ಪ್ರತಿವರ್ಷ ಈ ಮಳೆಗಾಲದ ಸಮಯದಲ್ಲಿ ಮನೆಯ ಗೋಡೆ ಕುಸಿದೋ ಇಲ್ಲವೇ ವಿದ್ಯುತ್ ಕಂಬ ಬಿದ್ದೋ ಅಥವಾ ಜೋರಾದ ಗಾಳಿ ಮಳೆಗೆ ಬೃಹತ್ ಮರ ಬಿದ್ದು ಸಾವು ನೋವುಗಳು ಸಂಭವಿಸುತ್ತಿರುತ್ತವೆ. ಈ ಮಳೆಗಾಲದಲ್ಲಿ ಎಷ್ಟೇ ಜಾಗೃತಿ ವಹಿಸಿದರೂ ಕಮ್ಮಿಯೇ. ಈ ಸಮಯದಲ್ಲಿ ಅಪಾಯ ಎಲ್ಲಿಂದ ಬರುತ್ತೆ ಅಂತ ಹೇಳೋಕೆ ಸಾಧ್ಯವಿಲ್ಲ. ಇದೀಗ ಅದೇ ರೀತಿಯ ಆಘಾತಕಾರಿ ಘಟನೆಯೊಂದು ನಡೆದಿದ್ದು, ಯುವಕನೊಬ್ಬ ಓಣಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿಯೇ ಭಾರೀ ಮಳೆಯಿಂದಾಗಿ ಶಿಥಿಲಗೊಂಡಿದ್ದ ಮನೆಯ ಕಾಂಪೌಂಡ್ ಗೋಡೆಯೊಂದು ದೊಪ್ಪನೆ ಕುಸಿದು ಬಿದ್ದಿದೆ. ಕೂದಲೆಳೆ ಅಂತರದಲ್ಲಿ ಈ ಅವಘಡದಿಂದ ಯುವಕ ಪಾರಾಗಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಘಟನೆ ಕೇರಳದ ವಡಕರ ಎಂಬಲ್ಲಿ ನಡೆದಿದ್ದು, ಇಲ್ಲಿನ ಪುಟ್ಟ ಓಣಿ ರಸ್ತೆಯಲ್ಲಿ ಯುವಕನೊಬ್ಬ ನಡೆದುಕೊಂಡು ಹೋಗುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಮೇಲಿನ ಮನೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ. ಈ ಸಂದರ್ಭದಲ್ಲಿ ಯುವಕ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಭೀಕರ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಕುರಿತ ವಿಡಿಯೋವನ್ನು Chachayeem Pillerum ಹೆಸರಿನ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಓಣಿ ರಸ್ತೆಯಲ್ಲಿ ಯುವಕನೊಬ್ಬ ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಕಾಣಬಹುದು. ಆತ ನಡೆದುಕೊಂಡು ಹೋಗುತ್ತಿದ್ದಾಗಲೇ ಇದ್ದಕ್ಕಿದ್ದಂತೆ ಮೇಲಿನ ಮನೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದ್ದು, ಬಾಲಕ ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇದನ್ನೂ ಓದಿ: ಮದುವೆಯಾಗಲು ಸತಾಯಿಸಿದ ಬಾಯ್‌ಫ್ರೆಂಡ್, ಕೋಪದಲ್ಲಿ ಆತನ ಮರ್ಮಾಂಗ ಕತ್ತರಿಸಿ ಹಾಕಿದ ವೈದ್ಯೆ
ಎರಡು ವಾರಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 8 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಎದೆ ಝಲ್ ಎನಿಸುವ ದೃಶ್ಯ ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ