ಇತ್ತೀಚಿಗಂತೂ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರರವರೆಗೂ ಪ್ರತಿಯೊಬ್ಬರೂ ಕೂಡಾ ಮೊಬೈಲ್ ಎನ್ನುವ ಮಾಯಾಜಾಲದಲ್ಲಿ ಸಿಲುಕಿಕೊಂಡಿದ್ದಾರೆ. ಹೌದು ಮೊಬೈಲ್ ಇಲ್ಲದೆ ಇಂದಿನ ಕಾಲದಲ್ಲಿ ಬದುಕುವುದು ಕಷ್ಟ ಎನ್ನುವಂತಾಗಿದೆ. ಮಕ್ಕಳು ಮೊಬೈಲ್ ಅಲ್ಲಿ ಮುಳುಗಿದರೆ ಆಟ ಪಾಠವನ್ನೇ ಮರೆಯುತ್ತಾರೆ. ಇನ್ನೂ ದೊಡ್ಡವರು ಮೊಬೈಲ್ ನೋಡುತ್ತಾ ಕೂತರೆ ತಮ್ಮ ಜವಬ್ದಾರಿ, ಕೆಲಸ ಕಾರ್ಯವನ್ನೇ ಮರೆಯುತ್ತಾರೆ. ಅಷ್ಟೇ ಅಲ್ಲದೆ ಮನೆಗೆ ಕಳ್ಳ ನುಗ್ಗಿದ್ರೂ ಅವರಿಗೆ ತಿಳಿಯದು. ಅದೇ ರೀತಿ ಮೊಬೈಲ್ ಚಟದಿಂದಾಗುವ ಅವಾಂತರಗಳ ಬಗ್ಗೆ ಪಾಠ ಕಲಿಸುವುವಂತಹ ವಿಡಿಯೋವೊಂದು ಇದೀಗ ಹರಿದಾಡುತ್ತಿದ್ದು, ಮಹಿಳೆಯೊಬ್ಬರು ಮೊಬೈಲ್ ಚಟಕ್ಕೆ ಬಿದ್ದು, ತರಕಾರಿ ಬದಲಿಗೆ ಹೆತ್ತ ಕಂದಮ್ಮನನ್ನೆ ಫ್ರಿಡ್ಜ್ ಒಳಗಿಟ್ಟಿದ್ದಾರೆ.
ಮೊಬೈಲ್ ಚಟಕ್ಕೆ ಬಿದ್ದಂತಹ ಎಲ್ಲರಿಗೂ ಒಂದೊಳ್ಳೆ ಪಾಠ ಕಲಿಸುವಂತಹ ಈ ವಿಡಿಯೋವನ್ನು @Prof_Cheems ಎಂಬ ಹೆಸರಿನ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಭಯಾನಕ ಮೊಬೈಲ್ ಚಟ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
Horrible Addiction 😰 pic.twitter.com/D3Pl0a4rsv
— Prof cheems ॐ (@Prof_Cheems) March 30, 2024
ವೈರಲ್ ವಿಡಿಯೋದಲ್ಲಿ ಪುಟ್ಟ ಮಗು ಹಾಗೂ ಮೊಬೈಲ್ ನಲ್ಲಿಯೇ ಮುಳುಗಿ ಹೋಗಿರುವಂತಹ ತಾಯಿಯನ್ನು ಕಾಣಬಹುದು. ಮಗು ಇದೆ, ಆ ಪುಟ್ಟ ಕಂದಮ್ಮನಿಗೂ ಸಮಯ ನೀಡಬೇಕು ಎಂಬ ಪರಿಜ್ಞಾನವೂ ಇಲ್ಲದೆ ತಾಯಿಯು ಮೊಬೈಲ್ ಅಲ್ಲಿಯೇ ಮಾತನಾಡುತ್ತಾ ಇರುತ್ತಾಳೆ. ಅಷ್ಟೇ ಅಲ್ಲದೆ ತರಕಾರಿ ಕಟ್ ಮಾಡುತ್ತಲೂ ಮೊಬೈಲ್ ನಲ್ಲಿಯೇ ಮಾತನಾಡುತ್ತಿರುತ್ತಾಳೆ. ಹೀಗೆ ಮೊಬೈಲ್ ಎಂಬ ಮಾಯಾಜಾಲದಲ್ಲಿ ಮುಳುಗಿ ಹೋಗಿರುವ ಆಕೆ, ಹೆಚ್ಚಿಟ್ಟ ತರಕಾರಿ ಬದಲಿಗೆ ಮಗುವನ್ನೇ ಫ್ರಿಡ್ಜ್ ಒಳಗೆ ಇಡುತ್ತಾಳೆ. ಸ್ವಲ್ಪ ಹೊತ್ತಿನ ಬಳಿಕ ಆಕೆಯ ಗಂಡ ಮನೆಗೆ ಬರುತ್ತಾನೆ ಹಾಗೂ ಮಗು ಎಲ್ಲಿ ಎಂದು ಪ್ರಶ್ನೆ ಮಾಡುತ್ತಾನೆ. ಆ ಸಂದರ್ಭದಲ್ಲಿ ಇಬ್ಬರೂ ಮಗುವನ್ನು ಕಾಣದೆ ಕಂಗಾಲಾಗುತ್ತಾರೆ. ಹೀಗೆ ಸ್ವಲ್ಪ ಹೊತ್ತು ಹುಡುಕಾಟ ನಡೆಸಿದಾಗ, ಫ್ರಿಡ್ಜ್ ಒಳಗಿಂದ ಮಗು ಅಳುವ ಸದ್ದು, ಕೇಳುತ್ತದೆ. ನಂತರ ಮಗುವನ್ನು ಫ್ರಿಡ್ಜ್ ನಿಂದ ಹೊರ ತೆಗೆಯುವಂತಹ ದೃಶ್ಯವನ್ನು ಕಾಣಬಹುದು.
ಇದನನ್ನೂ ಓದಿ: ಬಾರ್ಬಿ ಡಾಲ್ ತರ ಕಾಣಲು 43 ಶಸ್ತ್ರಚಿಕಿತ್ಸೆಗೆ ಒಳಗಾದ ಯುವತಿ
ಮಾರ್ಚ್ 30 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ವಿಡಿಯೋ ಸ್ಕ್ರಿಪ್ಟೆಡ್ ಆಗಿರಬಹುದು, ಆದರೆ ಪ್ರತಿಯೊಬ್ಬ ಪೋಷಕರಿಗೂ ಒಂದೊಳ್ಳೆ ಪಾಠವನ್ನು ಕಲಿಸುವಂತಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹೌದು ಇಂದಿನ ದಿನಗಳಲ್ಲಿ ನಾವೆಲ್ಲರೂ ಮೊಬೈಲ್ ಎಂಬ ಮಾಯಾಜಾಲದಲ್ಲಿ ಸಿಕ್ಕಿ ಹಾಕಿಕೊಂಡಿದ್ದೇವೆʼ ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ