Viral: ಆರ್ಡರ್ ತಲುಪಿಸಲು ಪುಟ್ಟ ನಾಯಿ ಮರಿ ಜತೆಗೆ ಮನೆ ಬಾಗಿಲಿಗೆ ಬಂದ ಬ್ಲಿಂಕಿಟ್ ಡೆಲಿವರಿ ಬಾಯ್

ಕೆಲವರಿಗೆ ಪ್ರಾಣಿಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಮನುಷ್ಯರಿಗಿಂತ ಶ್ವಾನಗಳ ಮೇಲೆ ಹೆಚ್ಚು ಪ್ರೀತಿ ತೋರುತ್ತಾರೆ. ಆದರೆ ಇದೀಗ ಬ್ಲಿಂಕಿಟ್ ಡೆಲಿವರಿ ಬಾಯ್‌ನ ಕಾಯಕದಲ್ಲಿ ಈ ಶ್ವಾನದ ಮರಿ ಜತೆಯಾಗಿದೆ. ಡೆಲಿವರಿ ಬಾಯ್ ಜತೆಗೆ ಬೈಕ್ ಏರಿ ಗ್ರಾಹಕರ ಮನೆಗಳಿಗೆ ತೆರಳುತ್ತಿದೆ. ಇದರ ಹಿಂದೆ ಕಾರಣವೂ ಇದೆ. ಈ ಹೃದಯ ಸ್ಪರ್ಶಿ ಘಟನೆಯೂ ಸದ್ಯ ನೆಟ್ಟಿಗರ ಗಮನ ಸೆಳೆಯುತ್ತಿದೆ.

Viral: ಆರ್ಡರ್ ತಲುಪಿಸಲು ಪುಟ್ಟ ನಾಯಿ ಮರಿ ಜತೆಗೆ ಮನೆ ಬಾಗಿಲಿಗೆ ಬಂದ ಬ್ಲಿಂಕಿಟ್ ಡೆಲಿವರಿ ಬಾಯ್
ಡೆಲಿವರ್‌ ಬಾಯ್‌ ಜತೆಗೆ ನಾಯಿಮರಿ
Image Credit source: LinkedIn

Updated on: Oct 15, 2026 | 3:57 PM

ಮುಂಬೈ, ಅಕ್ಟೋಬರ್ 15: ನಿಯತ್ತು ಎಂದರೆ ಮೊದಲು ನೆನಪಾಗುವುದೇ ಈ ಶ್ವಾನ (dog). ಈ ಶ್ವಾನಕ್ಕಿಂತ ಹೆಚ್ಚು ಆಪ್ತರು ಬೇರಾರೂ ಇರಲಿಕ್ಕಿಲ್ಲ. ಹೌದು, ರಸ್ತೆ ಅಪಘಾತದಲ್ಲಿಗಾಯಗೊಂಡ ನಾಯಿ ಮರಿಯನ್ನು ಬ್ಲಿಂಕಿಟ್ ಡೆಲಿವರಿ ಬಾಯ್ ರಕ್ಷಿಸಿ ಚಿಕಿತ್ಸೆ ನೀಡಿ ಸಾಕುತ್ತಿದ್ದಾರೆ. ಇದೀಗ ಈ ಪುಟ್ಟ ನಾಯಿಮರಿಯೇ ಡೆಲಿವರಿ ಬಾಯ್‌ನ ನಿತ್ಯದ ಕಾಯಕದಲ್ಲಿ ಜತೆಯಾಗಿದೆ. ತನ್ನನ್ನು ಕಾಪಾಡಿದ ಡೆಲಿವರಿ ಬಾಯ್ ನ ಬೈಕ್ ಸೇರಿ ಜತೆಗೆ ಗ್ರಾಹಕರಿಗೆ ಆರ್ಡರ್ ಗಳನ್ನು ತಲುಪಿಸುತ್ತಿದೆ. ಈ ಹೃದಯ ಸ್ಪರ್ಶಿ ಘಟನೆಯೂ ಲಿಂಕ್ಡ್ ಇನ್ ನಲ್ಲಿ ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ಡೆಲಿವರಿ ಬಾಯ್ ಜತೆಗೆ ಬಂದ ಪುಟಾಣಿ ನಾಯಿಮರಿ

ಮುಂಬೈನ ಉದ್ಯೋಗಿ ರೋಷನ್ ಮ್ಹಾತ್ರೆ (roshanmhatre) ತಮ್ಮ ಲಿಂಕ್ಡ್ ಇನ್ ಖಾತೆಯಲ್ಲಿ ಹೃದಯಸ್ಪರ್ಶಿ ಘಟನೆ ಬಗ್ಗೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಬ್ಲಿಂಕಿಟ್‌ನಲ್ಲಿ ದಿನಸಿ ವಸ್ತುಗಳನ್ನು ಆರ್ಡರ್ ಮಾಡಿದ್ದೆ. ಡೆಲಿವರಿ ಬಾಯ್ ಕೇವಲ 15 ನಿಮಿಷಗಳಲ್ಲಿ ಮನೆ ಬಾಗಿಲಿಗೆ ತಲುಪಿಸಿದ್ದ. ಆತನ ಬೈಕ್ ಮುಂದೆ ಪುಟಾಣಿ ನಾಯಿ ಮರಿ ಕುಳಿತುಕೊಂಡಿತ್ತು. ಇದನ್ನು ನೋಡಿ ಏನಿದು ನಾಯಿ ಮರಿಯನ್ನು ನಿಮ್ಮ ಜತೆಗೆ ಕರೆದುಕೊಂಡು ಬಂದಿದ್ದೀರಾ? ಎಂದು ಪ್ರಶ್ನಿಸಿದೆ.

ಲಿಂಕ್ಡ್ ಇನ್ ಪೋಸ್ಟ್ ಇಲ್ಲಿದೆ


ಅಪಘಾತದಲ್ಲಿ ನಾಯಿಮರಿ ರಕ್ಷಿಸಿದ್ದ ಡೆಲಿವರಿ ರೈಡರ್ಸ್

ಡೆಲಿವರಿ ಬಾಯ್ ಇದರ ಹಿಂದಿನ ಅಸಲಿ ಕಾರಣ ಬಿಚ್ಚಿಟ್ಟಿದ್ದರು. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಈ ನಾಯಿ ಮರಿ ಕಾರಿನ ಟಯರ್ ಕೆಳಗೆ ಸಿಲುಕಿ ಗಂಭೀರ ಸ್ಥಿತಿಯಲ್ಲಿ ರಸ್ತೆಯಲ್ಲಿ ಬಿದ್ದಿತ್ತು. ನಮ್ಮ ಕಣ್ಣಿಗೆ ಈ ನಾಯಿ ಮರಿ ಬೀಳುತ್ತಿದ್ದಂತೆ ಏರಿಯಾದ ಬ್ಲಿಂಕಿಟ್ ಡೆಲಿವರಿ ರೈಡರ್ಸ್ ಹಣ ಹಾಕಿ, ವೈದ್ಯಕೀಯ ಚಿಕಿತ್ಸೆ ಕೊಡಿಸಿದೆವು. ಇದೀಗ ಬ್ಲಿಂಕಿಟ್ ವೇರ್‌ಹೌಸ್‌ನಲ್ಲಿದೆ. ನಾವು ಡೆಲಿವರಿ ಹೋಗುವಾಗ ನಮ್ಮ ಜತೆಗೆ ಬೈಕ್‌ನಲ್ಲಿ ಬರುತ್ತದೆ ಎಂದು ಹೇಳಿದ್ದಾನೆ.

ಇದನ್ನೂ ಓದಿ: ಮಾನವೀಯತೆ ಅಂದ್ರೆ ಇದೇ ಅಲ್ಲವೇ; ಕಾಲಿಲ್ಲದ ಶ್ವಾನಕ್ಕೆ ರಸ್ತೆ ದಾಟಲು ನೆರವಾದ ಹೃದಯವಂತರು

ಲಿಂಕ್ಡ್ ಇನ್ ನಲ್ಲಿ ಹಂಚಿಕೊಂಡ ಈ ಪೋಸ್ಟ್ ಸದ್ಯ ನೆಟ್ಟಿಗರ ಗಮನ ಸೆಳೆದಿದ್ದು ಕಾಮೆಂಟ್‌ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರ, ನಿಜಕ್ಕೂ ನಿಮ್ಮದು ಒಳ್ಳೆಯ ಮನಸ್ಸು ಎಂದಿದ್ದಾರೆ. ಇನ್ನೊಬ್ಬರು, ಇಂತಹ ಸುದ್ದಿ ಕೇಳಿ ಖುಷಿ ಆಯ್ತು ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಈ ನಾಯಿಮರಿಯನ್ನು ನಾನು ದತ್ತು ಸ್ವೀಕರಿಸುವೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us