ಮುಂಬೈ: (viral video) ಅಪಾಯಕಾರಿ ಕಾರ್ ಸ್ಟಂಟ್ ಮಾಡುತ್ತಿದ್ದ ಇಬ್ಬರೂ ವ್ಯಕ್ತಿಗಳನ್ನು ಮುಂಬೈ ಪೊಲೀಸರು (mumbai police) ಮಂಗಳವಾರ ಬಂಧಿಸಿರುವಂತಹ ಘಟನೆ ನಡೆದಿದೆ. ಮುಂಬೈನ ಬಾಂದ್ರಾ ವರ್ಲಿ ಸಮುದ್ರದ (Bandra Worli Sea Link) ಬಳಿ ಈ ಘಟನೆ ನಡೆದಿದ್ದು, ಇಮ್ರಾನ್ ಜಾಹಿರ್ ಆಲಂ ಅನ್ಸಾರಿ (27) ಮತ್ತು ಗುಲ್ಫಾಮ್ ಸಬೀರ್ ಅನ್ಸಾರಿ (25) ಎನ್ನುವವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೋಮವಾರ ರಾತ್ರಿ ಸಮುದ್ರ ಸೇತುವೆ ಬಳಿ ಹೋಗಿದ್ದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಗಲ್ಫಾಮ್ ಕಾರನ್ನು ಓಡಿಸುತ್ತಿದ್ದು, ಇಮ್ರಾನ್ ಬೋನೆಟ್ ಮೇಲೆ ಕುಳಿತಿದ್ದ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
@MumbaiPolice pic.twitter.com/yIUx5sikSH
— Amit Patil (@AmitPat33618488) January 31, 2022
ಕಾರ್ ಸ್ಟಂಟ್ ಮಾಡುತ್ತಿರುವುದನ್ನು ದಾರಿಹೋಕರೊಬ್ಬರು ವಿಡಿಯೋ ಚಿತ್ರೀಕರಿಸಿ ಅದನ್ನು ಟ್ವೀಟ್ ಮಾಡುವುದಲ್ಲದೇ, ಮುಂಬೈ ಪೊಲೀಸರ ಅಧಿಕೃತ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿದ್ದಾರೆ. ನಂತರ ಆ ಇಬ್ಬರು ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಬಿಳಿ ಬಣ್ಣದ ಕಾರಿನೊಳಗೆ ಜನರ ಗುಂಪು ಇರುವದನ್ನು ಕಾಣಬುಹುದು. ಒಬ್ಬ ವ್ಯಕ್ತಿ ಕಾರು ಚಲಾಯಿಸಿದರೇ, ಇನ್ನೊಬ್ಬ ಕಾರ್ ಬೋನೆಟ್ ಮೇಲೆ ಕುಳಿತಿದ್ದಾನೆ. ಯಾರು ಕೂಡ ಮಾಸ್ಕ ಧರಿಸಿಲ್ಲ ಮತ್ತು ಜೋರಾಗಿ ಕಿರುಚುವುದನ್ನು ವಿಡಿಯೋದಲ್ಲಿ ನೋಡಬಹುದು.
ಅಮಿತ್ ಪಾಟೀಲ್ ಎನ್ನುವವರು ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ದಯವಿಟ್ಟು ಕ್ರಮ ಕೈಗೊಳ್ಳಿ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕಾರು ಸೀ ಲಿಂಕ್‌ನಿಂದ ಬಾಂದ್ರಾ ಕಡೆಗೆ ಹೋಗುತ್ತಿತ್ತು ಎಂದು ಕೂಡಾ ಅವರು ಹೇಳಿದ್ದಾರೆ. ಈ ವಿಡಿಯೋ ಮುಂಬೈ ಪೊಲೀಸರಿಗೆ ತಲುಪಿದ ಬಳಿಕ ಕಾರಿನ ಚಾಲಕ ಹಾಗೂ ಅದರ ಬೋನೆಟ್ ಮೇಲೆ ಕುಳಿತ ವ್ಯಕ್ತಿಯನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಗುರುತಿಸಲು ಮತ್ತು ಬಂಧಿಸಲು ಕಾರಿನ ನೋಂದಣಿ ಸಂಖ್ಯೆಯನ್ನು ಪರಿಶೀಲಿಸಿದ್ದೇವೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
“ಕಾರು ನೋಂದಣಿ ಸಂಖ್ಯೆಯ ಆಧಾರದ ಮೇಲೆ, ನಾವು ಕುರ್ಲಾದಿಂದ ಇಮ್ರಾನ್ ಮತ್ತು ಗುಲ್ಫಾಮ್ ಅವರನ್ನು ಬಂಧಿಸಿದ್ದೇವೆ. ಆರೋಪಿಗಳಿಬ್ಬರೂ ಐಪಿಸಿಯ ಸೆಕ್ಷನ್ 279 (ಆತುರ ಮತ್ತು ನಿರ್ಲಕ್ಷ್ಯ ಚಾಲನೆ) ಮತ್ತು 336 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಯನ್ನು ಉಂಟುಮಾಡುವ ಕಾಯಿದೆ) ಅಡಿಯಲ್ಲಿ ಆರೋಪ ವಿಧಿಸಲಾಗಿದೆ ಎಂದು ಬಾಂದ್ರಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆನಂದರಾವ್ ಕಾಶಿದ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ತರಹದ ವಿಡಿಯೋಗಳು ಕಂಡುಬರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಸಾಕಷ್ಟು ವಿಡಿಯೋಗಳು ವೈರಲ್ ಆಗಿವೆ. ಕಳೆದ ವರ್ಷ, ಇಬ್ಬರು ವ್ಯಕ್ತಿಗಳು ಮೋಟಾರ್‌ಸೈಕಲ್ ಮೇಲೆ ತಮ್ಮ ಸಾಹಸದ ವೀಡಿಯೊ ವೈರಲ್ ಆಗಿತ್ತು. ಅವರನ್ನು ಸಹ ಮುಂಬೈ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ;
ಕೇರಳದ ಸ್ನೇಕ್ ಮ್ಯಾನ್ ವಾವಾ ಸುರೇಶ್ ಅವರ ಆರೋಗ್ಯದಲ್ಲಿ ಚೇತರಿಕೆ; ಇನ್ನೂ ಎರಡು ದಿನ ನಿಗಾ