ಟ್ರೈನ್‌ನಲ್ಲಿ ಕೋಲ್ಡ್‌ ಪ್ಲೇ ಸಾಂಗ್ಸ್‌ ಹಾಡಿದ ಪ್ರಯಾಣಿಕರು; ವಿಡಿಯೋ ವೈರಲ್‌

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 22, 2025 | 12:54 PM

ಜನವರಿ 18, 19 ಮತ್ತು 21 ರಂದು ಮುಂಬೈನಲ್ಲಿ ಕೋಲ್ಡ್‌ ಪ್ಲೇ ಮ್ಯೂಸಿಕ್‌ ಕಾನ್ಸರ್ಟ್‌ ನಡೆದಿತ್ತು. ಈ ಒಂದು ಲೈವ್‌ ಮ್ಯೂಸಿಕಲ್‌ ಶೋನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಂಗೀತ ಪ್ರಿಯರು ಭಾಗವಹಿಸಿದ್ದರು. ಇದೀಗ ಇಲ್ಲೊಂದು ವಿಡಿಯೋ ವೈರಲ್‌ ಆಗಿದ್ದು, ಕನ್ಸರ್ಟ್‌ ಮುಗಿಸಿ ಮುಂಬೈ ಲೋಕಲ್‌ ಟ್ರೈನ್‌ನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಸಂಗೀತ ಕಛೇರಿಯ ಗುಂಗಿನಲ್ಲೇ ಇದ್ದ ಯಂಗ್‌ಸ್ಟರ್ಸ್‌ ರೈಲಿನಲ್ಲಿಯೇ ಜೋರಾಗಿ ಕೋಲ್ಡ್‌ ಪ್ಲೇ ಸಾಂಗ್ಸ್‌ ಹಾಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಟ್ರೈನ್‌ನಲ್ಲಿ ಕೋಲ್ಡ್‌ ಪ್ಲೇ ಸಾಂಗ್ಸ್‌ ಹಾಡಿದ ಪ್ರಯಾಣಿಕರು; ವಿಡಿಯೋ ವೈರಲ್‌
ವೈರಲ್​​ ವೀಡಿಯೋ
Follow us on

ಬ್ರಿಟನ್‌ನ ಜನಪ್ರಿಯ ಮ್ಯೂಸಿಕಲ್‌ ಬ್ಯಾಂಡ್‌ ಕೋಲ್ಡ್‌ ಪ್ಲೇ ಬಗ್ಗೆ ಯಂಗ್‌ಸ್ಟರ್ಸ್‌ಗೆ ಗೊತ್ತೇ ಇದೆ. ಇದೀಗ ಕೋಲ್ಡ್‌ ಪ್ಲೇ ಬ್ಯಾಂಡ್‌ ಭಾರತೀಯ ಅಭಿಮಾನಿಗಳನ್ನು ಮನರಂಜಿಸಲು ಭಾರತಕ್ಕೆ ಕಾಲಿಟ್ಟಿದ್ದು, ಜನವರಿ 18, 19 ಮತ್ತು 21 ರಂದು ಮುಂಬೈನಲ್ಲಿ ಅದ್ದೂರಿ ಕೋಲ್ಡ್‌ ಪ್ಲೇ ಮ್ಯೂಸಿಕ್‌ ಕಾನ್ಸರ್ಟ್‌ ನಡೆದಿತ್ತು. ಈ ಒಂದು ಲೈವ್‌ ಮ್ಯೂಸಿಕಲ್‌ ಶೋನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಂಗೀತ ಪ್ರಿಯರು ಭಾಗವಹಿಸಿದ್ದರು. ಇದೀಗ ಇಲ್ಲೊಂದು ವಿಡಿಯೋ ವೈರಲ್‌ ಆಗಿದ್ದು, ಕನ್ಸರ್ಟ್‌ ಮುಗಿಸಿ ಲೋಕಲ್‌ ಟ್ರೈನ್‌ನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಸಂಗೀತ ಕಛೇಯ ಗುಂಗಿನಲ್ಲೇ ಇದ್ದ ಯಂಗ್‌ಸ್ಟರ್ಸ್‌ ರೈಲಿನಲ್ಲಿಯೇ ಜೋರಾಗಿ ಕೋಲ್ಡ್‌ ಪ್ಲೇ ಸಾಂಗ್ಸ್‌ ಹಾಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಈ ಒಂದು ಮ್ಯೂಸಿಕಲ್‌ ಕನ್ಸರ್ಟ್‌ನಲ್ಲಿ ಮುಂಬೈ ಮೂಲದ ಕಂಟೆಂಟ್‌ ಕ್ರಿಯೇಟರ್‌ ಮೋಕ್ಷಾ ಶಾ ಎಂಬವರು ಸಹ ಭಾಗವಹಿಸಿದ್ದರು. ಜೊತೆಗೆ ಇನ್ನೂ ಅನೇಕ ಸಂಗೀತ ಪ್ರಿಯರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಕನ್ಸರ್ಟ್‌ ಮುಗಿಸಿ ಲೋಕಲ್‌ ಟ್ರೈನ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ಸಂಗೀತ ಕಛೇರಿಯ ಗುಂಗಿನಲ್ಲೇ ಇದ್ದ ಈ ಎಲ್ಲರೂ ಮಸ್ತ್‌ ಆಗಿ ರೈಲಿನಲ್ಲಿ ಕೋಲ್ಡ್‌ ಪ್ಲೇ ಸಾಂಗ್ಸ್‌ ಹಾಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ಸುಂದರ ಕ್ಷಣವನ್ನು ಮೋಕ್ಷಾ ಶಾ (moksha_shah27) ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಸಂಗೀತ ಕಛೇರಿ ಮುಗಿಸಿ ಲೋಕಲ್‌ ಟ್ರೈನ್‌ನಲ್ಲಿ ಮನೆಗಳಿಗೆ ತೆರಳುತ್ತಿದ್ದಾಗ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರೂ ಜೊತೆಯಾಗಿ ರೈಲಿನಲ್ಲಿ ಕೋಲ್ಡ್‌ ಪ್ಲೇ ಸಾಂಗ್ಸ್‌ ಹಾಡುತ್ತಿರುವಂತಹ ಸುಂದರ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಉಚಿತ ಭಾಗ್ಯವಲ್ಲ, ಉದ್ಯೋಗ ಮುಖ್ಯ… ವೈರಲ್‌ ಆಗ್ತಿದೆ ಆಟೋ ಹಿಂದೆ ಬರೆದ ಅರ್ಥಪೂರ್ಣ ಸಾಲು

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 4.7 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದಂತೂ ತುಂಬಾನೇ ಸುಂದರವಾಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಸಂಗೀತ ಕಛೇರಿಗಿಂತ ಇಲ್ಲಿ ಇವರು ಹಾಡಿದ ಹಾಡೇ ಸಖತ್ತಾಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಕೋಲ್ಡ್‌ ಪ್ಲೇ ಭಜನಾ ಮಂಡಳಿʼ ಎಂಬ ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ