Video: ಡೆಲಿವರಿ ಬಾಯ್‌ ಟು ಫ್ಯಾಶನ್‌ ಮಾಡೆಲ್;‌ ಇದು ಸಾಮಾನ್ಯ ಹುಡುಗನ ಅಸಾಮಾನ್ಯ ಕಥೆ

ಛಲ, ದೃಢ ಮನಸ್ಸೊಂದಿದ್ದರೆ, ಜೀವನದಲ್ಲಿ ಬರುವ ಕಷ್ಟಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಬಹುದು. ಇದಕ್ಕೆ ಉತ್ತಮ ಉದಾಹರಣೆಯಂತಿರುವ ಕಥೆಯೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಒಂದು ಕಾಲದಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ ಸಾಮಾನ್ಯ ಯುವಕ ಇಂದು ಫ್ಯಾಶನ್‌ ಮಾಡೆಲ್‌ ಆಗಿರುವುದನ್ನು ಕಂಡು ಹಾಗೂ ಈ ಯುವಕನ ಸ್ಫೂರ್ತಿದಾಯಕ ಕಥೆಯನ್ನು ಕೇಳಿ ನೆಟ್ಟಿಗರು ಬೆರಗಾಗಿದ್ದಾರೆ.

Video: ಡೆಲಿವರಿ ಬಾಯ್‌ ಟು ಫ್ಯಾಶನ್‌ ಮಾಡೆಲ್;‌ ಇದು ಸಾಮಾನ್ಯ ಹುಡುಗನ ಅಸಾಮಾನ್ಯ ಕಥೆ
ವೈರಲ್​​ ವಿಡಿಯೋ
Updated By: ಅಕ್ಷಯ್​ ಪಲ್ಲಮಜಲು​​

Updated on: Aug 30, 2024 | 2:33 PM

ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಎಂತಹ ಕಷ್ಟಗಳನ್ನು ಬೇಕಾದರೂ ಮೆಟ್ಟಿ ನಿಂತು ಸಾಧನೆ ಮಾಡಬಹುದು. ಸಾಧಿಸಲು ವಯಸ್ಸು, ಬಡತನ ಯಾವುದೂ ಅಡ್ಡಿ ಬರೋದಿಲ್ಲ. ಹೀಗೆ ಜೀರೋದಿಂದ ಹೀರೋ ಆಗಿ ಮಿಂಚಿದವರ ಹಲವಾರು ಸ್ಪೂರ್ತಿದಾಯಕ ಕಥೆಗಳ ಬಗ್ಗೆ ನಾವು ಆಗಾಗ್ಗೆ ಕೇಳುತ್ತಲೇ ಇರುತ್ತೇವೆ. ಅದೇ ರೀತಿ ಇಲ್ಲೊಬ್ಬ ಯುವಕ ಕೂಡಾ ಜೀವನದಲ್ಲಿ ಕಷ್ಟ ಪಟ್ಟರೆ, ಛಲವಿದ್ದರೆ ನಾವು ಇಷ್ಟಪಟ್ಟದ್ದನ್ನು ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದು, ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ. ಒಂದು ಕಾಲದಲ್ಲಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದಾತ ಇಂದು ಮಾಡೆಲ್‌ ಆಗಿ ಮಿಂಚುತ್ತಿರುವ ಈ ಯುವಕಕ ಸ್ಫೂರ್ತಿದಾಯಕ ಕಥೆಯನ್ನು ಕೇಳಿ ನೆಟ್ಟಿಗರು ಬೆರಗಾಗಿದ್ದಾರೆ.

ಎರಡು ವರ್ಷಗಳ ಹಿಂದೆ ಸ್ವಿಗ್ಗಿ ಡೆಲಿವರಿ ಬಾಯ್‌ ಆಗಿ ಕೆಲಸ ಆರಂಭಿಸಿ ಮುಂಬೈನ ಸಾಹಿಲ್‌ ಸಿಂಗ ಎಂಬ ಯುವಕ ಇಂದು ಫ್ಯಾಶನ್‌ ಮಾಡೆಲ್‌ ಆಗಿ ಮಿಂಚುತ್ತಿದ್ದಾನೆ. ಹೌದು ಡೆಲಿವರಿ ಬಾಯ ಮಾತ್ರವಲ್ಲದೆ ಬರ್ಗರ್‌ ಕಿಂಗ್‌ ಔಟ್‌ಲೆಟ್‌ನಲ್ಲಿ ಚೆಫ್‌ ಆಗಿ, ಸೇಲ್ಸ್‌ ಎಕ್ಸಿಕ್ಯೂಟ್‌ ಆಗಿಹಾಗೂ ಕೆಲ ತಿಂಗಳುಗಳ ಕಾಲ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡಿದ ಈತ ಇಂದು ತನ್ನ ಕಠಿಣ ಪರಿಶ್ರಮದಿಂದ ಫ್ಯಾಶನ್‌ ಮಾಡೆಲ್‌ ಆಗಿ ಮಿಂಚುತ್ತಿದ್ದಾನೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ಸ್ಪೂರ್ತಿದಾಯಕ ಕಥೆಯನ್ನು ಸಾಹಿಲ್‌ (fashiontipssahil) ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಡೆಲಿವರಿ ಬಾಯ್‌ ಟು ಮಾಡೆಲ್”‌ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾನೆ. ವೈರಲ್‌ ವಿಡಿಯೋದಲ್ಲಿ ಸಾಹಿಲ್‌ ಡೆಲಿವರಿ ಬಾಯ್‌ನಿಂದ ಫ್ಯಾಶನ್‌ ಮಾಡೆಲ್‌ ಆದ ರೋಚಕ ಜರ್ನಿಯ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಡಿವೋರ್ಸ್‌ ಬಳಿಕ ಗಂಡಸರ ಜೀವನ ಅಂದುಕೊಂಡಷ್ಟು ಸುಲಭವಿಲ್ಲ, ಕರ್ನಾಟಕ ಹೈಕೋರ್ಟ್​​​ ಮುಂದೆ ಮಕ್ಕಳಿಗಾಗಿ ಅಂಗಲಾಚಿದ ತಂದೆ

ಐದು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್‌ 4.6 ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಿಜಕ್ಕೂ ಈ ಯುವಕನ ಕಥೆ ಸ್ಪೂರ್ತಿದಾಯಕವಾಗಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಹೀಗೆ ಇನ್ನೂ ಎತ್ತರಕ್ಕೆ ಬೆಳೆಯಿರಿʼ ಎಂದು ಹರಸಿದ್ದಾರೆ.

ವೈರಲ್​​​ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ