
Viral Video : ನಿನ್ನೆಯಷ್ಟೇ ತಾಯಂದಿರ ದಿನವನ್ನು ಆಚರಿಸಿದ್ದೀರಿ. ಸಾಮಾಜಿಕ ಜಾಲತಾಣಗಳಲ್ಲಿ ಅಮ್ಮನ ಬಗ್ಗೆ ಥರಹೇವಾರಿ ಬರಹಗಳು, ನೆನಪುಗಳು, ಫೋಟೋ, ವಿಡಿಯೋಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದೀರಿ, ಮಿಡಿದಿದ್ದೀರಿ, ಸ್ಪಂದಿಸಿದ್ದೀರಿ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಗಗನಸಖಿ ವೃತ್ತಿಯಲ್ಲಿರುವ ಮಗಳು ಮತ್ತು ಕ್ಯಾಬಿನ್ ಸಿಬ್ಬಂದಿಯಾಗಿರುವ ತಾಯಿ, ವಿಮಾನದಲ್ಲಿ ಸಮವಸ್ತ್ರಸಮೇತ ಎದುರುಗೊಂಡಿದ್ದಾರೆ. ಈ ಅಪರೂಪದ ಕ್ಷಣಗಳು ಇಬ್ಬರನ್ನೂ ಭಾವುಕಗೊಳಿಸಿವೆ.
ಇಂಡಿಗೋ ಏರ್ಲೈನ್ಸ್ನ ಗಗನಸಖಿ ನಬಿರಾ ಸಶ್ಮಿ ವಿಮಾನದಲ್ಲಿ ಪ್ರಯಾಣಿಕರನ್ನು ಸ್ವಾಗತಿಸುತ್ತ ತನ್ನ ತಾಯಿಯನ್ನುದ್ದೇಶಿಸಿ ಮಾತನಾಡುತ್ತಾಳೆ. ಕಳೆದ ಆರು ವರ್ಷಗಳಿಂದ ನನ್ನ ತಾಯಿ ಕ್ಯಾಬಿನ್ ಸಿಬ್ಬಂದಿಯಾಗಿ ಮಾಡುವ ಎಲ್ಲಾ ಕೆಲಸಗಳನ್ನು ನೋಡುತ್ತಿದ್ದೆ. ಆದರೆ ಈವತ್ತು ಒಂದೇ ವಿಮಾನದಲ್ಲಿ ಸಮವಸ್ತ್ರದಲ್ಲಿ ಒಟ್ಟಿಗೇ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಈ ಅವಕಾಶಕ್ಕೆ ಇಂಡಿಗೋಗೆ ಧನ್ಯವಾದ ಎಂದಿದ್ದಾಳೆ. ಪ್ರಯಾಣಿಕರು ಈ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ.
ಇದನ್ನೂ ಓದಿ : ಸ್ಪೈಸ್ಜೆಟ್ನ ಬ್ಯಾಂಕಾಕ್ ವಿಮಾನದಲ್ಲಿ ಪೈಲಟ್ನ ತಮಾಷೆ ವಿಡಿಯೋ ವೈರಲ್
ನೆಟ್ಟಿಗರನೇಕರು ಇವರಿಗೆ ಶುಭ ಹಾರೈಸಿದ್ದಾರೆ. ನಿಮ್ಮಿಬ್ಬರಿಗೂ ಇಂಥ ಅವಕಾಶಗಳು ಮತ್ತಷ್ಟು ಸಿಗಲಿ ಎಂದು ಪ್ರತಿಕ್ರಿಯಿಸಿದ್ದಾರೆ. ಹೀಗೆ ತಾಯಿ ಮಗಳಿಗೆ ಈ ಅವಕಾಶ ಕಲ್ಪಿಸಿದ ವಿಮಾನ ಸಂಸ್ಥೆಗೆ ವಂದನೆ ಎಂದು ಕೆಲವರು ಹೇಳಿದ್ದಾರೆ. ಇಂಥ ಆಪ್ತಘಳಿಗೆಗಳು ಆಗಾಗ ಸಂಭವಿಸುತ್ತಿರಲಿ ಎಂದು ಕೆಲವರು ಆಶಯ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:10 am, Mon, 15 May 23