ಇಸ್ಲಾಂ ಧರ್ಮದಲ್ಲಿ ಮಹಿಳೆಯರು ಹಿಜಾಬ್ ಧರಿಸುವುದು ಕಡ್ಡಾಯ. ಒಂದು ವೇಳೆ ಧಾರ್ಮಿಕ ಕಟ್ಟುಪಾಡುಗಳನ್ನು ಉಲ್ಲಂಘಿಸಿ ಅವರೇನಾದರೂ ಹಿಜಾಬ್ ಧರಿಸದೆ ಹೋದರೆ ಸಮಾಜದ ಕೆಂಗಣ್ಣಿಗೆ ಕೂಡಾ ಗುರಿಯಾಗುವುದುಂಟು. ಅದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ಮುಸ್ಲಿಂ ಇನ್ಫುಯೆನ್ಸರ್ ವಿಡಿಯೋ ಮಾಡುವಾಗ ಹಿಜಾಬ್ ಧರಿಸಿಲ್ಲವೆಂದು ಕೋಪಗೊಂಡ ಪೋಷಕರು ಆಕೆಗೆ ಮನ ಬಂದಂತೆ ಥಳಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪೋಷಕರ ವರ್ತನೆ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಈ ವಿಡಿಯೋವನ್ನು @OliLondonTv ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಟಿಕ್ ಟಾಕ್ ಲೈವ್ ಸ್ಟ್ರೀಮ್ ಅಲ್ಲಿ ತಲೆಗೆ ಹಿಬಾಜ್ ಧರಿಸದ ಕಾರಣ, ತನ್ನ ಹೆತ್ತವರಿಂದ ಥಳಿಸಲ್ಪಟ್ಟ ಮುಸ್ಲಿಂ ಇನ್ಫುಯೆನ್ಸರ್” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.
Muslim influencer gets severely beaten by her parents during a live stream- for not covering her hair with a scarf.
— Oli London (@OliLondonTV) May 8, 2024
ವೈರಲ್ ವಿಡಿಯೋದಲ್ಲಿ ಟಿಕ್ ಟಾಕ್ ಲೈವ್ ಅಲ್ಲಿ ಇನ್ಫುಯೆನ್ಸರ್ ತನ್ನ ಫಾಲೋವರ್ಸ್ ಜೊತೆಗೆ ಚಿಟ್ ಚಾಟ್ ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು. ವಿಡಿಯೋ ಮಾಡುವಾಗ ಆಕೆ ತುಂಡುಡುಗೆಯನ್ನು ಧರಿಸಿದ್ದಳು. ಮುಸ್ಲಿಂ ಯುವತಿಯಾಗಿ ತುಂಡುಡುಗೆ ಧರಿಸಿದ್ದು ಮಾತ್ರವಲ್ಲದೆ ಎದೆಗೆ ಶಾಲು, ತಲೆಗೆ ಹಿಜಾಬ್ ಧರಿಸಿದರೆ ಇರುವುದನ್ನು ಕಂಡ ಆಕೆಯ ಪೋಷಕರು ಕೋಪಗೊಂಡು ಲೈವ್ ಅಲ್ಲಿಯೇ ಆಕೆಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಇದನ್ನೂ ಓದಿ: ತ್ರಿವಳಿ ತಲಾಖ್ನಿಂದ ನೊಂದು ಹಿಂದೂ ಯುವಕನೊಂದಿಗೆ ಮದುವೆಯಾದ ಮುಸ್ಲಿಂ ಮಹಿಳೆ
ಮೇ 08 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4.2 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಯುವತಿಯ ಪೋಷಕರ ಈ ಅತಿರೇಕದ ವರ್ತನೆ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ