Viral Video: ತುಸು ವಿಶ್ರಾಂತಿ ಪಡೆಯೋಣ ಬಾ ಕಂದ; ತಾಯಿ ಮತ್ತು ಕುಟುಂಬದೊಂದಿಗೆ ಹಾಯಾಗಿ ಮಲಗಿ ವಿಶ್ರಾಂತಿ ಪಡೆದ ಮರಿ ಆನೆ
ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧಿಸಿದ ವಿಡಿಯೋ ತುಣುಕುಗಳು ಹರಿದಾಡುತ್ತಿರುತ್ತವೆ. ಸದ್ಯ ಅಂತಹದ್ದೇ ಮುದ್ದಾದ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.
ಪ್ರಾಣಿ ಪಕ್ಷಿಗಳಿಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಹರಿದಾಡುತ್ತಿರುತ್ತವೆ. ಅದರಲ್ಲೂ ಆನೆಗಳ ವಿಡಿಯೋಗಳಂತೂ ನೋಡುಗರಿಗೆ ತುಂಬಾನೇ ಇಷ್ಟವಾಗುತ್ತದೆ. ಆನೆಗಳ ಆಟ, ತುಂಟಾಟ, ತಾಯಿ ಆನೆಯೊಂದಿಗೆ ಮರಿಯಾನೆಯ ಕಸರತ್ತು ಹೀಗೆ ಆನೆಗಳು ಮುದ್ದು ಪೆದ್ದು ಆಟವನ್ನು ನೋಡುವುದೇ ಚೆಂದ. ಸದ್ಯ ಅಂತಹದ್ದೇ ಮುದ್ದಾದ ವಿಡಿಯೋ ಇದೀಗ ವೈರಲ್ ಆಗಿದ್ದು, ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.
ತಮಿಳುನಾಡಿನ ಅಣ್ಣಾಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಸುಂದರವಾದ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಈ ಮುದ್ದಾದ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರೀಯಾ ಸಹು (@supriyasahuias) ತಮ್ಮ ಅಧೀಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಸುಂದರವಾದ ಆನೆ ಕುಟುಂಬವೊಂದು ಹಾಯಾಗಿ ನಿದ್ರಿಸುತ್ತಿದೆ. ಮರಿ ಆನೆಗೆ ಕುಟುಂಬದಿಂದ Z+ ಭದ್ರತೆಯನ್ನು ಹೇಗೆ ನೀಡಲಾಗಿದೆ ಗಮನಿಸಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
A beautiful elephant family sleeps blissfully somwhere in deep jungles of the Anamalai Tiger Reserve in Tamil Nadu. Observe how the baby elephant is given Z class security by the family. Also how the young elephant is checking the presence of other family members for reassurance.… pic.twitter.com/sVsc8k5I3r
— Supriya Sahu IAS (@supriyasahuias) May 16, 2024
ಇದನ್ನೂ ಓದಿ: ಒಂದು ದೇಹ ಎರಡು ಜೀವ; ಮೂರು ಕಾಲು, ನಾಲ್ಕು ಕೈ, ಒಂದು ಶಿಶ್ನ ಸಯಾಮಿ ಅವಳಿ ಮಕ್ಕಳ ಜನನ
ವೈರಲ್ ವಿಡಿಯೋದಲ್ಲಿ ಅಣ್ಣಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆಗಳ ಕುಟುಂಬವೊಂದು ಹಾಯಾಗಿ ಮಲಗಿರುವ ದೃಶ್ಯವನ್ನು ಕಾಣಬಹುದು. ಮರಿಯಾನೆಯನ್ನು ಮಧ್ಯದಲ್ಲಿ ಮಲಗಿಸಿ ಉಳಿದ ನಾಲ್ಕು ಆನೆಗಳು ಮರಿಯಾನೆಯ ಸುತ್ತಲೂ ಮಲಗಿ ತಮ್ಮ ಮಗುವಿಗೆ ಅಪಾಯವಾಗದಂತೆ ರಕ್ಷಣೆ ಒದಗಿಸಿವೆ. ಇಂದು ಬೆಳಗ್ಗೆ ಹಂಚಿಕೊಳ್ಳಲಾದ ಈ ವಿಡಿಯೋ ಮೂರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಆನೆಗಳು ವಿಶ್ರಾಂತಿ ಪಡೆಯುತ್ತಿರುವ ಮುದ್ದಾದ ದೃಶ್ಯ ಪ್ರಾಣಿ ಪ್ರಿಯರ ಮನಗೆದ್ದಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ