Viral Video: ಜಲಪಾತದ ಅಂಚಿಗೆ ತಾಯಿ ಮಗು; ಅದೃಷ್ಟ ಚೆನ್ನಾಗಿತ್ತು ಎನ್ನುತ್ತಿರುವ ನೆಟ್ಟಿಗರು

Waterfall : ಪ್ರವಾಸವು ಏಕತಾನತೆಯನ್ನು ಮುರಿದು ಬದುಕಿಗೆ ಒಂದಿಷ್ಟು ಚೈತನ್ಯ ಕೊಡುತ್ತದೆ. ಈಗಂತೂ ವಾತಾವರಣ ಹಿತವಾಗಿದೆ. ಆದರೂ ಪ್ರವಾಸಿಗರು ಎಚ್ಚರವಹಿಸಬೇಕಲ್ಲವೆ? ಅತೀ ಆತ್ಮವಿಶ್ವಾಸಿಗಳಿಗೆ ಈ ವಿಡಿಯೋ ಒಂದು ಪಾಠವೇ.

Viral Video: ಜಲಪಾತದ ಅಂಚಿಗೆ ತಾಯಿ ಮಗು; ಅದೃಷ್ಟ ಚೆನ್ನಾಗಿತ್ತು ಎನ್ನುತ್ತಿರುವ ನೆಟ್ಟಿಗರು
ಮೊದಲನೇ ಚಿತ್ರದಲ್ಲಿ ಜಲಪಾತದ ಅಂಚಿಗೆ ಸಿಕ್ಕಿಹಾಕಿಕೊಂಡಿರುವ ತಾಯಿ ಮಗು. ಎರಡನೇ ಚಿತ್ರದಲ್ಲಿ ಅವರನ್ನು ರಕ್ಷಿಸುತ್ತಿರುವ ಪ್ರವಾಸಿಗರು.

Updated on: Jul 14, 2023 | 10:14 AM

Trip : ಬಿಸಿಲು ಕಡಿಮೆಯಾಗಿ ಮಳೆಗಾಲ ಬರುತ್ತಿದ್ದಂತೆ ಪ್ರವಾಸಿಪ್ರಿಯರಿಗೆ (Tourists) ಎಲ್ಲಿಲ್ಲದ ಉಮೇದು ಬಂದುಬಿಡುತ್ತದೆ. ವಾರಾಂತ್ಯಕ್ಕೆ ಸ್ನೇಹಿತರೊಂದಿಗೆ ಅಥವಾ ಕುಟುಂಬದೊಂದಿಗೆ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಆದರೆ ಕೆಲವೊಮ್ಮೆ ಅಂದುಕೊಂಡದ್ದೇ ಒಂದು ಆಗುವುದೇ ಒಂದು ಆಗಿ ಪ್ರವಾಸದ ನೆನಪು ಕರಾಳವಾಗಿ ಕಾಡುವ ಸಾಧ್ಯತೆ ಇರುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಬಹುಶಃ ಇವರಿಬ್ಬರೂ ತಾಯಿ ಮತ್ತು ಮಗು ಇರಬೇಕು. ಹೀಗೆ ಜಲಪಾತದಲ್ಲಿ ಅಪಾಯಕ್ಕೆ ಸಿಲುಕಿದ್ದಾರೆ. ಅಕಸ್ಮಾತ್​ ಅಲ್ಲಿ ಯಾರೂ ಇರದಿದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು?

ಈಗಂತೂ ಮಳೆಗಾಲ, ಹಳ್ಳಕೊಳ್ಳಗಳು ನದೀ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಹಿಮಾಚಲ ಪ್ರದೇಶದಲ್ಲಂತೂ ಊರಿಗೆ ಊರೇ ಕೊಚ್ಚಿಕೊಂಡು ಹೋಗುತ್ತಿದೆ. ಈ ಮೇಲಿನ ವಿಡಿಯೋ ಅನ್ನು ನಿನ್ನೆಯಷ್ಟೇ ಇನ್​ಸ್ಟಾನಲ್ಲಿ ಹಂಚಿಕೊಳ್ಳಲಾಗಿದೆ. ನೋಡಲು ಸಣ್ಣ ಜಲಪಾತದಂತೆ ಇದು ಕಾಣುತ್ತದೆ. ಆದರೆ ಕೆಳಗೆ ಆಳದಲ್ಲಿ ಬಾವಿ ಇದೆಯೇನೋ ಎಂಬಂತೆಯೂ ಭಾಸವಾಗುತ್ತದೆ. ಈ ಸ್ಥಳ ಎಲ್ಲಿಯದು ಎನ್ನುವ ವಿವರ ಈ ವಿಡಿಯೋದಲ್ಲಿಲ್ಲ. ಆದರೆ ಈ ದೃಶ್ಯವಂತೂ ಭಯಂಕರವಾಗಿದೆ.

ಇದನ್ನೂ ಓದಿ : Viral: ಅಮೆರಿಕದ ವಕೀಲೆಗೆ ಗಂಡು ಹುಡುಕಿ ಕೊಟ್ಟವರಿಗೆ ರೂ. 4 ಲಕ್ಷ ಬಹುಮಾನ

ಇದು ಎಲ್ಲರಿಗೂ ಒಂದು ದೊಡ್ಡ ಪಾಠ, ಇಂಥ ಸ್ಥಳಗಳಲ್ಲಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು ಎಂದು ಗಾಬರಿಪಡುತ್ತಿದ್ದಾರೆ ನೆಟ್ಟಿಗರು. ಸದ್ಯ ಇವು ಬದುಕಿದರಲ್ಲ, ಅದೃಷ್ಟ ಎಂದು ನಿಟ್ಟುಸಿರು ಬಿಡುತ್ತಿದ್ದಾರೆ. ಇಂಥ ಅಪಾಯದ ಸ್ಥಳಗಳಲ್ಲಿ ಪ್ರವಾಸಿಗರನ್ನು ಹೇಗೆ ಬಿಡಲಾಗಿದೆ ಎಂದು ಪ್ರಶ್ನಿಸಿದ್ದಾರೆ ಕೆಲವರು. ಏನೇ ಆಗಲಿ ಪ್ರವಾಸಿಗರಿಗೂ ಜವಾಬ್ದಾರಿ ಎನ್ನುವುದು ಬೇಕಲ್ಲ? ಎಂದು ಮರು ಪ್ರಶ್ನಿಸಿದ್ಧಾರೆ ಉಳಿದವರು.

ಇದನ್ನೂ ಓದಿ : Viral: ಮೌಂಟೇನ್ ಡ್ಯೂ ಜಿಲೇಬಿ! ಇದು ಯಾವ ಊರಲ್ಲಿ ಸಿಗುತ್ತದೆ ಗೊತ್ತೇ?

ಈ ವಿಡಿಯೋ ಅನ್ನು 2 ಮಿಲಿಯನ್​ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. 86,000ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಪ್ರಕತಿ ಕಲಿಸುವ ಪಾಠವನ್ನು ನಾವು ಅರ್ಥ ಮಾಡಿಕೊಳ್ಳದಿದ್ದರೆ ನಮಗೇ ಅಪಾಯ ಎಂದು ಅನೇಕರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 10:11 am, Fri, 14 July 23