್ಟವಾಗುತ್ತದೆ. ಈ ರೀತಿ ಬರ್ಡ್ ಸ್ಟ್ರೈಕ್ ಗಳು ವಿಮಾನಕ್ಕೆ ಹಾನಿ ಉಂಟುಮಾಡಬಹುದು, ದುಬಾರಿ ರಿಪೇರಿ, ವಿಳಂಬ ಅಥವಾ ತುರ್ತು ಲ್ಯಾಂಡಿಂಗ್ ಗಳಿಗೂ ಕಾರಣವಾಗಬಹುದು. ಮಾತ್ರವಲ್ಲ ಕೆಲವು ಸಂದರ್ಭಗಳಲ್ಲಿ, ಇದು ಗಂಭೀರ ಅಪಘಾತಗಳಿಗೂ ಸಹ ಕಾರಣವಾಗುತ್ತದೆ. ಅದೇ ರೀತಿ aviationwg ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಪೈಲೆಟ್ ತನ್ನ ಚಾಕಚಕ್ಯತೆಯಿಂದ ಯಾವ ರೀತಿ ಹಕ್ಕಿಯಿಂದ ವಿಮಾನ ಮತ್ತು ಅದರೊಳಗಿರುವ ಜನರನ್ನು ಕಾಪಾಡಿದ್ದಾನೆ ಎಂಬುದನ್ನು ನೀವಿಲ್ಲಿ ನೋಡಬಹುದಾಗಿದೆ.
ಇದನ್ನೂ ಓದಿ: Video: ವಿಮಾನ ಪತನಕ್ಕೂ ಮೊದಲು ಪ್ರಯಾಣಿಕರ ಕಿರುಚಾಟ, ಪ್ರಾರ್ಥನೆಯ ಕೂಗು; AI ಯಲ್ಲಿ ಕೊನೆಯ ಕ್ಷಣದ ದೃಶ್ಯ
18 ವಾರಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ಪೈಲೆಟ್ ಸಮಯಪ್ರಜ್ಞೆಯನ್ನು ಹೊಗಳಿದ್ದು ‘ಗ್ರೇಟ್ ಜಾಬ್’ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಪೈಲೆಟ್ ತಮ್ಮ ಪ್ರಾಣವನ್ನು ತಾವೇ ಉಳಿಸಿಕೊಂಡಿದ್ದಾರೆ’ ಎಂದು ಹೇಳಿದ್ಧಾರೆ. ಮತ್ತೊಬ್ಬ ಬಳಕೆದಾರರು ಈ ದೃಶ್ಯ ಕಂಡು ಪೈಲೆಟ್ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ