Viral: ನಾವು ಅಂಬಾನಿ ಫ್ರೆಂಡ್ಸ್‌… ಆಂಟಿಲಿಯಾ ಪ್ರವೇಶಿಸಲು ಯತ್ನಿಸಿದ ವಿದೇಶಿ ಕಂಟೆಂಟ್ ಕ್ರಿಯೆಟರ್ಸ್‌; ವಿಡಿಯೋ ವೈರಲ್

| Updated By: ಅಕ್ಷತಾ ವರ್ಕಾಡಿ

Updated on: Jan 11, 2025 | 12:30 PM

ಕಂಟೆಂಟ್‌ ಕ್ರಿಯೆಟರ್ಸ್‌ ಲೈಕ್ಸ್‌, ವೀವ್ಸ್‌ಗಾಗಿ ಕೆಲವೊಂದು ಕಸರತ್ತುಗಳನ್ನು ಮಾಡ್ತಿರ್ತಾರೆ. ಅದೇ ರೀತಿ ಇಲ್ಲಿಬ್ಬರು ವಿದೇಶಿ ಕಂಟೆಂಟ್ ಕ್ರಿಯೆಟರ್ಸ್‌ ನಾವಿಬ್ಬರು ಅಂಬಾನಿ ಫ್ರೆಂಡ್ಸ್‌, ಶ್ರೀಮಂತರ ಮಕ್ಕಳು ಎಂದು ಹೇಳಿ ಮುಖೇಶ್‌ ಅಂಬಾನಿಯವರ ಆಂಟಿಲಿಯಾವನ್ನು ಪ್ರವೇಶಿಸಲು ಯತ್ನಿಸಿದ್ದು, ಇದು ಮನೆ, ರೆಸ್ಟೋರೆಂಟ್ ಅಲ್ಲ ಎಂದು ನಾಜೂಕಾಗಿ ಮಾತನಾಡಿ ಸೆಕ್ಯುರಿಟಿ ಗಾರ್ಡ್‌ ಅವರಿಬ್ಬರನ್ನು ಹೊರಗಟ್ಟಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Viral: ನಾವು ಅಂಬಾನಿ ಫ್ರೆಂಡ್ಸ್‌… ಆಂಟಿಲಿಯಾ ಪ್ರವೇಶಿಸಲು ಯತ್ನಿಸಿದ ವಿದೇಶಿ ಕಂಟೆಂಟ್ ಕ್ರಿಯೆಟರ್ಸ್‌; ವಿಡಿಯೋ ವೈರಲ್
Foreign Content Creators Youtubers Tried To Enter Into Ambani Antilia
Follow us on

ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮುಖೇಶ್‌ ಅಂಬಾನಿಯವರ ಆಂಟಿಲಿಯಾ ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ. ಈ ಮನೆಗೆ ಬಿಗಿಯಾದ ಭದ್ರತಾ ವ್ಯವಸ್ಥೆಗಳಿದ್ದು, ಅಷ್ಟು ಸುಲಭವಾಗಿ ಇಲ್ಲಿಗೆ ಯಾರಿಂದಲೂ ಪ್ರವೇಶಿಸಲು ಸಾಧ್ಯವಿಲ್ಲ. ಆದ್ರೆ ವಿದೇಶಿ ಕಂಟೆಂಟ್‌ ಕ್ರಿಯೆಟರ್ಸ್‌ಗಳಿಬ್ಬರು ನಾವು ಅಂಬಾನಿ ಫ್ರೆಂಡ್ಸ್‌, ಶ್ರೀಮಂತರ ಮಕ್ಕಳು ಎಂದು ಹೇಳುತ್ತಾ ಆಂಟಿಲಿಯಾ ಪ್ರವೇಶಿಸಲು ಯತ್ನಿಸಿದ್ದು, ಇದು ಮನೆ, ರೆಸ್ಟೋರೆಂಟ್ ಅಲ್ಲ ಎಂದು ನಾಜೂಕಾಗಿ ಮಾತನಾಡಿ ಸೆಕ್ಯುರಿಟಿ ಗಾರ್ಡ್‌ ಅವರಿಬ್ಬರಿಗೂ ಪ್ರವೇಶ ನಿರಾಕರಿಸಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ವಿದೇಶಿ ಕಂಟೆಂಟ್‌ ಕ್ರಿಯೆಟರ್ಸ್‌ಗಳಾದ ಬೆನ್‌ ಮುಮದಿವಿರಿಯಾ ಮತ್ತು ಆರಿಸ್‌ ಯೇಗರ್‌ ಮುಂಬೈಯಲ್ಲಿರುವ ಮುಖೇಶ್‌ ಅಂಬಾನಿ ಅವರ ಆಂಟಿಲಿಯಾವನ್ನು ಪ್ರವೇಶಿಸಲು ಯತ್ನಿಸಿದಾಗ ಸೆಕ್ಯುರಿಟಿ ಗಾರ್ಡ್‌ ಅವರಿಬ್ಬರಿಗೂ ಪ್ರವೇಶವನ್ನು ನಿರಾಕರಿಸಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

ನಾವು ಅಂಬಾನಿ ಫ್ರೆಂಡ್ಸ್‌, ನಾವು ಶ್ರೀಮಂತರ ಮಕ್ಕಳು ಎಂದು ಹೇಳಿ ಆ ಇಬ್ಬರು ಕಂಟೆಂಟ್‌ ಕ್ರಿಯೆಟರ್ಸ್‌ ಅಂಟಿಲಿಯಾ ಪ್ರವೇಶಿಸಲು ಪ್ರಯತ್ನಿಸುತ್ತಾರೆ. ಆ ಸಂದರ್ಭದಲ್ಲಿ ನಿಮ್ಮಲ್ಲಿ ಯಾವುದೇ ಮೇಲ್‌ ಅಥವಾ ಮೆಸೇಜ್‌ ಇದ್ಯಾ ಎಂದು ಸೆಕ್ಯುರಿಟಿ ಗಾರ್ಡ್‌ ಕೇಳುತ್ತಾರೆ. ಇದಕ್ಕೆ ಉತ್ತರಿಸಿದ ಆ ಯುವಕರು ನಾವು ಯಾವಾಗ ಬೇಕಾದರೂ ಬರಬಹುದು ಎಂದು ಮದುವೆ ಕಾರ್ಯಕ್ರಮದ ವೇಳೆ ಅಂಬಾನಿ ಕುಟುಂಬದವರು ಹೇಳಿದ್ದರು. ನಿಮ್ಗೆ ಗೊತ್ತಾ ಬಾಲಿ ದೇಶ ತನ್ನ ತಂದೆಯ ಒಡೆತನದಲ್ಲಿದೆ ಮತ್ತು ಅಂಬಾನಿ ಕುಟುಂಬ ಅಲ್ಲಿಗೆ ಬಂದಾಗ, ಅವರು ಅವರನ್ನು ರಾಜರಂತೆ ಸ್ವಾಗತಿಸುತ್ತಾರೆ. ಈಗ ನಮ್ಮನ್ನು ಕೂಡಾ ಒಳಗೆ ಹೋಗಲು ಬಿಡಿ ಎಂದು ಹೇಳುತ್ತಾರೆ. ಇವರ ತರ್ಲೆ ಮಾತುಗಳನ್ನು ಕೇಳಲಾರದೆ ಕೊನೆಗೆ ಸೆಕ್ಯುರಿಟಿ ಗಾರ್ಡ್‌ ಇದು ಮನೆ,ಇದು ರೆಸ್ಟೋರೆಂಟ್ ಅಲ್ಲ ಎಂದು ಗದರಿ ಅವರಿಬ್ಬನ್ನು ಅಲ್ಲಿಂದ ಹೊರಗಟ್ಟಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸೆಕ್ಯುರಿಟಿ ಗಾರ್ಡ್‌ನ ವೃತ್ತಿಪರತೆ ಮತ್ತು ಬುದ್ಧಿವಂತಿಕೆಯನ್ನು ನೆಟ್ಟಿಗರು ಹೊಗಳಿದ್ದಾರೆ.

ಇದನ್ನೂ ಓದಿ: ಪುಟಾಣಿ ಮಕ್ಕಳಂತೆ ಮುದ್ದು ಕರುವಿಗೂ ನಡೆಯಿತು ಅದ್ದೂರಿ ತೊಟ್ಟಿಲು ಶಾಸ್ತ್ರ; ವಿಡಿಯೋ ವೈರಲ್‌

theeuropeankid ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 49.4 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಂಬಾನಿ ಮನೆ ಸೆಕ್ಯುರಿಟಿ ಗಾರ್ಡ್‌ಗೆ ನನಗಿಂತ ಹೆಚ್ಚೇ ಇಂಗ್ಲೀಷ್‌ ತಿಳಿದಿದೆಯಲ್ಲಪ್ಪಾʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ಸೆಕ್ಯುರಿಟಿ ಗಾರ್ಡ್‌ ಬುದ್ಧಿವಂತಿಕೆಗೆ ಮೆಚ್ಚಲೇಬೇಕುʼ ಎಂದು ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ