Viral: ಆಕೆ ಹಿಂದೂ, ಅವಳನ್ನು ಕೊಲ್ಲುವೆ ಎಂದು ಶಿಕ್ಷಕಿಯ ಮುಂದೆಯೇ ಬೆದರಿಕೆ ಹಾಕಿದ ಬಾಲಕಿ
ಆಘಾತಕಾರಿ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಮುಸ್ಲಿಂ ಶಾಲಾ ಬಾಲಕಿಯೊಬ್ಬಳು ತನ್ನ ಸಹಪಾಠಿ ಹಿಂದೂ ಎಂಬ ಕಾರಣಕ್ಕೆ ಆಕೆಯನ್ನು ತಾನು ದೊಡ್ಡವಳಾದ ಮೇಲೆ ಕೊಲ್ಲುತ್ತೇನೆ ಶಿಕ್ಷಕಿಯ ಮುಂದೆಯೇ ಹೇಳಿಕೊಂಡಿದ್ದಾಳೆ. ಪುಟ್ಟ ಹುಡುಗಿಯ ಬಾಯಲ್ಲಿ ಈ ದ್ವೇಷ ಪೂರಿತ ಮಾತುಗಳನ್ನು ಕೇಳಿ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ಪುಟ್ಟ ಪುಟ್ಟ ಮಕ್ಕಳಲ್ಲಿ ಜಾತಿ ಭೇದಗಳಾಗಿರಲಿ ಅಥವಾ ಧರ್ಮದ ಬಗ್ಗೆ ದ್ವೇಷಗಳಾಗಿರಲಿ ಇದ್ಯಾವುದು ಕಾಣ ಸಿಗುವುದಿಲ್ಲ. ಆ ಪುಟಾಣಿ ಮಕ್ಕಳು ಎಲ್ಲರನ್ನೂ ಸಮಾನವಾಗಿಯೇ ಕಾಣುತ್ತಾರೆ. ಆದ್ರೆ ಇಲ್ಲೊಂದು ಅದಕ್ಕೆ ತದ್ವಿರುದ್ಧ ಘಟನೆ ನಡೆದಿದ್ದು, ಮುಸ್ಲಿಂ ಶಾಲಾ ಬಾಲಕಿಯೊಬ್ಬಳು ತನ್ನ ಸಹಪಾಠಿ ಹಿಂದೂ ಎಂಬ ಕಾರಣಕ್ಕೆ ಆಕೆಯನ್ನು ತಾನು ದೊಡ್ಡವಳಾದ ಮೇಲೆ ಕೊಲ್ಲುತ್ತೇನೆ ಶಿಕ್ಷಕಿಯ ಮುಂದೆ ಹೇಳಿಕೊಂಡಿದ್ದಾಳೆ. ಈ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ಪುಟ್ಟ ಹುಡುಗಿಯ ಬಾಯಲ್ಲಿ ಈ ದ್ವೇಷಪೂರಿತ ಮಾತುಗಳನ್ನು ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.
ಶಿಕ್ಷಕಿಯೊಂದಿಗೆ ಮಾತನಾಡುತ್ತಾ ನಿಂತ ಮುಸ್ಲಿಂ ಶಾಲಾ ಬಾಲಕಿಯೊಬ್ಬಳು ತನ್ನ ಸಹಪಾಠಿ ಪಲ್ಲವಿ ಹಿಂದೂ ಎಂಬ ಕಾರಣಕ್ಕೆ ಆಕೆಯನ್ನು ನಾನು ದೊಡ್ಡವಳಾದ ಮೇಲೆ ಬಂದೂಕಿನಿಂದ ಸಾಯಿಸುತ್ತೇನೆ. ನಮ್ಮ ಮನೆಯಲ್ಲಿ ಬಂದೂಕು ಇದೆ ಎಂದು ಹೇಳಿದ್ದಾಳೆ. ಬಾಲಕಿಯ ದ್ವೇಷಪೂರಿತ ಮಾತುಗಳ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಈ ಘಟನೆ ಎಲ್ಲಿ ನಡೆದಿದ್ದು, ಎಂಬುದರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
A viral video claiming a little muslim girl telling her school teacher that Pallavi is a Hindu, I will kill her. I have a weapon at home!
Listen to the entire conversation and think who is filling poison inside such little kids ? pic.twitter.com/FgcmuNyvhp
— Megh Updates 🚨™ (@MeghUpdates) September 24, 2024
ಈ ಕುರಿತ ಪೋಸ್ಟ್ ಒಂದನ್ನು MeghUpdates ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಪಲ್ಲವಿ ಹಿಂದೂ, ನಾನು ಅವಳನ್ನು ಕೊಲ್ಲುತ್ತೇನೆ ಎಂದು ಮುಸ್ಲಿಂ ಬಾಲಕಿಯೊಬ್ಬಳು ತನ್ನ ಶಿಕ್ಷಕಿಗೆ ಹೇಳಿದ್ದಾಳೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಶಾಲಾ ಬಾಲಕಿಯೊಬ್ಬ ತನ್ನ ಶಿಕ್ಷಕಿಯೊಂದಿಗೆ ಮಾತುಕತೆ ನಡೆಸುತ್ತಿರುವ ದೃಶ್ಯವನ್ನು ಕಾಣಬಹುದು. ಪಲ್ಲವಿ ಹಿಂದೂ ಅಲ್ವಾ, ನಾನು ದೊಡ್ಡವಳಾದ ಮೇಲೆ ಆಕೆಯನ್ನು ಸಾಯಿಸುತ್ತೇನೆ, ನನ್ನ ಮನೆಯಲ್ಲಿ ಬಂದೂಕು ಇದೆ ಅದರಲ್ಲಿಯೇ ಅವಳನ್ನು ಸಾಯಿಸ್ತೇನೆ ಎಂದು ಮುಸ್ಲಿಂ ಬಾಲಕಿ ಹೇಳಿದ್ದಾಳೆ. ಮತ್ತು ಶಿಕ್ಷಕಿ ನೀನು ಯಾವ ದೇವರನ್ನು ಪೂಜಿಸುತ್ತೀಯಾ ಎಂದು ಆ ಬಾಲಕಿಯ ಬಳಿ ಕೇಳಿದಾಗ ಆಕೆ ಅಲ್ಲಾ ಎಂದು ಉತ್ತರಿಸಿ, ಅಲ್ಲಾನನ್ನು ಪೂಜಿಸದವರು ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾಳೆ.
ಇದನ್ನೂ ಓದಿ: ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡಲು ಕುಳಿತ ಸ್ಪೈಡರ್ ಮ್ಯಾನ್
ಇಂದು ಮಧ್ಯಾಹ್ನ ಹಂಚಿಕೊಳ್ಳಲಾದ ಈ ವಿಡಿಯೋ 35 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಪೋಷಕರು ಮಕ್ಕಳಿಗೆ ಇದನ್ನೇ ಕಲಿಸುತ್ತಾರಾ?ʼ ಎಂಬ ಪ್ರಶ್ನೆ ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮಕ್ಕಳಿಗೆ ಹೀಗೆ ಇನ್ನೊಂದು ಧರ್ಮದ ಬಗ್ಗೆ ದ್ವೇಷ ಭಾವವನ್ನು ಕಲಿಸುವ ಬದಲು ಗೌರವ, ಉತ್ತಮ ಸಂಸ್ಕಾರ ಕಲಿಸಿʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮಕ್ಕಳಲ್ಲೂ ಇದೆಂಥಾ ದೇಷ್ವ ಭಾವನೆʼ ಎಂದು ಕಾಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:18 pm, Tue, 24 September 24